More

    VIDEO| ಮೊದಲು ವಿಷ ಸೃಷ್ಟಿಯಾದರೂ, ನಂತರದಲ್ಲಿ ಅಮೃತವು ಹುಟ್ಟಿಕೊಂಡಿತು; ತಾಳ್ಮೆ ವಹಿಸಿ ಕರೊನಾ ಗೆಲ್ಲೋಣ: ಇದು ಶ್ರೀಗುರುವಾಣಿ

    ಕರೊನಾ ಸೋಂಕು ಹರಡದಂತೆ ತಡೆಯಲು ನಾನಾ ರೀತಿಯಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಲ್ಲೆಡೆ ನಡೆದಿದೆ. ಇದೇ ವೇಳೆ ಮೈಸೂರಿನ ಅವಧೂತ ದತ್ತಪೀಠಂನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ನಿತ್ಯವೂ ದಿಗ್ವಿಜಯ ನ್ಯೂಸ್​ನಲ್ಲಿ ಬೆಳಗ್ಗೆ ಚುಟುಕು ಪ್ರವಚನ ನೀಡುತ್ತಿದ್ದಾರೆ. ಎಲ್ಲ ಸಮಸ್ಯೆಗೂ ಯಾವುದಾದರೂ ಒಂದು ಪರಿಹಾರ ಇದ್ದೇ ಇರುತ್ತದೆ ಎನ್ನುವಂತೆ ಕರೊನಾಗೂ ಒಂದು ಪರಿಹಾರವಿದೆ ತಾಳ್ಮೆ ವಹಿಸಿ ಎಂದು ಇಂದಿನ ಪ್ರವಚನದಲ್ಲಿ ಹೇಳಿದರು.

    ಜೀವನಯೆಂದರೆ ಕಷ್ಟ-ಸುಖ ಎರಡು ಇರುತ್ತದೆ. ಆದರೆ, ಕಷ್ಟ, ದುಃಖ ಬಂದಾಗ ಮನುಷ್ಯ ಕುಗ್ಗಿ ಹೋಗುತ್ತಿದ್ದಾನೆ. ಆದರೆ ನಿಜವಾದ ಧೀರನಾದವನು ಧೈರ್ಯಗೆಡಬಾರದು. ಎಲ್ಲ ಸಮಸ್ಯೆಗೂ ಯಾವುದಾದರೂ ಒಂದು ಪರಿಹಾರ ಇದ್ದೇ ಇರುತ್ತದೆ. ಕೆಲವಕ್ಕೆ ಬೇಗ ಪರಿಹಾರ ಸಿಕ್ಕರೆ, ಕೆಲವಕ್ಕೆ ತಡವಾಗಬಹುದು. ಆದರೆ ಸಿಕ್ಕೇ ಸಿಗುತ್ತದೆ. ಉದಾಹರನೆಗೆ ದೇವರು ಮೊದಲು ವಿಷವನ್ನು ಸೃಷ್ಟಿ ಮಾಡಿದರೂ, ನಂತರ ಅಮೃತವನ್ನು ಹುಟ್ಟುಹಾಕಿದ. ಹಾಗೇ ಕಷ್ಟ ಬಂದರೂ ಅದಕ್ಕೆ ಪರಿಹಾರವು ಇರುತ್ತದೆ. ಅದಕ್ಕೆ ತಾಳ್ಮೆ ಬೇಕಷ್ಟೆ ಎಂದು ಕರೊನಾ ಪರಿಸ್ಥಿತಿಗೆ ಹೋಲಿಕೆ ಮಾಡಿದರು.

    ಇಂದು ಕರೊನಾ ತಡೆಗಟ್ಟಲು ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಿದೆ. ಇಲ್ಲವಾದಲ್ಲಿ ದಾರಿಯಲ್ಲಿ ಹೆಮ್ಮಾರಿಯನ್ನು ಮನೆಗೆ ಕರೆಯಬೇಕಾಗುತ್ತದೆ. ಹೀಗಾಗಿ ನಿಯಮಗಳನ್ನು ಪಾಲಿಸಿ. ಇಂದು ಯಾಂತ್ರಿಕತೆಯಿಂದ ಹಾಗೂ ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ ಕುಟುಂಬದೊಂದಿಗೆ ಕಾಲಕಳೆಯುವು ಸಹ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯನ್ನು ಉಯೋಗಿಸಿಕೊಳ್ಳಿ. ಒಟ್ಟಾಗಿ ಇರುವ ಸಮಯ ನಮಗೆ ಸಿಕ್ಕಿದೆ ಎಂದರು.

    ಕೊನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿ ಕರೊನಾ ಗೆಲ್ಲೋಣ ಎಂದು ಕರೆ ನೀಡಿದರು. (ದಿಗ್ವಿಜಯ ನ್ಯೂಸ್​)

    ಮನೆಯೇ ದೇವಾಲಯ, ಮನಸ್ಸೇ ಪರಮಾತ್ಮ, ಮನೆಯಲ್ಲಿರುವುದೇ ಧರ್ಮ: ಇಂದಿನ ಶ್ರೀಗುರುವಾಣಿಯಲ್ಲಿದೆ ಯಾವ ರೀತಿ ಎಂಬುದರ ವಿವರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts