ನವದೆಹಲಿ: ಹುಟ್ಟು ಹಬ್ಬದ ನಿಮಿತ್ತ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಹಾರಿಸಿದ್ದಾನೆ. ಪರಿಣಾಮ ಮತ್ತೋರ್ವನ ಮುಖಕ್ಕೆ ಗುಂಡು ತಗುಲಿ ಆಸ್ಪತ್ರೆ ಸೇರುವಂತಾಗಿದೆ. ಈ ಘಟನೆ ಫತೇಪುರ್ ಬೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಜೋನಾಪುರ ಗ್ರಾಮದಲ್ಲಿ ಜೋನಾಪುರ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತನನ್ನು ಪ್ರಮೋದ್ ಎಂದು ಗುರುತಿಸಲಾಗಿದೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್ಗೆ ದಾಖಲಿಸಲಾಗಿದೆ. ರಣಪಾಲ್ ಎಂಬಾತ ಹುಟ್ಟು ಹಬ್ಬದ ಸಂಭ್ರಮಾಚರಣೆಯ ವೇಳೆ ಹಲವು ಸುತ್ತು ಗುಂಡು ಹಾರಿಸಿದಿ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸದ್ಯ ಘಟನೆಯ ಬಗ್ಗೆ ಗುಂಡಿನ ದಾಳಿಯಿಂದ ಗಾಯಗೊಂಡಿರುವ ಪ್ರಮೋದ್ನ ಸಹೋದರ ವಿನೋದ್ ಹೇಳಿರುವ ಮಾಹಿತಿ ಪ್ರಕಾರ, ಪಾರ್ಟಿ ನಡೆಯುತ್ತಿದ್ದ ಸಂದರ್ಭ ಆರೋಪಿ 7-8 ಜನರೊಂದಿಗೆ ಆಗಮಿಸಿದ್ದಾನೆ. ನಂತರ ನೇರವಾಗಿ ಟೇರಸ್ಗೆ ಹೋಗಿ ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗುಂಡು ಪ್ರಮೋದ್ನ ಮುಖಕ್ಕೆ ತಾಗಿದೆ.
ಒಂದೆರಡು ಬಾರಿ ಗುಂಡು ಹಾರಿಸಿದಾಗಲೇ ಅವರನ್ನು ಹೊರ ಹೋಗುವಂತೆ ಸೂಚಿಸಿದ್ದೆವು. ಈ ವೇಳೆ ಮತ್ತೂ 2 ಸುತ್ತು ಗುಂಡು ಹಾರಿಸಿದ್ದು, ಆ ಗುಂಡು ನನ್ನ ಸಹೋದರ ಮುಖಕ್ಕೆ ತಗುಲಿದೆ ಎಂದು ವಿನೋದ್ ಹೇಳಿದ್ದಾರೆ. (ಏಜೆನ್ಸೀಸ್)