More

    ತುಮಕೂರಿನಲ್ಲಿ ವಿಜಯವಾಣಿ, ದಿಗ್ವಿಜಯ ನ್ಯೂಸ್ ಆಯೋಜಿಸಿರುವ ಕಾರ್ಗಿಲ್​ ವಾಕಥಾನ್​ಗೆ ಅದ್ಧೂರಿ ಚಾಲನೆ

    ತುಮಕೂರು: ಕಾರ್ಗಿಲ್ ಯುದ್ಧದ ಗೆಲುವಿನ 25ನೇ ವಿಜಯೋತ್ಸವ ಆಚರಣೆ ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥ ತುಮಕೂರಿನಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಆಯೋಜಿಸಿರುವ ಕಾರ್ಗಿಲ್​ ವಾಕಥಾನ್​ಗೆ ಶಾಸಕ ಜ್ಯೋತಿ ಗಣೇಶ್​ ಚಾಲನೆ ನೀಡಿದರು.

    ಗಾಳಿಯಲ್ಲಿ ಬಲೂನ್ ಹಾರಿ ಬಿಡುವ ಮೂಲಕ ಜ್ಯೋತಿ ಗಣೇಶ್, ಮೇಯರ್ ಪ್ರಭಾವತಿ ಹಾಗೂ ಎಂಎಲ್​ಸಿ ರಾಜೇಂದ್ರ ಅವರು ಚಾಲನೆ ನೀಡಿದರು. ಪಾಕಿಸ್ತಾನದ ವಿರುದ್ಧ ನಮ್ಮ ಭಾರತೀಯ ಸೇನೆ ಕಾರ್ಗಿಲ್ ಯುದ್ಧದಲ್ಲಿ ವಿಜಯೋತ್ಸವ ಆಚರಿಸಿದ ಸ್ಮರಣಾರ್ಥ ‘ನಮ್ಮ ನಡಿಗೆ ದೇಶದೆಡೆಗೆ’ ಎಂಬ ಘೊಷವ್ಯಾಕ್ಯದೊಂದಿಗೆ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ವಾಕಥಾನ್ ಆರಂಭವಾಗಿದೆ.

    ಇದನ್ನೂ ಓದಿ: ಜಲಾಶಯ ಭರ್ತಿ, ಆತಂಕ ಮಾಯ: ರಾಜ್ಯಾದ್ಯಂತ ಇನ್ನಷ್ಟು ಬಿರುಸು ಪಡೆದ ಮಳೆ; ಉಕ್ಕಿ ಹರಿದ ನದಿಗಳು, ಮತ್ತೆ ನಾಲ್ವರು ಬಲಿ

    Kargil Walkathon

    ವಾಕಥಾನ್​ನಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮಾಜಿ ಸೈನಿಕರು, ಎನ್​​ಸಿಸಿ ಬೆಟಾಲಿಯನ್ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಒಟ್ಟಾಗಿ ಹೆಜ್ಜೆ ಹಾಕುವ ಮೂಲಕ ದೇಶಪ್ರೇಮದ ಕಿಚ್ಚು ಹಚ್ಚಿಸುವ ಘೊಷಣೆ ಮೊಳಗಿಸಿದರು.

    Kargil Walkathon

    2.5 ಕಿ.ಮೀ ನಡೆಯಲಿರುವ ವಾಕಥಾನ್, ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಮೂಲಕ ಸಾಗಿ ಬಿಹೆಚ್ ರಸ್ತೆ, ಭದ್ರಮ್ಮ ಚೌಟ್ರಿ ಸಿಗ್ನಲ್ ತಲುಪಿ, ಚಾಮುಂಡೇಶ್ವರಿ ಟೆಂಪಲ್, ಹೊರಪೇಟೆ, ಕೋತಿತೋಪು, ಬೆಳಗುಂಬ ರಸ್ತೆ ಮೂಲಕ ಮತ್ತೆ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಬಂದು ಸೇರಲಿದೆ. ದಾರಿಯುದ್ದಕ್ಕೂ ತಮಟೆ ವಾದ್ಯ ಹಾಗೂ ಮೀರಗಾಸೆ ನೃತ್ಯ ವಾಕಥಾನ್​ಗೆ ಮೆರುಗು ತಂದುಕೊಟ್ಟಿದೆ.

    Kargil Walkathon

    ವಾಕಥಾನ್ ಬಳಿಕ 8.30ಕ್ಕೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಗಿಲ್ ವಿಜಯ್ ದಿವಸ್ ವೇದಿಕೆ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜೋಜಿಲಾ ಟನಲ್ ರೂವಾರಿಗಳಲ್ಲೊಬ್ಬರಾದ ಕನ್ನಡಿಗ ಕರ್ನಲ್ ಎಂ.ಜಿ. ವಿಜಯ್ಕುಮಾರ್ ಪ್ರೇರಣಾ ನುಡಿಗಳನ್ನಾಡುವರು. ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್​ಕುಮಾರ್ ಶಹಾಪೂರವಾಡ್, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ಜಾಹೀರಾತು ವಿಭಾಗದ ಉಪಾಧ್ಯಕ್ಷ ಕೆ. ಅರುಣ್, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು ಕಾಳೋಜಿ ಉಪಸ್ಥಿತರಿರುವರು

    ಭಾರತದ ಕ್ಷಾತ್ರತೇಜ ಪರಂಪರೆಯ ಕದನ ಕಥನವಿದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts