Number Plates: ಭಾರತೀಯ ವಾಹನಗಳಲ್ಲಿ ಕಂಡುಬರುವ ಇಂತಹ ನಂಬರ್ ಪ್ಲೇಟ್ಗಳು ಬಹಳ ವಿಶೇಷವಾಗಿವೆ. ಸಾಮಾನ್ಯವಾಗಿ ಆಯಾ ರಾಜ್ಯಗಳ ಹೆಸರಿನಲ್ಲಿರುವ ಅಕ್ಷರಗಳನ್ನೇ ಮೊದಲಗಿಡುವ ಸರ್ಕಾರಗಳು, ಈ ವಾಹನ ತಮ್ಮ ರಾಜ್ಯಕ್ಕೆ ಸೇರಿದ್ದು ಎಂಬುದನ್ನು ಪೊಲೀಸರಿಗೆ ಹಾಗೂ ಸವಾರರಿಗೆ ಸುಲಭವಾಗಿ ಪತ್ತೆಹಚ್ಚುವಂತೆ ಮಾಡುತ್ತದೆ. ಕೇವಲ ಒಂದು ನಂಬರ್ ಪ್ಲೇಟ್ನಿಂದಲೇ ಈ ವಾಹನ ಯಾವ ರಾಜ್ಯದಿಂದ ಬಂದಿದ್ದು, ಯಾಕಾಗಿ ಇಲ್ಲಿಗೆ ಬಂತು? ಯಾರಿಗೆ ಸೇರಿದ್ದು ಎಂಬ ಸಂಪೂರ್ಣ ಮಾಹಿತಿ ಕ್ಷಣಮಾತ್ರದಲ್ಲಿ ಸಿಕ್ಕಿಬಿಡುತ್ತದೆ. ಅಷ್ಟು ಮಾಹಿತಿಯನ್ನು ಒಳಗೊಂಡಿರುವ ಈ ಸಂಖ್ಯೆಗಳ ಹಿಂದೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.
ಇದನ್ನೂ ಓದಿ: ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker
ಕೆಎ ಅಂದರೆ ಕರ್ನಾಟಕ, ಎಂಚ್ ಎಂದಿದ್ದರೆ ಈ ವಾಹನ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪ್ರತಿಯೊಬ್ಬರು ಸುಲಭವಾಗಿ ಕಂಡು ಹಿಡಿಯುತ್ತಾರೆ. ಆದರೆ, ಕೆಲವೊಂದು ವಾಹನಗಳಲ್ಲಿ 22 ಬಿಎಚ್ ಮತ್ತು ಒಂದಂಕಿ ನಂಬರ್ಗಳು ವಿಚಿತ್ರವಾಗಿ ಕಾಣಿಸುವುದರ ಜತೆಗೆ ತಲೆಗೆ ದೊಡ್ಡ ಹುಳ ಬಿಡುತ್ತದೆ. ಇದು ಯಾವ ರಾಜ್ಯದ ಸಂಖ್ಯೆ? ಏಕೆ ಹೀಗಿದೆ ಎಂಬ ಹತ್ತು ಹಲವು ವಿಷಯಗಳು ಗೋಚರಿಸುವಂತೆ ಮಾಡುತ್ತದೆ. ಅಸಲಿಗೆ ಈ ವಿಶೇಷ ಅಂಕಿ ಮತ್ತು ಅದರಲ್ಲಿರುವ ಬಣ್ಣಗಳು ಒಂದೊಂದು ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತದೆ.
ಈ ನಂಬರ್ ಪ್ಲೇಟ್ ಇದು ಖಾಸಗಿ ವಾಹನ ಎಂಬುದನ್ನು ಹೇಳುತ್ತದೆ.
ರಾಜ್ಯವನ್ನು ಸೂಚಿಸುವ ಅಕ್ಷರಗಳ ಪಕ್ಕ ಇನ್ನೆರೆಡು ಅಕ್ಷರಗಳಿದ್ದರೆ ಅದನ್ನು ವಿಂಟೇಜ್ ಕಾರು ಎನ್ನಲಾಗುತ್ತೆ.
ವೈಟ್ ಬೋರ್ಡ್ನಲ್ಲಿರುವ ಸಂಖ್ಯೆ ಹಳದಿ ಬಣ್ಣದಲ್ಲಿದ್ದರೆ ಅದು ವಾಣಿಜ್ಯ ಬಳಕೆಗಾಗಿ ಮೀಸಲಿರುವ ವಾಹನ.
ಈ ವಿಶೇಷ ಸಂಖ್ಯೆಯನ್ನು ಹೊಂದಿರುವ ವಾಹನವನ್ನು ಭಾರತ್ ಸಿರೀಸ್ ಎಂದು ಹೇಳಲಾಗುತ್ತೆ.
ಹಸಿರು ಬಣ್ಣದ ನಂಬರ್ ಪ್ಲೇಟ್ನಲ್ಲಿ ಅಂಕಿಗಳನ್ನು ಹಳದಿ ಬಣ್ಣದಲ್ಲಿ ಮುದ್ರಿಸಲಾಗಿದೆ ಎಂದರೆ ಅದು ವಾಣಿಜ್ಯ ಎಲೆಕ್ಟ್ರಿಕ್ ವಾಹನ.
ಕಪ್ಪು ಬಣ್ಣದ ಬೋರ್ಡ್ನಲ್ಲಿ ಹಳದಿ ಅಂಕಿಗಳಿದ್ದರೆ ಅದು ಬಾಡಿಗೆಗೆ ಮೀಸಲಿರುವ ವಾಹನ.
ಹಸಿರು ಬಣ್ಣದ ನಂಬರ್ ಪ್ಲೇಟ್ನಲ್ಲಿರುವ ಅಂಕಿಗಳು ಕಪ್ಪು ಬಣ್ಣದಲ್ಲಿವೆ ಎಂದರೆ ಅದನ್ನು ಎಲೆಕ್ಟ್ರಿಕ್ ವಾಹನ ಎಂದು ಗುರುತಿಸಲಾಗುತ್ತದೆ.
ಈ ರೀತಿಯ ನೀಲಿ ನಂಬರ್ ಬೋರ್ಡ್ ಅನ್ನು ಡಿಪ್ಲೋಮೆಟ್ ವೆಹಿಕಲ್ ಎಂದು ಕರೆಯಲಾಗುತ್ತದೆ.
ಬಿಳಿ ಬಣ್ಣದ ಅಂಕಿಯಿರುವ ಕೆಂಪು ಬಣ್ಣದ ಬೋರ್ಡ್ ಅನ್ನು ತಾತ್ಕಾಲಿಕ ನೋಂದಣಿ ಸಂಖ್ಯೆ ಎನ್ನಲಾಗುತ್ತದೆ.
ಇನ್ನು ಭಾರತ ಸರ್ಕಾರದ ಚಿಹ್ನೆಯಿರುವ ಕೆಂಪು ಬಣ್ಣದ ನಂಬರ್ ಪ್ಲೇಟ್ ರಾಷ್ಟ್ರಪತಿಗಳ ವಾಹನ ಎಂದು ಸೂಚಿಸುತ್ತದೆ.
ಈ ರೀತಿ ಬಾಣದ ಗುರುತನ್ನು ಹೊಂದಿರುವ ನಂಬರ್ ಪ್ಲೇಟ್ಗಳು ಸೇನಾ ವಾಹನ ಎಂದು ಗುರುತಿಸುತ್ತದೆ.