ನ್ಯೂಸ್

ದೆಹಲಿ ಕಾರು ಸ್ಫೋಟ: ಬಂಧಿತ ಉತ್ತರ ಪ್ರದೇಶದ ವೈದ್ಯೆ ಡಾ. ಶಹೀನಾ ಮೇಲೆ ತನಿಖಾಧಿಕಾರಿಗಳ ಗಮನ, ಯಾಕೆ?| Dr. Shaheena

ನವದೆಹಲಿ: ಐತಿಹಾಸಿಕ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಡೆದ ಕಾರು ಸ್ಫೋಟ ಮತ್ತು ಫರಿದಾಬಾದ್​ನಿಂದ ದ ಬೃಹತ್ ಸ್ಫೋಟಕಗಳು ಸಾಗಾಣೆ ಹಾಗೂ ಜೆಇಎಂ ಜೊತೆ ಸಂಪರ್ಕ ಆರೋಪ ಪ್ರಕರಣದಲ್ಲಿ ಬಂಧಿತಳಾಗಿರುವ ಉತ್ತರ ಪ್ರದೇಶದ ವೈದ್ಯ ಡಾ. ಶಹೀನಾ(Dr. Shaheena) ಮೇಲೆ ತನಿಖಾಧಿಕಾರಿಗಳು ಗಮನ ಹರಿಸಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಮಂಗಳವಾರ(ನ. 11) ವರದಿಯಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಡಾ. ಶಹೀನಾ ಪ್ರಮುಖ ಆರೋಪಿಗಳಾದ ಮುಝಾಮಿಲ್, ಆದಿಲ್ ಹಾಗೂ ಒಮರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಎಲ್ಲರೂ ಒಂದೇ ಉಗ್ರಗಾಮಿ ಸಂಘಟನೆಯ ಭಾಗವಾಗಿದ್ದರು ಎಂದು ಕಂಡು ಬಂದಿದೆ. ಮುಜಮ್ಮಿಲ್ ಶಕೀಲ್ ಜೊತೆ ಸಂಬಂಧ ಹೊಂದಿದ್ದು, ಅವರಿಂದ ಹಲವು ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಡಾ. ಶಹೀನಾ ಆಗಾಗ್ಗೆ ಕಾಶ್ಮೀರಕ್ಕೆ ಪ್ರಯಾಣಿಸುತ್ತಿದ್ದರು ಮತ್ತು ಗುಂಪಿನ ಚಟುವಟಿಕೆಗಳಿಗೆ ಹಣಕಾಸು ಒದಗಿಸುತ್ತಿದ್ದರು ಎಂದು ತನಿಖಾ ಏಜೆನ್ಸಿಗಳು ಕಂಡು ಹಿಡಿದಿವೆ. ಮಾಡ್ಯೂಲ್ ₹35–40 ಲಕ್ಷ ಸಂಗ್ರಹಿಸಿದೆ ಎಂದು ಶಂಕಿಸಲಾಗಿದ್ದು, ಅದಕ್ಕೆ ಶಹೀನಾ ಗಣನೀಯವಾಗಿ ಕೊಡುಗೆ ನೀಡಿದ್ದಾರೆ. ಫರಿದಾಬಾದ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ವಾಹನ ಸಹ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎನ್ನಲಾಗಿದೆ.

ಇನ್ನೂ ಮೂಲಗಳ ಪ್ರಕಾರ, ಸ್ಫೋಟಕ ವಸ್ತುಗಳನ್ನು ಕೃಷಿಗಾಗಿ ಸಂಗ್ರಹಿಸಿರಲಿಲ್ಲ. ಯೋಜಿತ ಸ್ಫೋಟಗಳಿಗಾಗಿಯೇ ಸಾಗಾಣೆ ಮಾಡಲಾಗುತ್ತಿತ್ತು. ಶಹೀನಾ, ಮುಝಾಮಿಲ್ ಹಾಗೂ ಒಮರ್ ನಡುವಿನ ಎನ್‌ಜಿಒ ಸಂವಹನಗಳನ್ನು ವೈದ್ಯಕೀಯ ಕಲ್ಯಾಣ ಗುಂಪುಗಳು ಮತ್ತು ಎನ್‌ಜಿಒ ಚಾನೆಲ್‌ಗಳ ಮೂಲಕ ರವಾನಿಸಲಾಗುತ್ತಿತ್ತು. ಬಳಿಕ ಅಕ್ರಮ ನಿಧಿ ವರ್ಗಾವಣೆಯ ರಹಸ್ಯವಾಗಿ ಬಹಿರಂಗಪಡಿಸಲಾಗಿದೆ.

ದೆಹಲಿ-ಎನ್​ಸಿಆರ್​ನಲ್ಲಿನ ಅಲ್​-ಫಾಲಾಹ್​ ಸಂಬಂಧದಿಂದ ತನ್ನ ಜೆಇಎಂನ ಭಯೋತ್ಪಾದಕ ಮಾಡ್ಯೂಲ್ ವಿಸ್ತರಿಸಲು, ನೇಮಕಾತಿ ಕೇಂದ್ರ ಮಾಡಿಕೊಂಡಿದ್ದಳು ಎನ್ನಲಾಗಿದ್ದು, ತನ್ನ ವೃತ್ತಿಪರ ಹಿನ್ನೆಲೆಯನ್ನು ಬಳಸಿಕೊಂಡು ಉಗ್ರಗಾಮಿ ಉದ್ದೇಶವನ್ನು ಹರಡುವ ಕೃತ್ಯ ನಡೆಸುತ್ತಿದ್ದರು ಎಂಬ ಆರೋಪದ ಮೇಲೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)