ನ್ಯೂಸ್

ಸಿಮ್​ ಕಾರ್ಡ್​ ಕೆವೈಸಿ ಇನ್ನು ಪೂರ್ಣ ಡಿಜಿಟಲ್​; ಜ.1ರಿಂದಲೇ ಅನ್ವಯ

Bengaluru - General - Rama Kishan K V

ನವದೆಹಲಿ: ಸಿಮ್​ ಕಾರ್ಡ್​ ಕೆವೈಸಿ ಇನ್ನು ಮುಂದೆ ಸಂಪೂರ್ಣ ಡಿಜಿಟಲ್​ ಆಗಲಿದ್ದು, ಈ ಬದಲಾವಣೆ ಜ. 1ರಂದೇ ಜಾರಿಗೆ ಬರಲಿದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ಮೊಬೈಲ್​ ಫೋನ್​ ಬಳಕೆದಾರರ ದಾಖಲಾತಿಗಾಗಿ ಕಾಗದ ಆಧಾರಿತ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಇದೇ ಡಿ. 31ಕ್ಕೆ ಕೊನೆಯಾಗಲಿದ್ದು, ಜ. 1ರಿಂದ ಇದು ಸಂಪೂರ್ಣವಾಗಿ ಡಿಜಿಟಲ್​ ರೂಪದಲ್ಲಿ ನಡೆಯಲಿದೆ.

ಇದು ಟೆಲಿಕಾಂ ಆಪರೇಟರ್​ಗಳ ಖರ್ಚು ತಗ್ಗಿಸುವ ಜತೆಗೆ, ಆನ್​ಲೈನ್​ ವಂಚನೆ ತಡೆದು, ಭದ್ರತೆ ಹೆಚ್ಚಿಸುವುದರಿಂದ ಈ ಕ್ರಮ ಜಾರಿಗೆ ತರಲಾಗುತ್ತಿದೆ. ಸದ್ಯದ ಪ್ರಕ್ರಿಯೆ ಕಾಗದದ ಅರ್ಜಿ, ಫೋಟೋ ಅಳವಡಿಕೆ, ಗುರುತು ಮತ್ತು ವಿಳಾಸದ ಕುರಿತು ಕಾಗದ ರೂಪದ ಪ್ರಮಾಣಪತ್ರಗಳನ್ನು ಒಳಗೊಂಡಿದೆ. ಆದರೆ ಹೊಸ ಬದಲಾವಣೆ ಬಳಿಕ ಇವೆಲ್ಲವೂ ಡಿಜಿಟಲ್​ ರೂಪದಲ್ಲಿ ನಡೆಯಲಿವೆ.