ನ್ಯೂಸ್

Delhi Assembly Elections 2025; ದೆಹಲಿಯಲ್ಲಿ ಉತ್ಸಾಹ ತೋರದ ಮತದಾರ; ದಿನದಂತ್ಯಕ್ಕೆ ಶೇ. 58 ರಷ್ಟು ವೋಟಿಂಗ್

Delhi Assembly Elections 2025:ದೆಹಲಿ ವಿಧಾನಸಭಾ ಚುನಾವಣೆಯ (ಫೆ.5) ಮತದಾನ ಪೂರ್ಣಗೊಂಡಿದ್ದು, 70 ಕ್ಷೇತ್ರಗಳಿಗೆ ಇದೀಗ ಸಂಜೆ 5ಗಂಟೆಯೊತ್ತಿಗೆ ಶೇ.58ರಷ್ಟು ಮತ ಚಲಾವಣೆಯಾಗಿದೆ.

70 ಕ್ಷೇತ್ರಗಳಾದ್ಯಂತ 699 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದೇ ಫೆ.8ರಂದು ಫಲಿತಾಂಶ ಹೊರ ಬೀಳಲಿದೆ.

ಆಡಳಿತ, ಭ್ರಷ್ಟಾಚಾರ ಆರೋಪಗಳು, ಮತದಾರರ ಪಟ್ಟಿ ತಿರುಚುವಿಕೆ, ಕಾನೂನು ಸುವ್ಯವಸ್ಥೆ ಮತ್ತು ಉಚಿತ ಕೊಡುಗೆಗಳ ಭರವಸೆಗಳ ಕುರಿತು ಚರ್ಚೆಗಳಿಂದ ಕೂಡಿದ ಬಿರುಸಿನ ಪ್ರಚಾರದ ನಂತರ ಚುನಾವಣೆಯನ್ನು ಬಿಗಿ ಭದ್ರತೆಯಲ್ಲಿ ನಡೆಸಲಾಗಿದೆ.

ಆಡಳಿತಾರೂಢ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ತೀವ್ರ ತ್ರಿಕೋನ ಹೋರಾಟ ನಡೆಯುತ್ತಿದೆ. ಎಎಪಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಗುರಿ ಹೊಂದಿದ್ದರೆ, ಬಿಜೆಪಿ 27 ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಬರುವ ಗುರಿ ಇದೆ. ಕಳೆದ ಎರಡು ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ. ಇನ್ನು ಸಂಜೆ 6ರೊತ್ತಿಗೆ ಎಕ್ಸಿಟ್​ ಪೋಲ್​ಗಳ ಸಮೀಕ್ಷೆ ಹೊರ ಬಿಳಲಿದೆ.(ಏಜೆನ್ಸೀಸ್​)