ನ್ಯೂಸ್

ರಾಜ್ಯದಲ್ಲಿಂದು ಸೋಂಕಿತರಿಗಿಂತ ಡಿಸ್ಚಾರ್ಜ್​ ಆದವರೇ ಹೆಚ್ಚು; ರಾಜಧಾನಿಯಲ್ಲೂ ಹೊಸ ಪ್ರಕರಣಗಳಲ್ಲಿ ಗಣನೀಯ ಇಳಿಕೆ

rameshmysuru

ಬೆಂಗಳೂರು: ಹೊಸ ಕರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಮಾತ್ರವಲ್ಲದೇ, ಸೋಂಕಿಗೆ ಒಳಗಾದವರಿಗಿಂತ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆಯೇ ಹೆಚ್ಚಾಗಿದೆ.

ನಿನ್ನೆ 5,985 ಜನರು ಸೋಂಕಿಗೆ ಒಳಗಾಗಿದ್ದರೆ, ಇಂದು ಈ ಸಂಖ್ಯೆ 4,267ಕ್ಕೆ ಇಳಿದಿದೆ. ಜತೆಗೆ, ಕೋವಿಡ್​ನಿಂದ ಗುಣವಾದವರ ಸಂಖ್ಯೆ ಬರೋಬ್ಬರಿ 5,218ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,82,354ಕ್ಕೆ ತಲುಪಿದ್ದರೆ, ಚೇತರಿಕೆ ಕಂಡವರು 99,126 ಆಗಿದೆ. ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 79,908 ಆಗಿದೆ.

ನಿನ್ನೆಗೆ ಹೋಲಿಸಿದಲ್ಲಿ ಸಾವಿನ ಸಂಖ್ಯೆ ಇಂದು ಹೆಚ್ಚಾಗಿದೆ. ನಿನ್ನೆ 107 ಜನರು ಮೃತಪಟ್ಟಿದ್ದರೆ, ಇಂದಿನ ಸಾವಿನ ಸಂಖ್ಯೆ 114 ಆಗಿದೆ. ಜತೆಗೆ ಕೋವಿಡ್​ನಿಂದ ಮೃತಪಟ್ಟವರ ಪ್ರಮಾಣ 3,312ಕ್ಕೆ ಹೆಚ್ಚಳವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದು ಐಸಿಯುದಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 681.

ರಾಜಧಾನಿಯಲ್ಲಿ ಕೋವಿಡ್​ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. 1,948 ಮಂದಿ ಸೋಂಕಿತರಾಗಿದ್ದರೆ, 1,243ಕ್ಕೆ ಇಳಿಕೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 75,428 ಆಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಇಂದು 2037 ಜನರು ಡಿಸ್ಚಾರ್ಜ್​ ಆಗಿದ್ದಾರೆ. ನಿನ್ನೆ ಈ ಸಂಖ್ಯೆ 1,837 ಆಗಿತ್ತು. ಒಟ್ಟಾರೆ ಗುಣವಾದವರ ಸಂಖ್ಯೆ 41,166. ಸಾವಿನ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದ್ದು, 36 ಜನರು ಮೃತಪಟ್ಟಿದ್ದು ಒಟ್ಟು ಸಂಖ್ಯೆ 1,276ಕ್ಕೆ ಏರಿದೆ.

ಜಿಲ್ಲಾವಾರು ಕೋವಿಡ್​ ಅಂಕಿ-ಅಂಶ ಇಲ್ಲಿದೆ