More

    ‘ವಿಮೆನ್ಸ್​ ಟಿ-20 ಚಾಲೆಂಜ್​’ಗೆ ಜಿಯೋ ಬಲ; ಸಕಲ ಬೆಂಬಲ ಘೋಷಿಸಿದ ನೀತಾ ಅಂಬಾನಿ

    ಬೆಂಗಳೂರು: ಪುರುಷರ ಐಪಿಎಲ್ ಟೂರ್ನಿ ಅರಬ್ ರಾಷ್ಟ್ರದಲ್ಲಿ ಯಶಸ್ವಿಯಾಗಿ ಸಾಗಿರುವ ನಡುವೆ ಮುಂಬರುವ ಮಹಿಳೆಯರ ಮಿನಿ ಐಪಿಎಲ್ ಖ್ಯಾತಿಯ ‘ವಿಮೆನ್ಸ್​ ಟಿ-20 ಚಾಲೆಂಜ್​’ ಟೂರ್ನಿ ಕೂಡ ಯಶಸ್ಸು ಕಾಣುವ ವಿಶ್ವಾಸ ಅಧಿಕಗೊಂಡಿದೆ. ಏಕೆಂದರೆ ಭಾರತದ ಸ್ಟಾರ್ ಮಹಿಳಾ ಕ್ರಿಕೆಟಿಗರನ್ನು ಒಳಗೊಂಡ ಟೂರ್ನಿಗೆ ಅಂಬಾನಿ ಬಲ ಸಿಕ್ಕಿದೆ. ಅಂದರೆ ರಿಲಯನ್ಸ್ ಫೌಂಡೇಷನ್​ನ ಅಧ್ಯಕ್ಷೆ ಹಾಗೂ ಸಂಸ್ಥಾಪಕಿಯೂ ಆಗಿರುವ ನೀತಾ ಅಂಬಾನಿ ಭಾರತೀಯ ಮಹಿಳಾ ಕ್ರಿಕೆಟ್ ಗೆ ಸಕಲ ಬೆಂಬಲವನ್ನೂ ಘೋಷಿಸಿದ್ದಾರೆ.

    ‘ವಿಮೆನ್ಸ್​ ಟಿ-20′ ಚಾಲೆಂಜ್’ ಮಹಿಳಾ ಕ್ರಿಕೆಟ್​ ಲೀಗ್ ಗೆ ಜಿಯೋ, ರಿಲಯನ್ಸ್ ಫೌಂಡೇಷನ್​ ಎಜುಕೇಷನ್​ ಆ್ಯಂಡ್ ಸ್ಪೋರ್ಟ್ಸ್​ ಫಾರ್ ಆಲ್​ (ಆರ್​ಎಫ್​ ಇಎಸ್ಎ) ಮೂಲಕ ಪ್ರಾಯೋಜಕತ್ವ ನೀಡಲಿರುವ ನೀತಾ, ಭಾರತದ ಮಹಿಳಾ ಕ್ರಿಕೆಟಿಗರಿಗಾಗಿ ಮುಂಬೈನ ಜಿಯೋ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಸೌಲಭ್ಯವನ್ನೂ ಒದಗಿಸಲಿದ್ದಾರೆ. ಅತ್ಯಾಧುನಿಕ ಸೌಲಭ್ಯದ ಈ ಜಿಯೋ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾರತದ ಮಹಿಳಾ ಕ್ರಿಕೆಟಿಗರು ತರಬೇತಿ, ಕ್ಯಾಂಪ್​, ಪಂದ್ಯ ಏರ್ಪಡಿಸಲು ವರ್ಷವಿಡೀ ಉಚಿತವಾಗಿ ಬಳಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಮುಂಬೈನ ಸರ್ ಎಚ್​ಎನ್​ ರಿಲಯನ್ಸ್ ಫೌಂಡೇಷನ್​ ಹಾಸ್ಪಿಟಲ್ ಆ್ಯಂಡ್ ರಿಸರ್ಚ್​ ಸೆಂಟರ್​ನಲ್ಲಿ ಸ್ಪೋರ್ಟ್ಸ್​ ಸೈನ್ಸ್​ ಹಾಗೂ ರಿಹ್ಯಾಬಿಲಿಟೇಷನ್​ ಸೌಲಭ್ಯವನ್ನೂ ಭಾರತ ಮಹಿಳಾ ಕ್ರಿಕೆಟಿಗರು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

    ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಪ್ರಥಮ ಮಹಿಳೆ ಆಗಿರುವ ನೀತಾ ಅಂಬಾನಿ, ಭಾರತೀಯ ಯುವಜನತೆಯಲ್ಲಿ ಅದರಲ್ಲೂ ಯುವತಿಯರಲ್ಲಿ ಬಹುಕ್ರೀಡಾ ಸಂಸ್ಕೃತಿ ಹೊರಹೊಮ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತ ಬಹುಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮಬೇಕು ಎಂಬ ಕನಸು ನನಸಾಗಿಸುವ ನಿಟ್ಟಿನಲ್ಲಿ ಎಜುಕೇಷನ್​ ಆ್ಯಂಡ್​ ಸ್ಪೋರ್ಟ್ಸ್​ ಫಾರ್ ಆಲ್​, ರಿಲಯನ್ಸ್​ ಫೌಂಡೇಷನ್​ ಯೂತ್ ಸ್ಪೋರ್ಟ್ಸ್​, ಜೂನಿಯರ್ ಎನ್​ಬಿಎ, ಫುಟ್​ಬಾಲ್​ ಸ್ಪೋರ್ಟ್ಸ್​ ಡೆವಲಪ್​ಮೆಂಟ್​ ಲಿ., ಐಎಸ್ಎಲ್​ ಚಿಲ್ಡ್ರನ್​ ಲೀಗ್ಸ್​ ಮತ್ತು ಇಂಡಿಯಾ ವಿನ್​ ಸ್ಪೋರ್ಟ್ಸ್​ ಪ್ರೈ.ಲಿ.ನ ಯುವಪ್ರತಿಭೆಗಳನ್ನು ನೀತಾ ಅಂಬಾನಿ ಕಳೆದ ಕೆಲವು ವರ್ಷಗಳಿಂದ ಪೋಷಿಸಿಕೊಂಡು ಬಂದಿದ್ದಾರೆ.

    ಕ್ರೀಡಾಪಟುಗಳಾದ ಹರ್ಮನ್ ಪ್ರೀತ್​ ಕೌರ್ ಅವರ ಸೂಪರ್ ನೋವಾಸ್, ಸ್ಮೃತಿ ಮಂಧಾನ ಅವರ ಟ್ರೇಲ್​ಬ್ಲೇಜರ್ಸ್ ಹಾಗೂ ಮಿಥಾಲಿ ರಾಜ್​ ಅವರ ವೆಲೊಸಿಟಿ ಫ್ರಾಂಚೈಸಿಗಳ ವಿಮೆನ್ಸ್​ ಟಿ-20 ಶಾರ್ಜಾದಲ್ಲಿ ನವೆಂಬರ್ 4ರಿಂದ ನಡೆಯಲಿದೆ.

    ವಿಮೆನ್ಸ್​ ಟಿ-20 ಚಾಲೆಂಜ್​ ಆಯೋಜಿಸುತ್ತಿರುವ ಬಿಸಿಸಿಐಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಭಾರತದ ಮಹಿಳಾ ಕ್ರಿಕೆಟಿಗರ ಬೆಳವಣಿಗೆ ದೃಷ್ಟಿಯಿಂದ ಇದೊಂದು ಪ್ರಗತಿಯ ಹೆಜ್ಜೆ. ಇಂಥ ಅದ್ಭುತ ವಿಚಾರಕ್ಕೆ ನನ್ನ ಸಂಪೂರ್ಣ ಸಹಕಾರ ನೀಡಲು ಸಂತೋಷವಾಗುತ್ತಿದೆ. ಭಾರತದ ಎಲ್ಲ ಮಹಿಳಾ ಕ್ರೀಡಾಳುಗಳ ಸಾಮರ್ಥ್ಯದ ಬಗ್ಗೆ ನನಗೆ ಅತೀವ ವಿಶ್ವಾಸವಿದೆ.
    | ನೀತಾ ಅಂಬಾನಿ ಅಧ್ಯಕ್ಷೆ ಹಾಗೂ ಸಂಸ್ಥಾಪಕಿ, ರಿಲಯನ್ಸ್ ಫೌಂಡೇಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts