ನ್ಯೂಸ್

ಭಾರತದಲ್ಲಿ 24,942ಮಂದಿ ಕರೊನಾ ಸೋಂಕಿತರು; 24 ಗಂಟೆಯಲ್ಲಿ 1,490 ಪ್ರಕರಣ ಪತ್ತೆ, 56 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಸಂಖ್ಯೆ 24,942ಕ್ಕೆ ಏರಿದ್ದು, ಒಟ್ಟು 779 ಮಂದಿ ಮೃತಪಟ್ಟಿದ್ದಾರೆ. 5210 ಮಂದಿ ಸೋಂಕಿನಿಂದ ಪಾರಾಗಿ, ಡಿಸ್ಚಾರ್ಜ್​ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಯಲ್ಲಿ 1490 ಸೋಂಕಿತರು ಪತ್ತೆಯಾಗಿದ್ದು, 56 ಸಾವಿನ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 6817 ಕರೊನಾ ಸೋಂಕಿತರು ಇದ್ದಾರೆ. 301 ಮಂದಿ ಮೃತಪಟ್ಟಿದ್ದಾರೆ. 957 ಸೋಂಕು ಮುಕ್ತರಾಗಿ ಡಿಸ್​ಚಾರ್ಜ್​ ಆಗಿದ್ದಾರೆ.

ಇನ್ನು ಎರಡನೇ ಸ್ಥಾನದಲ್ಲಿ ಗುಜರಾತ್​ ಇದ್ದು, ಅಲ್ಲಿ ಒಟ್ಟು 2815 ಕರೊನಾ ರೋಗಿಗಳು ಇದ್ದಾರೆ. 127 ಮಂದಿ ಮೃತಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿರುವ ದೆಹಲಿಯಲ್ಲಿ 2514 ಮಂದಿ ಸೋಂಕಿತರಿದ್ದು, 53 ಜನ ಸತ್ತಿದ್ದಾರೆ. ಹಾಗೇ ರಾಜಸ್ಥಾನದಲ್ಲಿ 2034 ಕರೊನಾ ಸೋಂಕಿತರು ಇದ್ದು, 27 ಮಂದಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)
ಕರೊನಾ ವೈರಸ್, ಕೊವಿಡ್​-19, ಭಾರತ, Coronavirus, Covid-19, India,