ಡೆಹರಾಡೂನ್: ಐಎಸ್ಬಿಟಿ ಬಸ್ನಲ್ಲಿ ಮೊರಾದಾಬಾದ್ನಿಂದ ಡೆಹ್ರಾಡೂನ್ಗೆ ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಭಾನುವಾರ ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ. ಉತ್ತರ ಪ್ರದೇಶದ ಮೊರದಾಬಾದ್ನ ಬಾಲಕಿಯು ದೆಹಲಿಯಿಂದ ಡೆಹರಾಡೂನ್ಗೆ ಬಸ್ನಲ್ಲಿ ಬಂದಿದ್ದಳು. ಆಕೆಯ ಮೇಲೆ ಆಗಸ್ಟ್ 12 ರಂದು ಲೈಂಗಿಕ ದೌರ್ಜನ್ಯ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ್ ಸಿಂಗ್ ಮಾಹಿತಿ ನೀಡಿದ್ದು, ಬಾಲಕಿಯು ಇಲ್ಲಿನ ಮಳಿಗೆಯೊಂದರ ಪಕ್ಕದಲ್ಲಿ ಕುಳಿತಿರುವುದಾಗಿ ಹಾಗೂ ಸ್ಥಳದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಇರುವುದಾಗಿ ಆಗಸ್ಟ್ 13ರಂದು ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಬಂದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿತ್ತು. ಬಾಲಕಿಯನ್ನು ಬಾಲ ನಿಕೇತನ ಸಮಾಲೋಚನಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಎಂದು ತಿಳಿಸಿದ್ದಾರೆ.
2 ರಿಂದ 3 ದಿನಗಳ ಸಮಾಲೋಚನೆ ನಡೆಸಿದ ಬಳಿಕ ಸಂತ್ರಸ್ತೆಯು ತನ್ನ ಮೇಲೆ ಐವರು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾಳೆ ಎಂದಿದ್ದಾರೆ.
ಬಾಲಕಿಯ ಹೇಳಿಕೆ ಪ್ರಕಾರ, ಅಂತರರಾಜ್ಯ ಬಸ್ ಟರ್ಮಿನಲ್ನಲ್ಲಿ ನಿಲ್ಲಿಸಿದ್ದ ಉತ್ತರಾಖಂಡ ರಸ್ತೆ ಸಾರಿಗೆ ಬಸ್ನಲ್ಲಿ ಮಧ್ಯರಾತ್ರಿ ಸಮಯದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಲಾಗಿದೆ. ಈ ಸಂಬಂಧ ಐವರು ಅಪರಚಿತ ವ್ಯಕ್ತಿಗಳ ವಿರುದ್ಧ ಬಿಎನ್ಎಸ್ ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್ 70 ರ ಅಡಿಯಲ್ಲಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು ಎಂದು ಸಿಂಗ್ ಹೇಳಿದ್ದಾರೆ.
ಬಾಲಕಿಯ ಕುಳಿತಿದ್ದ ಮಳಿಗೆಯ ಬಳಿ ಇದ್ದ ಶಂಕಿತ ವ್ಯಕ್ತಿ ಬಸ್ ಚಾಲಕ. ವಿಚಾರಣೆ ವೇಳೆ ಆತ ಇಡೀ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್ ನಿರ್ವಾಹಕ ಸಹ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಸದ್ಯ ಒಟ್ಟು ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಬಸ್ ಚಾಲಕರು, ಒಬ್ಬ ಕಂಡಕ್ಟರ್ ಮತ್ತು ಒಬ್ಬ ಕ್ಯಾಷಿಯರ್. ಫೊರೆನ್ಸಿಕ್ ತಂಡವು ಬಸ್‌ನಿಂದ ಸಾಕ್ಷ್ಯವನ್ನು ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಬಾಲಕಿಯ ವೈದ್ಯಕೀಯ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಬಾಲಕಿಯ ಗ್ರಾಮ ಯಾವುದು ಎಂದು ಪತ್ತೆ ಮಾಡಲಾಗಿದೆ. ಆಕೆಯ ಪೋಷಕರಿಗೆ ವಿಷಯ ತಿಳಿಸಿ ಬರಲು ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಎಸ್‌ಎಸ್‌ಪಿ ಮತ್ತು ಜಿಲ್ಲಾ ಪರೀಕ್ಷಾಧಿಕಾರಿಯಿಂದ ವಿವರವಾದ ಮಾಹಿತಿ ಪಡೆದ ನಂತರ, ತಪ್ಪಿತಸ್ತರ ವಿರುದ್ಧ ತಕ್ಷಣವೇ ಕ್ರಮಕ್ಕೆ ಸೂಚಿಸಿದ್ದೇನೆ. ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಕುಸುಮ್ ಹೇಳಿದ್ದಾರೆ.