ಮಹಿಳಾ ಪೊಲೀಸ್‌ಗೆ ‘ದೀದಿ’ ಎಂದು ಮನವಿ ಮಾಡುತ್ತಿರುವ ವೈರಲ್ ವಿಡಿಯೋ 
ನ್ಯೂಸ್

‘ದೀದಿ, ಚಿಕ್ಕ ತಮ್ಮನಿಗಾಗಿ ಇಷ್ಟೂ ಮಾಡಲ್ವಾ?’; ಮಹಿಳಾ ಪೊಲೀಸ್ ಮುಂದೆ ಪತ್ರಕರ್ತನ ಕ್ಯೂಟ್ ರಿಕ್ವೆಸ್ಟ್ | Delhi SIR Protest

ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದ ಯುವಕನೊಬ್ಬ, ಮಹಿಳಾ ಪೊಲೀಸ್ ಸಿಬ್ಬಂದಿಗೆ ‘ದೀದಿ, ನನ್ನನ್ನ ಬಿಟ್ಟುಬಿಡಿ’ ಎಂದು ಮನವಿ ಮಾಡಿದ್ದಾನೆ. ಈ ಫನ್ನಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Delhi Police: ‘ದೀದಿ, ಚಿಕ್ಕ ತಮ್ಮನಿಗಾಗಿ ಇಷ್ಟೂ ಮಾಡಕ್ಕಾಗಲ್ವಾ?’ ಅಂತ ಮಹಿಳಾ ಪೊಲೀಸ್ ಸಿಬ್ಬಂದಿಗೆ ಪದೇ ಪದೆ ಮನವಿ ಮಾಡ್ತಿದ್ದ ವ್ಯಕ್ತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದರು.

ತಾನು ಪತ್ರಕರ್ತ ಎಂದು ಹೇಳಿಕೊಂಡಿರುವ ಅನುಜ್ ಭಗತ್ ಎಂಬಾತ, ಬಸ್‌ನಲ್ಲಿದ್ದ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾನೆ. ಹೊರಗಿದ್ದ ಪ್ರತಿಭಟನಾಕಾರರು ಬಸ್‌ನ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದರೆ, ಮಹಿಳಾ ಪೊಲೀಸ್ ಸಿಬ್ಬಂದಿ ಬಾಗಿಲು ಮುಚ್ಚಿ ಹಿಡಿಯಲು ಹರಸಾಹಸ ಪಡುತ್ತಿದ್ದರು.

ದೀದಿ, ಚಿಕ್ಕ ತಮ್ಮನಿಗಾಗಿ ಇಷ್ಟೂ ಮಾಡಕ್ಕಾಗಲ್ವಾ?

ಈ ವೇಳೆ ಅನುಜ್ ಭಗತ್, ‘ದೀದಿ, ಚಿಕ್ಕ ತಮ್ಮನಿಗಾಗಿ ಇಷ್ಟೂ ಮಾಡಕ್ಕಾಗಲ್ವಾ?’ ಎಂದು ಪದೇ ಪದೆ ಕೇಳಿದ್ದಾನೆ. ಜೊತೆಗೆ, ನಿಮ್ಮನ್ನು ನಾನು ನನ್ನ ಅಕ್ಕನಂತೆ ನೋಡ್ತೀನಿ ಎಂದು ಹೇಳುತ್ತಾ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೊಗಳಿದ್ದಾನೆ.

ಹೊರಗೆ ಪ್ರತಿಭಟನಾಕಾರರು ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದರೂ, ಪೊಲೀಸ್ ಸಿಬ್ಬಂದಿ ಕರ್ತವ್ಯ ಮಾಡುತ್ತಿರುವುದನ್ನು ಆತ ಮೆಚ್ಚಿಕೊಂಡಿದ್ದಾನೆ. ‘ದೆಹಲಿ ಪೊಲೀಸ್‌ನಲ್ಲಿರುವ ಮಹಿಳೆಯರಿಗೆ ಸಲಾಂ’ ಎಂದು ಹೇಳಿದ್ದಾನೆ. ಗಲಾಟೆಯ ನಡುವೆಯೂ ಮಹಿಳಾ ಪೊಲೀಸ್ ಸಿಬ್ಬಂದಿ ಯಾವುದೇ ಕೆಟ್ಟ ಪದ ಬಳಸದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಕೂಡ ಆತ ಹೊಗಳಿದ್ದಾನೆ.

ನಾವು ಪತ್ರಕರ್ತರು, ಏನೂ ಮಾಡ್ತಿಲ್ಲ

ಇನ್ನೊಬ್ಬ ಮಹಿಳಾ ಪೊಲೀಸ್ ಸಿಬ್ಬಂದಿ ಬಂದು ಬಾಗಿಲು ಮುಚ್ಚಲು ಸಹಾಯ ಮಾಡಿದಾಗಲೂ ಅನುಜ್ ತನ್ನ ಮನವಿಯನ್ನು ಮುಂದುವರಿಸಿದ್ದಾನೆ. ‘ನಾನು ಪೊಲೀಸರನ್ನು ಹೇಗೆ ತೆಗೆಯಲಿ? ನೀವೇ ನನ್ನ ಅಕ್ಕಂದಿರು, ನಾನು ನಿಮ್ಮನ್ನು ಗೌರವಿಸುತ್ತೀನಿ’ ಎಂದು ಹೇಳಿದ್ದಾನೆ. ಆ ಬಳಿಕ, ‘ದೀದಿ, ನಾವು ಪತ್ರಕರ್ತರು, ನಾವು ಏನೂ ಮಾಡ್ತಿಲ್ಲ’ ಎಂದು ಹೇಳಿ ತನ್ನನ್ನು ಬಿಡುಗಡೆ ಮಾಡುವಂತೆ ಮತ್ತೆ ಮನವಿ ಮಾಡಿದ್ದಾನೆ. ಹೊರಗಡೆ ಪ್ರತಿಭಟನಾಕಾರರು ಬಾಗಿಲು ತೆರೆಯಲು ಪ್ರಯತ್ನಿಸುತ್ತಿರುವ ದೃಶ್ಯವೂ ವಿಡಿಯೋದಲ್ಲಿ ಕಾಣಿಸುತ್ತದೆ.

ಈ ವಿಡಿಯೋವನ್ನು ಅನುಜ್ ಭಗತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆತನ ಮಾತಿನ ಶೈಲಿ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಪದೇ ಪದೆ ‘ದೀದಿ’ ಎಂದು ಕರೆದು ಮನವಿ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ.

ನನ್ನ ಸ್ನೇಹಿತರು ಬಸ್‌ನಲ್ಲಿದ್ದಾರೆ

ಇದಕ್ಕೂ ಮೊದಲು ಹಂಚಿಕೊಂಡಿದ್ದ ಮತ್ತೊಂದು ವಿಡಿಯೋದಲ್ಲೂ ಇದೇ ವ್ಯಕ್ತಿ ಪೊಲೀಸರ ಬಳಿ ಬಸ್ ಒಳಗೆ ಹೋಗಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ‘ದಯವಿಟ್ಟು ನನ್ನನ್ನು ಬಸ್ ಒಳಗೆ ಬಿಡಿ, ನನ್ನ ಸ್ನೇಹಿತರು ಒಳಗಿದ್ದಾರೆ’ ಎಂದು ಆತ ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಬಳಿಕ ಆತ ಬಸ್ ಒಳಗೆ ಹೋಗಿದ್ದಾನೆ ಎನ್ನಲಾಗಿದೆ.

ಸಿಇಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆ

ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ದೇಶದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ.

ಇದನ್ನೂ ಓದಿ: ಇರುವೆಗಳೇ ಇಲ್ಲದಿದ್ರೆ ಭೂಮಿ ಏನಾಗುತ್ತೆ? ಈ ಪುಟ್ಟ ಜೀವಿಗಳ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ! | Ants Importance

ಗಾಂಧಿ ಜಯಂತಿಯಾದ ಅಕ್ಟೋಬರ್ 2ರಿಂದ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಪಕ್ಷ ನಾಯಕರು, ಕಾರ್ಯಕರ್ತರು, ಯುವಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಭಾಗವಹಿಸಿವೆ. ಅಕ್ಟೋಬರ್ 4ರಂದು ಜಂತರ್ ಮಂತರ್ ಕಡೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ಅಶೋಕ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. (ಏಜೆನ್ಸೀಸ್)