ನ್ಯೂಸ್

ಆಡಿಷನ್​ನಲ್ಲಿ ರಿಜೆಕ್ಟ್​ ಆಗಿ ‘ಬಾಬಿ‘ಗೆ ಸೆಲೆಕ್ಟ್​ ಆಗಿದ್ದೇಗೆ?; ಅಸಲಿ ಸಂಗತಿ ಬಿಚ್ಚಿಟ್ಟ ಡಿಂಪಲ್​​​ ಕಪಾಡಿಯಾ

ಮುಂಬೈ: ಬಾಲಿವುಡ್​​ನ ಬಾಬಿ ಅಂದರೆ ಡಿಂಪಲ್​ ಕಪಾಡಿಯಾ, 80ರ ದಶಕದ ಸುಂದರ ನಾಯಕಿಯರಲ್ಲಿ ಇವರ ಒಬ್ಬರು. ಸಾಕಷ್ಟು ಧೈರ್ಯಶಾಲಿಯಾದ ಡಿಂಪಲ್​ ಕಪಾಡಿಯಾ ಆ ಸಮಯದಲ್ಲೇ ತಮ್ಮ ಮೊದಲ ಚಿತ್ರದಲ್ಲೇ ಬಿಕಿನಿ ತೊಟ್ಟು ಸೈ ಎನ್ನಿಸಿಕೊಂಡಿದ್ದರು. ಅವರ ಮೊದಲ ಸಿನಿಮಾ ಬಾಬಿ ಸೂಪರ್​ ಹಿಟ್​ ಆಗಿ ಬಾಕ್ಸ್​ ಆಫೀಸ್​ ದಾಖಲೆಗಳನ್ನು ಮುರಿದಿತ್ತು.

ಇದನ್ನು ಓದಿ: ‘ಹಾಯ್​ ನಾನ್ನಾ’ ನಿರ್ದೇಶಕನ ಮುಂದಿನ ಸಿನಿಮಾದಲ್ಲಿ ಜೂ.ಎನ್​ಟಿಆರ್​ ನಾಯಕ; ಶೌರ್ಯುವ್​​ ಹೇಳಿದ್ದೇನು?

ಅಂದ್ಹಾಗೆ ಈ ಸಿನಿಮಾದ ಸ್ಕ್ರೀನ್​ ಟೆಸ್ಟ್​​ನಲ್ಲಿ ಡಿಂಪಲ್​​​ ಕಪಾಡಿಯಾ ರಿಜೆಕ್ಟ್​ ಆಗಿದ್ದರಂತೆ. ಮತ್ತೆ ಆ ಸಿನಿಮಾಗೆ ಸೆಲೆಕ್ಟ್ ಆಗಿದ್ದು ಹೇಗೆ ಎಂದು ಸ್ವತಃ ಡಿಂಪಲ್​ ಕಪಾಡಿಯಾ ಅವರೇ ಖಾಸಗಿವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಬಾಬಿ ಸಿನಿಮಾದ ಅನುಭವ ನನಗೆ ತುಂಬಾ ವಿಭಿನ್ನ ಮತ್ತು ವಿಶಿಷ್ಟವಾಗಿತ್ತು. ಇದು ನನ್ನ ಜೀವನದ ಅತ್ಯಂತ ಸುಂದರ ಸಮಯ ಡಿಂಪಲ್​ ಕಪಾಡಿಯಾ ಎಂದು ಹೇಳಿದ್ದಾರೆ. ಒಮ್ಮೆ ನಾನು ಶಾಲೆಯಲ್ಲಿ ಪೇಪರ್ ಓದುತ್ತಿದ್ದಾಗ ನನ್ನ ಕೆಲವು ಸ್ನೇಹಿತರು ರಾಜ್ ಕಪೂರ್ ಬಾಬಿ ಸಿನಿಮಾಗೆ ಹೊಸ ಹುಡುಗಿಯನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು. ಅವರಿಗೆ ನಾನೇ ಬಾಬಿ ಎಂದು ಹೇಳಿದ್ದು ಇನ್ನು ನೆನಪಿದೆ. ಬಳಿಕ ನಾನು ಆಡಿಷನ್‌ಗೆ ಹೋಗಿದ್ದೆ, ಆರಂಭದಲ್ಲಿ ಸ್ಕ್ರೀನ್ ಟೆಸ್ಟ್​​ನಲ್ಲಿ ರಿಜೆಕ್ಟ್​ ಆಗಿದ್ದೆ ಎಂದು ಹೇಳಿದ್ದಾರೆ.

ಆಡಿಷನ್​ ಸಮಯದಲ್ಲಿ ನನ್ನನ್ನು ನೋಡಿ ಚಿಂಟು (ರಿಷಿ ಕಪೂರ್‌)ಗಿಂತ ತುಂಬಾ ವಯಸ್ಸಾಗಿ ಕಾಣುತ್ತೇನೆ ಎಂದು ಹೇಳಿ ನನ್ನನ್ನು ತಿರಸ್ಕರಿಸಿದರು. ಆ ಸಮಯದಲ್ಲಿ ನಾನು ನನ್ನ ಡೈರಿಯಲ್ಲಿ ರಾಮ್ ರಾಮ್ ಎಂದು ಬರೆಯುತ್ತಿದ್ದೆ. ಹೇಗಾದರೂ ಮಾಡಿ ಆ ಚಿತ್ರ ಸಿಗಬಹುದು ಎಂದುಕೊಂಡೆ. ಮುಂದೆ ಏನಾಯಿತೋ ಗೊತ್ತಿಲ್ಲ. ರಾಜ್ ಕಪೂರ್ ನನ್ನನ್ನು ಹಿಂದಕ್ಕೆ ಕರೆದರು. ಆ ನಂತರ ಎಲ್ಲವೂ ಸುಸೂತ್ರವಾಗಿ ನಡೆಯಿತು ಎಂದು ತಿಳಿಸಿದರು. (ಏಜೆನ್ಸೀಸ್​​)