ನವದೆಹಲಿ: ತುರ್ತಾಗಿ ಲಘು ಯುದ್ಧ ಟ್ಯಾಂಕ್ಗಳನ್ನು ಖರೀದಿ ಮಾಡಲು ಭಾರತ ನಿರ್ಧರಿಸಿದೆ. ಲಡಾಖ್ನಂಥ ಎತ್ತರದ ಗಡಿ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜನೆ ಮಾಡಲು ಸೇನೆ ಉದ್ದೇಶಿಸಿದೆ. ಪೂರ್ವ ಲಡಾಖ್ ಭಾಗದಲ್ಲಿ ಚೀನಾ ಸೇನೆ ಟಿ-15 ಲಘು ಯುದ್ಧ ಟ್ಯಾಂಕ್ಗಳನ್ನು ನಿಯೋಜನೆ ಮಾಡಿರುವುದರಿಂದ ತ್ವರಿತವಾಗಿ ತಲುಪಬಲ್ಲ ಲಘು ಟ್ಯಾಂಕ್ಗಳನ್ನು ಖರೀದಿ ಮಾಡಲಾಗುತ್ತಿದೆ.
ಲಡಾಖ್ಗೆ ನಾಳೆ ರಾಜನಾಥ್ ಸಿಂಗ್ ಭೇಟಿ ಲಡಾಕ್ ಗಡಿ ವಿವಾದ ಕುರಿತು ಭಾರತ - ಚೀನಾ ನಡುವೆ ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದ ಮಾತುಕತೆ ನಡೆಯುತ್ತಿರುವ ಬೆನ್ನಲ್ಲೇ, ಜು. 17ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹಾಗೂ ಸೇನಾ ಮುಖ್ಯಸ್ಥ ಎಂ.ಎಂ. ನರಾವಣೆ ಲಡಾಖ್ಗೆ ಭೇಟಿ ನೀಡಲಿದ್ದಾರೆ. ಜು. 18ರಂದು ಅವರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಪಾಕ್ ಮತ್ತು ಚೀನಾ ಎರಡೂ ಗಡಿಗಳಲ್ಲಿ ಅವರು ಭದ್ರತಾ ಪರಿಶೀಲನೆ ನಡೆಸಲಿದ್ದಾರೆ.
14 ತಾಸು ನಡೆದ ಸಭೆ: ಭಾರತ- ಚೀನಾ ಸೇನಾಧಿಕಾರಿಗಳ ನಡುವಿನ ಉನ್ನತ ಮಟ್ಟದ ಸಭೆ ಮಂಗಳವಾರ 14 ತಾಸು ನಡೆದಿದೆ. ಬೆಳಗ್ಗೆ 11.30ಕ್ಕೆ ಆರಂಭ ವಾದ ಸಭೆ ರಾತ್ರಿ 2 ಗಂಟೆ ವರೆಗೆ ನಡೆದಿದೆ. ಎಲ್ಎಸಿ ಬಳಿಯ ಫಿಂಗರ್ ಪಾಯಿಂಟ್ ಪ್ರದೇಶಗಳಲ್ಲಿ ಸೇನೆ, ಶಸ್ತ್ರಾಸ್ತ್ರ, ಬೃಹತ್ ಯಂತ್ರಗಳನ್ನು ಹಿಂಪಡೆಯುವ ಕುರಿತು ಮ್ಯಾರಾಥಾನ್ ಮಾತುಕತೆ ನಡೆಯಿತು. ಇದು ಕಮಾಂಡರ್ ಹಂತದ ನಾಲ್ಕನೇ ಸುತ್ತಿನ ಮಾತುಕತೆಯಾಗಿದೆ. ಮುಂದಿನ ಹಂತದ ಸೇನಾ ಹಿಂಪಡೆಯುವಿಕೆ ಪ್ರಕ್ರಿಯೆಗೆ ಎರಡೂ ಸೇನೆಗಳು ಒಪ್ಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ - ಅಮೆರಿಕ ಸಂಬಂಧ ವೃದ್ಧಿ: ಚೀನಾದ ನಿರಂತರ ಗಡಿ ಕ್ಯಾತೆ ಹಾಗೂ ಲಡಾಖ್ನಲ್ಲಿ ನಡೆದ ಘರ್ಷಣೆಯಿಂದ ಭಾರತ ಹಾಗೂ ಅಮೆರಿಕ ಭದ್ರತಾ ಸಂಬಂಧ ಮತ್ತಷ್ಟು ಬಲಗೊಂಡಿದೆ ಎಂದು ಅಂತಾರಾಷ್ಟ್ರೀಯ ತಜ್ಞರು ವಿಶ್ಲೇಷಿಸಿದ್ದಾರೆ. ಭಾರತದ ಜತೆ ಉತ್ತಮ ಭದ್ರತಾ ಸಂಬಂಧ ಹೊಂದಲು ಅಮೆರಿಕ ಉತ್ಸುಕವಾಗಿದೆ. ಚೀನಾ ವಿವಾದ ಇದಕ್ಕೆ ಉತ್ತಮ ಅವಕಾಶ ಕಲ್ಪಿಸಿದೆ. ಲಡಾಖ್ ವಿಚಾರದಲ್ಲಿ ಅಮೆರಿಕ ಭಾರತದ ಪರ ನಿಂತಿದ್ದು, ರಕ್ಷಣಾ ಕ್ಷೇತ್ರದಲ್ಲಿ ಇನ್ನಷ್ಟು ಸಹಕಾರ ನೀಡಲು ಮುಂದಾಗಿದೆ ಎಂದು ಹೇಳಿದ್ದಾರೆ.
ಸೇನೆಯ ತುರ್ತು ಬಳಕೆಗೆ -ಠಿ; 300 ಕೋಟಿ ಅಗತ್ಯ ಭದ್ರತಾ ಉಪಕರಣಗಳನ್ನು ಖರೀದಿಸಲು -ಠಿ; 300 ಕೋಟಿ ವರೆಗೆ ತುರ್ತನಿಧಿ ಬಳಕೆ ಮಾಡಲು ಸೇನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ಹಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಸರ್ಕಾರದ ಹಂತದಲ್ಲಿ ಅನೇಕ ಪ್ರಕ್ರಿಯೆ ನಡೆಯ ಬೇಕಾದ ಕಾರಣ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತದೆ. ಹೀಗಾಗಿ ಸೇನೆಗೆ ತುರ್ತು ಅಗತ್ಯವಿರುವ ಸಲಕರಣೆಗಳನ್ನು ಖರೀದಿ ಮಾಡಲು ಸರ್ಕಾರ ಅವಕಾಶ ನೀಡಿದೆ.