ಮುಂಬೈ: ರಿಲಯನ್ಸ್ ಫೌಂಡೇಷನ್ ಮೂಲಕ ನಿರ್ವಹಿಸಲ್ಪಡುತ್ತಿರುವ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತೊಮ್ಮೆ ದ ಬೆಸ್ಟ್ ಸ್ಕೂಲ್ ರ್ಯಾಂಕ್ಗೆ ಪಾತ್ರವಾಗಿದ್ದು, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಟಾಪ್-1 ಸ್ಥಾನವನ್ನು ಅಲಂಕರಿಸಿದೆ.
ಟೈಮ್ಸ್ ಆಫ್ ಇಂಡಿಯಾ ನಡೆಸಿದ ಟೈಮ್ಸ್ ಸ್ಕೂಲ್ ಸರ್ವೇ-2021ರಲ್ಲಿ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಈ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂಬೈನ ಅತ್ಯುತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಗುರುತಿಸುವ ಸಲುವಾಗಿ ಈ ಸಮೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ: ಜಗತ್ತಿನ ಎಲ್ಲ ಯುವತಿಯರಿಗೂ ಸರಿಯಾದ ಸ್ಥಾನಮಾನ ಸಿಗಲಿ; ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ನೀತಾ ಅಂಬಾನಿ ಹಾರೈಕೆ
ಸಮೀಕ್ಷೆಯಲ್ಲಿ ಮುಂಬೈನ ಅತ್ಯುತ್ಕೃಷ್ಟ 15 ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದ್ದು, ಟಾಪ್-15 ಶಿಕ್ಷಣ ಸಂಸ್ಥೆಗಳಲ್ಲಿ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಟಾಪ್-1 ಸ್ಥಾನದಲ್ಲಿದೆ. ಇದು ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಅಂಬಾನಿ ಅವರ ನಾಯಕತ್ವ, ದೂರದೃಷ್ಟಿ, ಪ್ರಯತ್ನಗಳಿಗೆ ಸಿಕ್ಕ ಮನ್ನಣೆ ಎಂಬುದಾಗಿ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಸಂಸ್ಥೆ ತಿಳಿಸಿದೆ.