ನ್ಯೂಸ್

ಮುಂಬೈನಲ್ಲಿ ಅದ್ಧೂರಿಯಾಗಿ ರಿಲೀಸ್ ಆಯ್ತು ಧ್ರುವ ಸರ್ಜಾ ಅಭಿನಯದ 'ಕೆಡಿ' ಟೀಸರ್ ; KD Teaser Release

KD Teaser : ಇಂದು (10 ) ಮುಂಬೈನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಟೀಸರ್ ಅದ್ಧೂರಿಯಾಗಿ ರಿಲೀಸ್ ಆಗಿದೆ. ಟೀಸರ್​​ನಲ್ಲಿ ಧ್ರುವ ಸರ್ಜಾ ಅವರ ಮಸ್ತ್ ಲುಕ್ ಕಾಣಿಸಿದೆ. ಅಷ್ಟೇ ಅಲ್ಲದೆ ಧ್ರುವ ಸರ್ಜಾ ಅವರಷ್ಟೇ ವಿಲನ್ ಆಗಿ ಸಂಜಯ್ ದತ್, ಹೀರೋಯಿನ್ ರೀಷ್ಮಾ ನಾಣಯ್ಯ, ಸತ್ಯವತಿಯಾಗಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಬಹಳಷ್ಟು ನಿರೀಕ್ಷೆಯಿಂದ ಕನ್ನಡ ಸಿನಿ ಪ್ರೇಮಿಗಳು ಕಾಯುತ್ತಿದ್ದ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಟ ಧ್ರುವ ಸರ್ಜಾ ಅವರ ಮಸ್ತ್ ಝಲಕ್ ಒಂದು ಪ್ರೇಕ್ಷಕರಿಗೆ ಲಭ್ಯವಾಗಿದ್ದು ಇದು ಭರವಸೆ ಮೂಡಿಸುವಂತಿದೆ.

ಧ್ರುವ ಸರ್ಜಾ ಮಸ್ತ್ ಆಗಿ ರೆಬೆಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್, ಸ್ಟೈಲಿಂಗ್ ಎಲ್ಲವೂ ಅದ್ಭುತವಾಗಿ ಮೂಡಿಬಂದಿದೆ. ಏಕಕಾಲಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಚಿತ್ರದ ಟೀಸರ್​​ ಅನಾವರಣಗೊಂಡಿದೆ.

(ಏಜೆನ್ಸೀಸ್)

ಸಿನಿಮಾ ಬೆಂಗಳೂರಿನ ಅಂಡರ್​ವರ್ಲ್ಡ್ ಕಥೆಯನ್ನು ಒಳಗೊಂಡಿದ್ದು, ಸಿನಿಮಾನಲ್ಲಿ ಧ್ರುವ ಸರ್ಜಾ ಎದುರು ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ನಟಿಸಿದ್ದಾರೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲೇ ಹಲವು ಕನ್ನಡದ ಚಿತ್ರಗಳು ಬಿಡುಗಡೆಗೊಳ್ಳುವ ಮೂಲಕ ಭಾರತದ ಕೋಟ್ಯಂತರ ಪ್ರೇಕ್ಷಕರನ್ನು ಮನರಂಜಿಸುತ್ತಿವೆ. ಅದರಂತೆ 'ಕೆಡಿ' ಕೂಡಾ ದೇಶದ ಮೂಲೆ ಮೂಲೆಗಳ ಸಿನಿಪ್ರಿಯರನ್ನು ತಲುಪಲು ಮುಂದಾಗಿದ್ದು, ಮೊದಲ ಹೆಜ್ಜೆಯಾಗಿ ಇಂದು ಮುಂಬೈನಲ್ಲಿ ಅದ್ಧೂರಿ ಟೀಸರ್​ ಲಾಂಚ್​ ಈವೆಂಟ್​ ನಡೆದಿದೆ.