ದೆಹಲಿ: 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಅರ್ಜಿದಾರರ ಮತ್ತು ಆರ್‌ಬಿಐ ಪರ ವಕೀಲರನ್ನು ಆಲಿಸಿದ ನಂತರ ಮೇ 30 ರಂದು ಪಿಐಎಲ್‌ನ ಆದೇಶವನ್ನು ಕಾಯ್ದಿರಿಸಿತ್ತು.
ಇದನ್ನೂ ಓದಿ: ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದ; ಯುವಕನ ಕಿರುಕುಳದಿಂದ ಬೇಸತ್ತು ಪ್ರಾಣ ಬಿಟ್ಟ ಯುವತಿ
2,000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಯಾವುದೇ ಅಧಿಕಾರವಿಲ್ಲ ಮತ್ತು ಕೇಂದ್ರ ಮಾತ್ರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದು ಅರ್ಜಿದಾರ ರಜನೀಶ್ ಭಾಸ್ಕರ್ ಗುಪ್ತಾ ಪ್ರತಿಪಾದಿಸಿದ್ದಾರೆ.
ಅರ್ಜಿದಾರರು ತಮ್ಮ ಅರ್ಜಿಯಲ್ಲಿ, ಯಾವುದೇ ಮುಖಬೆಲೆಯ ಮೌಲ್ಯದ ನೋಟುಗಳನ್ನು ನೀಡದಿರುವ ಅಥವಾ ನೀಡುವುದನ್ನು ನಿಲ್ಲಿಸಲು ಆರ್‌ಬಿಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಮತ್ತು ಈ ಅಧಿಕಾರವು ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 24 (2) ರ ಅಡಿಯಲ್ಲಿ ಕೇಂದ್ರಕ್ಕೆ ಮಾತ್ರ ನಿವೇದಿತವಾಗಿದೆ ಎಂದು ಅರ್ಜಿದಾರರು ಸಲ್ಲಿಸಿದ್ದರು.
ಕೇವಲ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದು, ಇದು ಕರೆನ್ಸಿ ನಿರ್ವಹಣೆಯ ವ್ಯಾಯಾಮ ಮತ್ತು ಆರ್ಥಿಕ ನೀತಿಯ ವಿಷಯವಾಗಿದೆ ಎಂದು ಆರ್‌ಬಿಐ ಹೇಳಿದೆ.(ಏಜೆನ್ಸೀಸ್)