ನ್ಯೂಸ್

ಡೆತ್​​ನೋಟ್​ ಬರೆದಿಟ್ಟಿದ್ರಾ ಧರ್ಮೇಗೌಡರು!?

shastrimath

ಚಿಕ್ಕಮಗಳೂರು: ಕಡೂರು ತಾಲೂಕು ಗುಣಸಾಗರದಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್. ಧರ್ಮೇಗೌಡ ಅವರು ಡೆತ್​ನೋಟ್ ಬರೆದಿಟ್ಟಿದ್ದಾರೆಯೇ? ಹೀಗೊಂದು ಪ್ರಶ್ನೆ ಕಾಡುತ್ತಿದ್ದು, ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಡೆತ್​​ನೋಟ್ ಕೂಡ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ಡೆತ್​ನೋಟ್​ನಲ್ಲಿ ಏನಿದೆ ಎಂಬ ಅಂಶ ಇನ್ನೂ ಬಹಿರಂಗವಾಗಿಲ್ಲ. ಎಲ್ಲರ ಗಮನವೂ ಸದ್ಯ ವಿಧಾನಪರಿಷತ್​ನಲ್ಲಿ ಡಿಸೆಂಬರ್ 15ರಂದು ನಡೆದ ಗದ್ದಲದ ಸುತ್ತವೇ ಇದೆ. ಅದುವೇ ಆತ್ಮಹತ್ಯೆಗೆ ಕಾರಣವಾಯಿತಾ ಎಂಬ ಸಂದೇಹವೂ ಎಲ್ಲರನ್ನೂ ಕಾಡಿದೆ. ಅಂದು ಅವರು ನೀಡಿದ ಪ್ರತಿಕ್ರಿಯೆಯನ್ನೂ ಎಲ್ಲರೂ ನೆನಪಿಸುತ್ತಿದ್ದಾರೆ.

ವಿಧಾನ ಪರಿಷತ್ ಹೈಡ್ರಾಮಾ: ಘಟಾನುಘಟಿ ರಾಜಕೀಯ ನಾಯಕರು ಅನುಭವವನ್ನು ಧಾರೆ ಎರೆದ ಮೇಲ್ಮನೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದ್ದ ವಿಧಾನಪರಿತ್ ಡಿಸೆಂಬರ್ 15ರಂದು ಸದಸ್ಯರ ಅತಿರೇಕದ ವರ್ತನೆಗೆ ಸಾಕ್ಷಿಯಾಯಿತಲ್ಲದೇ, ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು. ಪೂರ್ಣವಿವರದ ಸ್ಮರಣೆಗೆ ಈ ಕೊಂಡಿ ಕ್ಲಿಕ್ಕಿಸಿ.. ವಿಧಾನ ಪರಿಷತ್ ಹೈಡ್ರಾಮಾ ಹೇಗಾಯಿತು- ಯಾಕಾಯಿತು?

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..