ನ್ಯೂಸ್

Deepika Padukone: 'ಅದರಿಂದ ತುಂಬಾ ನೊಂದಿದ್ದೆ': 17 ವರ್ಷಗಳ ನಂತರ ನೋವು ತೋಡಿಕೊಂಡ 'ಲೇಡಿ ಸಿಂಗಂ'

ಮುಂಬೈ: ಬಾಲಿವುಡ್​ ಖ್ಯಾತ ನಟಿ ದೀಪಿಕಾ ಪಡುಕೋಣೆ(Deepika Padukone) 2007 ರಲ್ಲಿ ಓಂ ಶಾಂತಿ ಓಂ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಶಾರುಖ್ ಖಾನ್ ಜೊತೆ ಪರದೆಯನ್ನು ಹಂಚಿಕೊಂಡಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು. ದೀಪಿಕಾಗೆ ಅಲ್ಲಿಂದ ಚಲನಚಿತ್ರ ಪ್ರಪಂಚದ ಬಾಗಿಲು ಶಾಶ್ವತವಾಗಿ ತೆರೆದುಕೊಂಡಿತು. ಆದರೆ, ಮೊದಲ ಚಿತ್ರವೇ ಟ್ರೋಲ್‌ಗೆ ಗುರಿಯಾದಾಗ ಆಕೆಗೆ ಆದ ನೋವು ಅಷ್ಟಿಷ್ಟಲ್ಲ. ಈಗ ಅಂದರೆ 17 ವರ್ಷದ ನಂತರ ಆ ಬಗ್ಗೆ ಮಾತನಾಡಿದ್ದಾರೆ.

ಹಿನ್ನೆಲೆ ನೃತ್ಯಗಾರ್ತಿಯಿಂದ ಬಿ-ಟೌನ್‌ನ ರಾಣಿಯಾಗುವವರೆಗೆ, ದೀಪಿಕಾ ಪಡುಕೋಣೆ ತನ್ನದೇ ಆದ ಛಾಪು ಮೂಡಿಸಲು ಸಾಕಷ್ಟು ಶ್ರಮಿಸಿದ್ದಾರೆ. ಓಂ ಶಾಂತಿ ಓಂ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದರೂ, ದೀಪಿಕಾ ತನ್ನ ನಟನೆಗಾಗಿ ವಿಮರ್ಶೆಗೆ ಗುರಿಯಾದರು. ಇತ್ತೀಚೆಗಷ್ಟೇ ತಾನು ಕೆಟ್ಟದಾಗಿ ಟ್ರೋಲ್ ಆಗಿದ್ದೇನೆ ಎಂದು ದೀಪಿಕಾ ಹೇಳಿದ್ದರು. ಆ ಒಂದು ವಿಷಯ ಆಕೆಯ ಹೃದಯವನ್ನು ತುಂಬಾ ಘಾಸಿಗೊಳಿಸಿತ್ತಂತೆ.

ದೀಪಿಕಾ ಸಂದರ್ಶನವೊಂದರಲ್ಲಿ, ಕೆಲವು ಕೆಟ್ಟ ವಿಮರ್ಶೆಗಳು ಬಂದವು, ಆದರೆ ಈ ಒಂದು ಕೆಟ್ಟ ವಿಮರ್ಶೆಯು ನನ್ನ ಮೇಲೆ ಕೆಲಸ ಮಾಡಲು ಪ್ರೇರೇಪಿಸಿತು. ಇದು ನನ್ನ ಉಚ್ಚಾರಣೆ, ವಾಕ್ಚಾತುರ್ಯ, ಪ್ರತಿಭೆ ಮತ್ತು ಸಾಮರ್ಥ್ಯಗಳ ಬಗ್ಗೆ ನನಗೆ ತಿಳಿಸಿತು. ನೀವು ಅದನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಕಾರಾತ್ಮಕತೆಯು ಕೆಲವೊಮ್ಮೆ ಒಳ್ಳೆಯದಾಗುತ್ತದೆ. ಆ ಟೀಕೆಯೊಂದಿಗೆ ನೀವು ಏನು ಮಾಡುತ್ತೀರಿ, ನೀವು ಅದನ್ನು ಹೇಗೆ ಸಕಾರಾತ್ಮಕ ರೀತಿಯಲ್ಲಿ ನೋಡುತ್ತೀರಿ ಎಂಬುದು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ ಎಂದಿದ್ದಾರೆ.