ನವದೆಹಲಿ: ಈಗೇನಿದ್ದರೂ ಆಫರ್ ಜಮಾನಾ. ಹೊಸ ಹೊಸ ಸ್ಕೀಮ್, ಕೊಡುಗೆಗಳದ್ದೇ ಅಬ್ಬರ. ಅಂಥದ್ದರಲ್ಲಿ ಇತ್ತೀಚೆಗೆ ಕಾರ್ಮಿಕರಿಗೂ ಒಂದು ಕೊಡುಗೆ ಇದೆ ಎಂಬ ಸುದ್ದಿ ಹರಿದಾಡಿ, ವೈರಲ್ ಆಗಿತ್ತು.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ 1990ರಿಂದ 2021ರ ಅವಧಿಯಲ್ಲಿ ಕೆಲಸ ಮಾಡಿರುವ ಕಾರ್ಮಿಕರಿಗೆ 1.55 ಲಕ್ಷ ರೂಪಾಯಿ ಮೌಲ್ಯದ ಕೊಡುಗೆಯನ್ನು ನೀಡುತ್ತಿದೆ ಎನ್ನಲಾಗಿದ್ದು, ಈ ಕುರಿತ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಆದರೆ ಈ ಕುರಿತ ಫ್ಯಾಕ್ಟ್ಚೆಕ್ ಹೊರಬಿದ್ದಿದ್ದು, ಇಂಥ ಯಾವುದೇ ಆಫರ್ ಕಾರ್ಮಿಕ ಸಚಿವಾಲಯ ನೀಡುತ್ತಿಲ್ಲ. ಇದು ನಕಲಿ ಮಾಹಿತಿಯಾಗಿದ್ದು ಸಾರ್ವಜನಿಕರು ಇಂಥ ಆಮಿಷಕ್ಕೆ ಬಲಿ ಆಗಬಾರದು ಎಂಬುದಾಗಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ತಿಳಿಸಿದೆ.