DGMO: ಇಂದು (ಮೇ.12) ದೆಹಲಿಯಲ್ಲಿ ಭಾರತದ ಮೂರು ಸೇನಾ ಅಧಿಕಾರಿಗಳು 'ಆಪರೇಷನ್ ಸಿಂಧೂರ' ಬಗ್ಗೆ ಹಲವಾರು ವಿವರಗಳನ್ನು ವಿಸ್ತೃತವಾಗಿ ತಿಳಿಸಿದರು. ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಏರ್ ಮಾರ್ಷಲ್ ಎಕೆ ಭಾರ್ತಿ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಮತ್ತು ಮೇಜರ್ ಜನರಲ್ ಎಸ್.ಎಸ್. ಶಾರದಾ ಮಾಧ್ಯಮಗಳ ಸರಣಿ ಪ್ರಶ್ನೆಗಳಿಗೆ ಉತ್ತರಿಸಿದರು.
ಇದನ್ನೂ ಓದಿ: ಇನ್ಮುಂದೆ ಚೆಸ್ ಮೇಲೆಯೂ ನಿಷೇಧ! ಅಫ್ಘಾನಿಸ್ತಾನದಲ್ಲಿ ತಾಲಿಬಾನ್ನ ಸಂಚಲನಾತ್ಮಕ ನಿರ್ಧಾರ..Taliban Vs Chess
ಚೀನಾದ ಕ್ಷಿಪಣಿ ಪಿಎಲ್-15 ಹೋಲುವ ಕ್ಷಿಪಣಿಯ ಚಿತ್ರಗಳನ್ನು ಭಾರತೀಯರ ಮುಂದೆ ಸಾಕ್ಷ್ಯವಾಗಿ ಮುಂದಿಟ್ಟು ವಿವರಿಸಿದ ಡಿಜಿಎಂಒ, "ಈ ಕ್ಷಿಪಣಿಗಳು ಚೀನಾದಲ್ಲಿ ತಯಾರಾಗುತ್ತವೆ. ಈ ಕ್ಷಿಪಣಿಗಳು ಗಾಳಿಯಿಂದ ಗಾಳಿಗೆ ಗುರಿಗಳನ್ನು ಪ್ರತಿಬಂಧಿಸಬಲ್ಲ ಸಾಮರ್ಥ್ಯ ಹೊಂದಿವೆ. ಭಾರತ ಆ ಕ್ಷಿಪಣಿಯನ್ನೂ ಹೊಡೆದುರುಳಿಸಿದೆ. ಅದರ ತುಣುಕುಗಳನ್ನು ನಮ್ಮ ಸೈನ್ಯವು ವಶಪಡಿಸಿಕೊಂಡಿದೆ. ಅದೇ ರೀತಿ, ಭಾರತೀಯ ಸೇನೆ ಚೀನಾದ ಯಿಹಾ ಮತ್ತು ಸೊಂಗಾರ್ ಡ್ರೋನ್‌ಗಳ ತುಣುಕುಗಳ ಚಿತ್ರಗಳನ್ನು ಸಹ ನಿಮ್ಮ ಮುಂದಿಟ್ಟಿವೆ" ಎಂದು ಮಾಹಿತಿ ನೀಡಿದರು.
"ಉಗ್ರರ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ನಡೆಸಿದೆ ಮತ್ತು ದೇಶದ ಕ್ರಮಗಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗಿದೆ" ಎಂದು ಏರ್ ಮಾರ್ಷಲ್ ಎಕೆ ಭಾರ್ತಿ ಹೇಳಿದರು. "ಪಾಕಿಸ್ತಾನ ಪಿಒಕೆಯಲ್ಲಿ ಭಯೋತ್ಪಾದಕ ಶಿಬಿರಗಳನ್ನು ಭಾರತೀಯ ಸೇನೆ ನಾಶಪಡಿಸಿದೆ. ಪಿಒಕೆಯಲ್ಲಿ ಭಾರತದ ಕಾರ್ಯಾಚರಣೆ ಯಶಸ್ವಿಯಾಗಿದೆ. ದಾಳಿಯಲ್ಲಿ ಉಗ್ರರ ಅಡಗುತಾಣಗಳನ್ನು ಛಿದ್ರಗೊಳಿಸಿದ್ದೇವೆ" ಎಂದು ಭಾರ್ತಿ ಹೇಳಿದರು.
"ನೌಕಾಪಡೆಯ ಮುಂದುವರಿದ ರಾಡಾರ್‌ಗಳಿಂದ ಪಾಕಿಸ್ತಾನಿ ಡ್ರೋನ್‌ಗಳನ್ನು ಪತ್ತೆಹಚ್ಚಲಾಗಿದೆ" ಎಂದು ವೈಸ್ ಅಡ್ಮಿರಲ್ ಪ್ರಮೋದ್ ಹೇಳಿದರು. "ಕ್ಯಾರಿಯರ್ ಬ್ಯಾಟಲ್ ಗ್ರೂಪ್ ಪರಿಣಾಮಕಾರಿ ಕಣ್ಗಾವಲು ನಡೆಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿದ್ದ ಪಾಕಿಸ್ತಾನಿ ಯುದ್ಧ ವಿಮಾನಗಳು ಸಮೀಪಿಸದಂತೆ ಅಡ್ಡಿಪಡಿಸಲಾಯಿತು" ಎಂದು ತಿಳಿಸಿದರು,(ಏಜೆನ್ಸೀಸ್).