ಮುಂಬೈ: ಕರಣ್ ಜೋಹರ್ ನಿರ್ದೇಶನದ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸಿನಿಮಾದಲ್ಲಿ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಹಲವು ವರ್ಷಗಳ ನಂತರ ಕರಣ್ ಜೋಹರ್ ನಿರ್ದೇಶನದ ಈ ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿತ್ತು. ಈ ಸಿನಿಮಾದಲ್ಲಿ ಖ್ಯಾತ ನಟರು ನಟಿಸಿರುವುದರಿಂದ ಒಳ್ಳೆಯ ಹವಾ ಕೂಡ ಕ್ರಿಯೇಟ್ ಆಗಿತ್ತು. ಆರಂಭಿಕ ಕಲೆಕ್ಷನ್ ಕೂಡ ಸಖತ್ ಆಗಿಯೇ ಇದೆ. ಇತ್ತೀಚೆಗಷ್ಟೇ ಈ ಸಿನಿಮಾ ನೂರು ಕೋಟಿ ಗಡಿ ದಾಟಿದೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಅವಧಿಯಲ್ಲಿ ಹಿಂದಿ ಸಿನಿಮಾಗಳು ನೂರು ಕೋಟಿ ಗಳಿಸಿದ್ದು ದೊಡ್ಡ ವಿಷಯ.
ಅಂದಹಾಗೆ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' 100 ಕೋಟಿ ಕಲೆಕ್ಷನ್ ಮಾಡುವಲ್ಲಿ ಹಿರಿಯ ಕಲಾವಿದರಾದ ಧರ್ಮೇಂದ್ರ ಮತ್ತು ಶಬಾನಾ ಅಜ್ಮಿ ಅವರ ಕಿಸ್ ಸೀನ್ ಪ್ರಮುಖ ಪಾತ್ರ ವಹಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಹೌದು, "ಈ ವಯಸ್ಸಿನಲ್ಲಿ ಇಬ್ಬರು ಚುಂಬನದ ದೃಶ್ಯವನ್ನು ಒಪ್ಪಿಕೊಳ್ಳುವುದು ವಿಚಿತ್ರವಾಗಿದೆ'' ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ದೃಶ್ಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಆ ತಲೆಮಾರಿನ ನಟರಾದ ಜಯಾ ಬಚ್ಚನ್, ಧರ್ಮೇಂದ್ರ, ಶಬಾನಾ ಅಜ್ಮಿ ಚುಂಬನದ ದೃಶ್ಯದಿಂದಾಗಿ ಸಿನಿಮಾ ಒಳ್ಳೆ ಹವಾ ಕ್ರಿಯೇಟ್ ಮಾಡಿದೆ.
ವದಂತಿಗಳ ಪ್ರಕಾರ, ಕೊರೊನಾಕ್ಕಿಂತ ಮೊದಲು ಈ ರೀತಿಯ ಚಿತ್ರ ಬಂದಿದ್ದರೆ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿತ್ತು ಎಂದು ಬಾಲಿವುಡ್‌ನ ಕೆಲವು ಬಾಕ್ಸ್ ಆಫೀಸ್ ವಲಯಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿವೆ. ಕರಣ್ ಜೋಹರ್ ಇತ್ತೀಚೆಗಿನ ಸಂದರ್ಶನದಲ್ಲಿ ಚುಂಬನದ ದೃಶ್ಯದ ಬಗ್ಗೆ ಮಾತನಾಡಿದ್ದು, ಧರ್ಮೇಂದ್ರ ಮತ್ತು ಶಬಾನಾ ಅಜ್ಮಿಗೆ ಯಾವುದೇ ತೊಂದರೆಯಾಗಿಲ್ಲ, ಇತರರಿಗೆ ಚುಂಬನದ ದೃಶ್ಯದಿಂದ ಏನು ತೊಂದರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.