ನ್ಯೂಸ್

ಮನೆಯವರ ವಿರೋಧ ಲೆಕ್ಕಿಸದೇ ಮುಸ್ಲಿಂ ಯುವಕನ ಜತೆ ಹೋದ ಯುವತಿಯ ಗತಿ ಏನಾಯ್ತು ನೋಡಿ!

ನವದೆಹಲಿ: ಬೆಚ್ಚಿ ಬೀಳಿಸವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ಡೇಟಿಂಗ್​ ಜೋಡಿಗಳ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ತನ್ನ ಸಂಗಾತಿಯನ್ನೇ ಕೊಲೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ವ್ಯಕ್ತಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಲೆಯಾದ ಶ್ರದ್ಧಾ ಮತ್ತು ಅಫ್ತಾನ್ ಅಮೀನ್ ಎಂಬಾತ ಲಿವಿಂಗ್ ಇನ್ ರಿಲೇಷನ್​ನಲ್ಲಿ ಕೆಲವು ಸಮಯದಿಂದ ಒಟ್ಟಾಗಿದ್ದರು. ಶ್ರದ್ಧಾ ದೆಹಲಿಯ ಅಂತಾರಾಷ್ಟ್ರೀಯ ಕಂಪೆನಿಯೊಂದರ ಉದ್ಯೋಗಿ. ಅಲ್ಲಿ ಪರಿಚಯವಾದ ಹುಡುಗ ಅಫ್ತಾನ್ ಅಮೀನ್. ಇಬ್ಬರ ಪರಿಚಯ ನಿಧಾನವಾಗಿ ಪ್ರೀತಿಯತ್ತ ತಿರುಗಿದೆ. ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರು.

ಶ್ರದ್ಧಾ ಮತ್ತು ಅಫ್ತಾನ್ ತಮ್ಮ ಪ್ರೀತಿಯನ್ನು ಪೋಷಕರಿಗೆ ತಿಳಿಸಿದ್ದಾರೆ. ಆದರೆ ಇವರಿಬ್ಬರ ಪ್ರೀತಿಯನ್ನು ಮನೆಯವರು ಒಪ್ಪಿಲ್ಲ. ಈ ವೇಳೆ ಇಬ್ಬರೂ ಮನೆಯಿಂದ ಹೊರಬಂದು ದೆಹಲಿಯ ಫ್ಲಾಟ್ ಒಂದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಬಿರುಕು ಮೂಡಿದೆ.

ಪೊಲೀಸ್ ಮಾಹಿತಿಯ ಪ್ರಕಾರ, ಕಳೆದ ಮೇ ತಿಂಗಳಿನಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ನಂತರದಲ್ಲಿ ಅಫ್ತಾಬ್ ಅಮೀನ್ ಶ್ರದ್ಧಾಳನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ನಂತರ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ, ಮನೆಯ ಫ್ರಿಡ್ಜ್​​ನಲ್ಲಿಟ್ಟಿದ್ದಾನೆ.

ಶ್ರದ್ಧಾಳನ್ನು ಕೊಲೆ ಮಾಡಿ, ದೇಹದ ತುಂಡುಗಳನ್ನು ಫ್ರಿಡ್ಜ್​ನಲ್ಲಿಟ್ಟಿದ್ದ ಆರೋಪಿ, ಮುಂದಿನ 18 ದಿನಗಳಲ್ಲಿ ದೆಹಲಿಯ ವಿವಿಧ ಸ್ಥಳಗಳಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ. ಬೆಳಗ್ಗೆ 2 ಗಂಟೆಗೆ ಯಾರಿಗೂ ಗೊತ್ತಾಗದ ರೀತಿ ಮೃತದೇಹದ ತುಂಡುಗಳನ್ನು ಮನೆಯಿಂದ ಹೊರಸಾಗಿಸಿದ್ದಾನೆ.

26 ವರ್ಷದ ಶ್ರದ್ಧಾ ತನ್ನ ಕುಟುಂಬದ ಫೋನ್ ಕರೆಗಳಿಗೆ ಪ್ರತಿಕ್ರಿಯಿಸದೇ ಇರುವುದನ್ನು ಅರಿತ ಪೋಷಕರು, ಮಗಳನ್ನು ನೋಡಲೆಂದು ದೆಹಲಿಯಲ್ಲಿ ತಂಗಿದ್ದ ಫ್ಲಾಟ್​ಗೆ ಬಂದಿದ್ದಾರೆ. ಈ ವೇಳೆ ಅಲ್ಲಿ ಮಗಳು ಇರದಿರುವುದನ್ನು ಅರಿತ ಪೋಷಕರು, ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಪಹರಣದ ಆರೋಪದಲ್ಲಿ ದೂರು ದಾಖಲಿಸಿಕೊಂಡು, ಅಫ್ತಾಬ್ ಅಮೀನ್​ನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಶ್ರದ್ಧಾ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.

ನಾವಿಬ್ಬರು ಡೇಟಿಂಗ್​ನಲ್ಲಿದ್ದೆವು. ಈ ವೇಳೆ ಶ್ರದ್ಧಾ ನನ್ನನ್ನು ಮದುವೆಯಾಗು ಎಂದು ಪ್ರತಿದಿನ ಒತ್ತಾಯಿಸುತ್ತಿದ್ದಳು. ಇದು ನಮ್ಮಬ್ಬರ ನಡುವೆ ಹಲವು ಬಾರಿ ಜಗಳಕ್ಕೆ ಕಾರಣವಾಗಿತ್ತು. ಈ ವೇಳೆ ಕೊಲೆ ನಡೆದಿದೆ ಎಂದು ಆರೋಪಿ ಅಫ್ತಾಬ್ ಅಮೀನ್​ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)