ಹಾಸನ: 'ಅವನನ್ನು ಸೋಲಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎದೆ ಬಡಿದುಕೊಂಡರು, ಆದರೂ ನಾನು ಹೆಚ್ಚಿನ ಅಂತರದಲ್ಲಿ ಗೆದ್ದೆ..'
- ಹೀಗೆಂದವರು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ. ಹಾಸನದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಚುನಾವಣಾಪೂರ್ವದಲ್ಲಿ ನಡೆದ ಘಟನೆಗಳನ್ನು ನೆನೆದು ಗೆಲುವಿನ ಸಂಭ್ರಮವನ್ನೂ ಹಂಚಿಕೊಂಡರು.
ಗೌಡರು ಅವನನ್ನು ಸೋಲಿಸಿ ಎಂದು ಎದೆ ಬಡಿದುಕೊಂಡರು, ಆದರೂ ನಾನು ಹೆಚ್ಚಿನ ಅಂತರದಲ್ಲಿ ಗೆದ್ದೆ. ಜನರ ಜೊತೆ ನಾವಿದ್ದರೆ ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಶಿವಲಿಂಗೇಗೌಡರಿಗಂತೂ ರಾಹು-ಕೇತು ಕಾಡಿದಂಗೆ ಕಾಡಿಬಿಟ್ರು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಟೀಕೆ ಮಾಡಿದರು.
ಅವರು ಸೋತರೆ ಈ ಸಲ ಪಕ್ಷ ವಿಸರ್ಜನೆ ಮಾಡುವುದಾಗಿ ಹೇಳಿದ್ದರು, ವಿಸರ್ಜನೆ ಮಾಡಿದ್ರಾ? ಅವರು ಮಾಡುವುದು ಬೇಡ, ಇರಲಿ.. ಅವರು ಇದ್ದರೆ ಒಳ್ಳೆಯದು. ಕಳೆದ ಸಲ ನಮ್ಮ ಕಾಂಗ್ರೆಸ್ ಜೊತೆ ಸೇರಿ 8 -9 ಕೇಳಿ ಗೆದ್ಕೊಂಡ್ರು, ಈ ಸಲ ಬಿಜೆಪಿ 5-6 ಕೇಳಿ ಬಿಜೆಪಿ ಜೊತೆ ಹೋಗುತ್ತಾರೆ ಎಂದು ದಳದ ವರಿಷ್ಠರನ್ನು ರಾಜಣ್ಣ ಟೀಕಿಸಿದರು.