ನ್ಯೂಸ್

ಗಾಜಾ ಶಾಂತಿ ಮಾತುಕತೆ​ ​​​ವಿಳಂಬವು ಭಾರಿ ರಕ್ತಪಾತಕ್ಕೆ ಕಾರಣವಾಗಬಹುದು: ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ | Donald Trump

Donald Trump: ಗಾಜಾ ಶಾಂತಿ ಮಾತುಕತೆಗೆ ಇಸ್ರೇಲ್ ಮತ್ತು ಹಮಾಸ್ ವೇಗವಾಗಿ ಮುಂದುವರಿಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಸೆಪ್ಟೆಂಬರ್​,06) ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ರೂತ್​ ಸೋಷಿಯಲ್​​​ನಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್, ಗಾಜಾ ಶಾಂತಿ ಮಾತುಕತೆಯ​ ​​​ವಿಳಂಬವು ಭಾರಿ ರಕ್ತಪಾತಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಸಂಭಾವ್ಯ ಕದನ ವಿರಾಮದ ಭರವಸೆಯ ನಡುವೆ ಇಸ್ರೇಲ್ ಮತ್ತು ಹಮಾಸ್ ಇಂದು ಈಜಿಪ್ಟ್‌ನಲ್ಲಿ ಪರೋಕ್ಷ ಮಾತುಕತೆ ನಡೆಸಲು ಸಜ್ಜಾಗಿರುವ ಸಂದರ್ಭದಲ್ಲಿ ಟ್ರಂಪ್​ರಿಂದ ಈ ಹೇಳಿಕೆಗಳು ಬಂದಿವೆ.

ಗಾಜಾ ಸಂಘರ್ಷವನ್ನು ನಿರಂತರವಾಗಿ ಗಮನಿಸುತ್ತೇವೆ: ಟ್ರಂಪ್

ಈ ಬಗ್ಗೆ ಟ್ರೂತ್​ ಸೋಶಿಯಲ್​ನಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್, ಇಸ್ರೇಲ್​ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು, ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಮುಖ್ಯವಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿಯನ್ನು ಬಯಸಲು ಹಮಾಸ್ ಮತ್ತು ಪ್ರಪಂಚದಾದ್ಯಂತದ ದೇಶಗಳೊಂದಿಗೆ ಸಕಾರಾತ್ಮಕ ಚರ್ಚೆಗಳು ನಡೆದಿವೆ ಎಂದು ಟ್ರಂಪ್ ಹೇಳಿದ್ದಾರೆ.

ಗಾಜಾ ಶಾಂತಿ ಮಾತುಕತೆಗಳು ಬಹಳ ಯಶಸ್ವಿಯಾಗಿದ್ದು, ವೇಗವಾಗಿ ಮುಂದುವರೆದಿವೆ. ಅಂತಿಮ ವಿವರಗಳನ್ನು ಪರಿಶೀಲಿಸಲು ಮತ್ತು ಸ್ಪಷ್ಟಪಡಿಸಲು ತಾಂತ್ರಿಕ ತಂಡಗಳು ಸೋಮವಾರ ಈಜಿಪ್ಟ್‌ನಲ್ಲಿ ಮತ್ತೆ ಸಭೆ ಸೇರಲಿವೆ ಎಂದು ಟ್ರಂಪ್​ ಸ್ಟಪ್ಟಪಡಿಸಿದ್ದಾರೆ.

ಮೊದಲ ಹಂತವು ಮಾತುಕತೆಗಳು ಈ ವಾರ ಪೂರ್ಣಗೊಳ್ಳಬೇಕು ಎಂದು ನನಗೆ ಹೇಳಲಾಗಿದೆ. ಅಲ್ಲದೆ, ಎಲ್ಲರೂ ವೇಗವಾಗಿ ಚಲಿಸುವಂತೆ ನಾನು ಕೇಳಿಕೊಳ್ಳುತ್ತಿದ್ದೇನೆ. ಈ ಶತಮಾನಗಳಷ್ಟು ಹಳೆಯದಾದ ಸಂಘರ್ಷವನ್ನು ನಾನು ಗಮನಿಸುವುದನ್ನು ಮುಂದುವರಿಸುತ್ತೇನೆ. ಸಮಯ ಕಳೆದಂತೆ ಭಾರೀ ರಕ್ತಪಾತವಾಗುತ್ತದೆ ಟ್ರಂಪ್ ತಿಳಿಸಿದ್ದಾರೆ.

ಇಂದು ಇಸ್ರೇಲ್-ಹಮಾಸ್ ಮಾತುಕತೆ

ಟ್ರಂಪ್​ರ ಗಾಜಾ ಯೋಜನೆಯ ಕುರಿತು ಮಾತುಕತೆ ನಡೆಸಲು ಹಮಾಸ್‌ನ ಹಿರಿಯ ನಾಯಕ ಖಲೀಲ್ ಅಲ್-ಹಯ್ಯ ನೇತೃತ್ವದ ನಿಯೋಗವು ಈಜಿಪ್ಟ್‌ಗೆ ಆಗಮಿಸಿದೆ. ಅಲ್ಲದೆ, ಶರ್ಮ್ ಎಲ್-ಶೇಖ್‌ನಲ್ಲಿ ನಡೆಯಲಿರುವ ಮಾತುಕತೆಗಾಗಿ ತನ್ನ ಸಂಧಾನಕಾರರು ಸೋಮವಾರ ಹೊರಡಲಿದ್ದಾರೆ ಎಂದು ಇಸ್ರೇಲ್ ತಿಳಿಸಿದೆ.

ಅಮೆರಿಕದ ಯೋಜನೆಯ ಕೆಲವು ಅಂಶಗಳನ್ನು ಒಪ್ಪಿಕೊಂಡಿರುವ ಹಮಾಸ್​ ಉಗ್ರಗಾಮಿ ಗುಂಪಿನ ಹೇಳಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿದ ನಂತರ ಮಾತುಕತೆಗಳು ನಡೆಯಲಿವೆ. ಯುದ್ಧವನ್ನು ಕೊನೆಗೊಳಿಸುವ ಅಮೆರಿಕದ ಹೊಸ ಪ್ರಯತ್ನವನ್ನು ಬೆಂಬಲಿಸುವುದಾಗಿ ಇಸ್ರೇಲ್ ಈ ಹಿಂದೆ ಹೇಳಿತ್ತು.

ಪ್ಯಾಲೆಸ್ಟೀನಿಯನ್ ಕೈದಿಗಳಿಗೆ ಇಸ್ರೇಲಿ ಒತ್ತೆಯಾಳುಗಳ ವಿನಿಮಯದ ಕುರಿತು ಚರ್ಚಿಸಲು ಈಜಿಪ್ಟ್ ಸೋಮವಾರ ಇಸ್ರೇಲ್ ಮತ್ತು ಹಮಾಸ್ ನಿಯೋಗಗಳನ್ನು ಆಯೋಜಿಸಲಿದೆ ಎಂದು ಈಜಿಪ್ಟ್ ವಿದೇಶಾಂಗ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)