ಡೆಹ್ರಾಡೂನ್: ಉತ್ತರಾಖಂಡದ(Uttarakhand Avalanche) ಚಮೋಲಿ ಜಿಲ್ಲೆಯ ಮಾನಾ ಗ್ರಾಮದ ಬಳಿ ಫೆಬ್ರವರಿ 28 ರಂದು ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟವರ ಸಂಖ್ಯೆ ಭಾನುವಾರ್(ಮಾರ್ಚ್ 2) ಆರಕ್ಕೆ ಏರಿದೆ. ಇಂದು ಎರಡು ಮೃತದೇಗಳು ಪತ್ತೆಯಾಗಿವೆ. ಈ ಘಟನೆಯು ಕಾಣೆಯಾದ ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕಾರ್ಮಿಕರು ಹಲವಾರು ಅಡಿಗಳಷ್ಟು ಹಿಮದ ಅಡಿಯಲ್ಲಿ ಸಿಲುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇದನ್ನು ಓದಿ: Uttarakhand Avalanche | ಹಿಮದಡಿ ಸಿಲುಕಿದ್ದ ಕಾರ್ಮಿಕರಲ್ಲಿ ನಾಲ್ವರು ಮೃತ; ಐವರಿಗಾಗಿ ಮುಂದುವರಿದ ರಕ್ಷಣ ಕಾರ್ಯಾಚರಣೆ
ಸ್ಥಳದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿರುವ ಸೇನೆಯು ಸಾವುಗಳನ್ನು ದೃಢಪಡಿಸಿದೆ. ಭಾನುವಾರ ಸ್ನಿಫರ್ ಡಾಗ್ಸ್ ಮತ್ತು ಹೆಲಿಕಾಪ್ಟರ್‌ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ಪುನರಾರಂಭವಾಯಿತು. ಭೂಸೇನೆ, ಐಟಿಬಿಪಿ, ವಾಯುಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆಗಳು ನಡೆಸುತ್ತಿದ್ದು, ಹಿಮದಡಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ಒಟ್ಟಾಗಿ ಕೆಲಸ ಮಾಡುತ್ತಿವೆ.
ಹವಾಮಾನ ಸುಧಾರಿಸಿದಂತೆ ಶೋಧ ಕಾರ್ಯಾಚರಣೆ ವೇಗ ಪಡೆಯುವ ನಿರೀಕ್ಷೆಯಿದೆ ಮತ್ತು ದೆಹಲಿಯಿಂದ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ವ್ಯವಸ್ಥೆಯು ಯಾವುದೇ ಸಮಯದಲ್ಲಿ ಇಲ್ಲಿಗೆ ಬರುವ ನಿರೀಕ್ಷೆಯಿದೆ ಎಂದು ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂದೀಪ್ ತಿವಾರಿ ಹೇಳಿದ್ದಾರೆ. ಪ್ರಸ್ತುತ ಸೇನೆಯ ಒಂದು ಖಾಸಗಿ ಹೆಲಿಕಾಪ್ಟರ್ ಸೇರಿದಂತೆ ಏಳು ಹೆಲಿಕಾಪ್ಟರ್‌ಗಳು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಗಾಯಗೊಂಡವರನ್ನು ಮಾನಾದಿಂದ ಹೆಲಿಕಾಪ್ಟರ್ ಮೂಲಕ ಕರೆತರುವ ಕೆಲಸ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ಸುಮಾರು 3,200 ಮೀಟರ್ ಎತ್ತರದಲ್ಲಿರುವ ಮಾನಾ ಗ್ರಾಮದಲ್ಲಿ ಸಂಭವಿಸಿದ ಹಿಮಪಾತದ ನಂತರ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಕಾರ್ಮಿಕರು ಹಿಮದಲ್ಲಿ ಸಿಲುಕಿಕೊಂಡರು. ಈ ಮೊದಲು ಹಿಮದಡಿ ಸಿಲುಕಿದ ಕಾರ್ಮಿಕರ ಸಂಖ್ಯೆ 55 ಎಂದು ಹೇಳಲಾಗಿತ್ತು. ಆದರೆ ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಒಬ್ಬ ಕಾರ್ಮಿಕ ಸುರಕ್ಷಿತವಾಗಿ ತನ್ನ ಮನೆಗೆ ತಲುಪಿದ್ದಾನೆ ಎಂಬ ಮಾಹಿತಿ ಬಂದ ನಂತರ ಅದನ್ನು 54ಕ್ಕೆ ಪರಿಷ್ಕರಿಸಲಾಗಿದೆ.
ಈ ಪೈಕಿ 50 ಜನರನ್ನು ಶನಿವಾರದ ವೇಳೆಗೆ ಸ್ಥಳಾಂತರಿಸಲಾಗಿದ್ದು, ಅವರಲ್ಲಿ ನಾಲ್ವರು ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾರೆ. ಇಂದು ಎರಡು ಮೃತದೇಹಗಳು ಪತ್ತೆಯಾಗಿದ್ದು ಒಟ್ಟು ಸಾವಿನಸಂಖ್ಯೆ 6ಕ್ಕೆ ಏರಿದೆ. ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಸೆಂಟ್ರಲ್ ಕಮಾಂಡ್, ಲೆಫ್ಟಿನೆಂಟ್ ಜನರಲ್ ಅನಿಂದ್ಯಾ ಸೇನ್‌ಗುಪ್ತಾ ಮತ್ತು ಉತ್ತರ ಭಾರತ ಸರ್ಕಾರ, ಲೆಫ್ಟಿನೆಂಟ್ ಜನರಲ್ ಡಿ.ಜಿ. ಮಿಶ್ರಾ ಕೂಡ ಹಿಮಪಾತದ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ.(ಏಜೆನ್ಸೀಸ್)