More

    ಜಗತ್ತಿನ ಎಲ್ಲ ಯುವತಿಯರಿಗೂ ಸರಿಯಾದ ಸ್ಥಾನಮಾನ ಸಿಗಲಿ; ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ನೀತಾ ಅಂಬಾನಿ ಹಾರೈಕೆ

    ಮುಂಬೈ: ಯುವತಿಯರ, ಮಹಿಳೆಯರ ಸಬಲೀಕರಣ ನಿಟ್ಟಿನಲ್ಲಿ ಸದಾ ಏನಾದರೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ತ್ರೀಸಮೂಹಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿರುವ ರಿಲಯನ್ಸ್ ಪ್ರತಿಷ್ಠಾನದ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ, ಮಹಿಳೆಯರಿಗೆಂದೇ ‘ಹರ್ ಸರ್ಕಲ್​’ ಎಂಬ ವೇದಿಕೆಯನ್ನೂ ಈಗಾಗಲೇ ಕಲ್ಪಿಸಿ ಕೊಟ್ಟಿದ್ದಾರೆ. ಇದೀಗ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ಸ್ತ್ರೀಯರ ಕುರಿತಂತೆ ಅವರು ತಮ್ಮ ಕನಸನ್ನು ಹಂಚಿಕೊಳ್ಳುವ ಜತೆಗೆ ಶುಭವನ್ನೂ ಹಾರೈಸಿದ್ದಾರೆ.

    ಮಹಿಳೆ ಉನ್ನತಿಗೇರುವ, ಸಾಧಿಸಿ ಮಿನುಗುವುದನ್ನು ನೋಡುವುದಕ್ಕಿಂತ ದೊಡ್ಡ ಸಂತೋಷ ನನಗೆ ಬೇರೆ ಇಲ್ಲ.‌ ಜಗತ್ತಿನ ಎಲ್ಲ ಯುವತಿಯರು ಸರಿಯಾದ ಸ್ಥಾನವನ್ನು ಅಲಂಕರಿಸಲಿ ಎಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವಾದ ಇಂದು ನಾನು ಹಾರೈಸುತ್ತಿದ್ದೇನೆ ಎಂದು ‘ಹರ್ ಸರ್ಕಲ್​’ ಸಂಸ್ಥಾಪಕಿಯೂ ಆಗಿರುವ ನೀತಾ ಅಂಬಾನಿ ಹೇಳಿದ್ದಾರೆ.

    ಜಗತ್ತಿನ ಎಲ್ಲ ಯುವತಿಯರಿಗೂ ಸರಿಯಾದ ಸ್ಥಾನಮಾನ ಸಿಗಲಿ; ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನದಂದು ನೀತಾ ಅಂಬಾನಿ ಹಾರೈಕೆ

    ಯುವತಿಯರನ್ನು ಜನ್ಮತಃ ಅವರು ಪ್ರಕೃತಿಯ ಶಕ್ತಿಯಾಗಿ ಹೊರಹೊಮ್ಮುವಂತೆ ನಾವು ಅವರನ್ನು ಸಬಲೀಕರಣಗೊಳಿಸಬೇಕಿದೆ. ಆರು ತಿಂಗಳ ಕಿರು ಅವಧಿಯಲ್ಲೇ ‘ಹರ್ ಸರ್ಕಲ್’ ಸಹೋದರಿತ್ವ ಹಾಗೂ ಐಕ್ಯತೆಯ ನಿಟ್ಟಿನಲ್ಲಿ ಅವೆರಡಕ್ಕೂ ಒಟ್ಟಾರೆಯಾಗಿ ಸಮಾನ ಡಿಜಿಟಲ್ ಚಳವಳಿಯನ್ನು ಒದಗಿಸಿದೆ ಎಂಬ ಖುಷಿ ಇದೆ ಎಂದೂ ತಿಳಿಸಿದ್ದಾರೆ.

    ಮಹಿಳೆಯರ ಸಂಪರ್ಕ-ಸಂವಹನ ಹಾಗೂ ಅವರ ವಿಚಾರ ಮಂಡನೆ ಮತ್ತು ಆಲಿಸುವಿಕೆಗೆ ಹರ್ ಸರ್ಕಲ್ ವೇದಿಕೆ ಒದಗಿಸುತ್ತಿದೆ ಎಂದು ನೀತಾ ಮುಖೇಶ್ ಅಂಬಾನಿ ತಿಳಿಸಿದ್ದು, ಮುಂದೆಯೂ ಸ್ತ್ರೀ ಸಮೂಹಕ್ಕೆ ತಮ್ಮ ಬೆಂಬಲ ಇದೇ ರೀತಿ ಮುಂದುವರಿಯಲಿದೆ ಎಂಬ ಭರವಸೆಯನ್ನೂ ಈ ಮುಖೇನ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts