ಉತ್ತರಪ್ರದೇಶ: ಶಿಥಿಲಗೊಂಡ ಶಾಲಾ ಕಟ್ಟಡದ ಒಂದು ಭಾಗವು ಕಾರ್ಮಿಕನ ಮೇಲೆ ದಿಢೀರ್ ಕುಸಿತವಾಗಿದ್ದು, ಘಟನೆಯಲ್ಲಿ 22 ವರ್ಷದ ಕಾರ್ಮಿಕ ಮೃತಪಟ್ಟಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಈ ದುರ್ಘಟನೆ ಉತ್ತರಪ್ರದೇಶದ ಇಟಾವಾದಲ್ಲಿ ಸಂಭವಿಸಿದೆ.
ಜಜೆಪುರ ಗ್ರಾಮದ ಶಾಲೆಯೊಂದರ ಕಟ್ಟಡವನ್ನು ಕೆಡವುವ ಕಾರ್ಯ ನಡೆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಸಹಸೌನ್ ಸ್ಟೇಷನ್ ಹೌಸ್ ಆಫೀಸರ್ (SHO) ವಿಷ್ಣುಕಾಂತ್ ತಿಳಿಸಿದ್ದಾರೆ.
ಕಟ್ಟಡದ ಒಂದು ಭಾಗ ದಿಢೀರ್ ಕುಸಿದು ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಮೃತ ಯುವಕನ ತಂದೆ ಸ್ವಲ್ಪದರಲ್ಲೇ ಸಾವಿನಿಂದ ಪಾರಾಗಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ವಿಚಾರಣೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿಷ್ಣುಕಾಂತ್ ಹೇಳಿದರು,(ಏಜೆನ್ಸೀಸ್).