ನವದೆಹಲಿ: ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಟೂಲ್ ಕಿಟ್ ಹಂಚಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ದಿಶಾ ರವಿಗೆ ಜಾಮೀನು ದೊರೆತಿದೆ.
ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವ ದೆಹಲಿ ನ್ಯಾಯಾಲಯ ಒಂದು ಲಕ್ಷ ರೂ ಬಾಂಡ್ ಹಾಗೂ ಇಬ್ಬರ ಶೂರಿಟಿ ಒದಗಿಸಲು ಸೂಚಿಸಿದೆ.
ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ 15 ರಿಂದ ದಿಶಾ ರವಿ ದೆಹಲಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಳು.
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರ ಹೆಸರಿನಲ್ಲಿ ನಡೆದ ಹಿಂಸಾಚಾರದ ಬೆನ್ನಲ್ಲೇ ಟೂಲ್‌ಕಿಟ್ ಟ್ವೀಟ್ ಮಾಡಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಸಿಕ್ಕಿಬಿದ್ದಿದ್ದಳು. ಹಿಂಸಾಚಾರ ಹೇಗೆ ಆರಂಭಿಸಬೇಕು, ಯಾವ್ಯಾವ ಕಡೆಗಳಲ್ಲಿ ಪ್ರತಿಭಟನೆ ಮಾಡಬೇಕು ಎಂಬೆಲ್ಲಾ ಅಂಶಗಳನ್ನು ಹೊಂದಿದ್ದ ರಹಸ್ಯಮಯ ಈ ದಾಖಲೆ ಗ್ರೇಟಾಳಿಗೆ ದಿಶಾ ರವಿ ಶೇರ್ ಮಾಡಿಕೊಂಡು ಪೇಚಿಗೆ ಸಿಲುಕಿದ್ದಳು. ಫೆ 14 ರಂದು ದಿಶಾಳನ್ನು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ದೆಹಲಿ ಪೊಲೀಸರು ಬಂಧಿಸಿ ಕರೆದೋಯ್ದಿದ್ದರು.