More

    ತುಮಕೂರಿನಲ್ಲಿ ವಾಕಥಾನ್ ನಾಳೆ; ಕಾರ್ಗಿಲ್ ಯುದ್ಧ ಗೆಲುವಿನ 25ನೇ ವಿಜಯೋತ್ಸವ ಆಚರಣೆ

    ತುಮಕೂರು: ಕಾರ್ಗಿಲ್ ಯುದ್ಧದ ಗೆಲುವಿನ 25ನೇ ವಿಜಯೋತ್ಸವ ಆಚರಣೆ ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥ ತುಮಕೂರಿನಲ್ಲಿ ಬುಧವಾರ (ಜು.26) ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಾಕಥಾನ್ ಆಯೋಜಿಸಿದೆ. ‘ನಮ್ಮ ನಡಿಗೆ ದೇಶದೆಡೆಗೆ’ ಘೊಷವ್ಯಾಕ್ಯದೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನತೆ ಹಾಗೂ ನಾಗರಿಕರು ಹೆಜ್ಜೆ ಹಾಕಲಿದ್ದಾರೆ.

    2.6 ಕಿ.ಮೀ. ವಾಕಥಾನ್: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಆಯೋಜಿಸಿರುವ ವಾಕಥಾನ್ 2.6 ಕಿ.ಮೀ. ಇರಲಿದ್ದು, ನಗರದ ವಿವಿಧ ಶಾಲಾ-ಕಾಲೇಜುಗಳ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ದೇಶಪ್ರೇಮದ ಕಿಚ್ಚು ಹಚ್ಚಿಸುವ ಘೊಷಣೆ ಮೊಳಗಿಸಲಿದ್ದಾರೆ.

    ಇದನ್ನೂ ಓದಿ: VIDEO| ದೇಶ ಸೇವೆಗಾಗಿ ತನ್ನ 9 ತಿಂಗಳ ಮಗುವನ್ನು ಬಿಟ್ಟು ಹೋದ BSF ಮಹಿಳಾ ಯೋಧೆ

    ಬೆಳಗ್ಗೆ 6.30ಕ್ಕೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಮೇಯರ್ ಎಂ. ಪ್ರಭಾವತಿ, ಭಾರತೀಯ ಸೇನೆಯ ನಿವೃತ್ತ ಕರ್ನಲ್ ಎಂ.ಜಿ. ವಿಜಯ್ಕುಮಾರ್, ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್, ರಾಜೇಂದ್ರ ರಾಜಣ್ಣ, ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಕುಲಸಚಿವೆ ನಹಿದಾ ಜಮ್​ಜಮ್​, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್ ವಾಕಥಾನ್​ಗೆ ಚಾಲನೆ ನೀಡುವರು.

    ಸಿದ್ಧಗಂಗಾ ಶ್ರೀಗಳ ಸಾನ್ನಿಧ್ಯ: ವಾಕಥಾನ್ ಬಳಿಕ 8.30ಕ್ಕೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಗಿಲ್ ವಿಜಯ್ ದಿವಸ್ ವೇದಿಕೆ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜೋಜಿಲಾ ಟನಲ್ ರೂವಾರಿಗಳಲ್ಲೊಬ್ಬರಾದ ಕನ್ನಡಿಗ ಕರ್ನಲ್ ಎಂ.ಜಿ. ವಿಜಯ್ಕುಮಾರ್ ಪ್ರೇರಣಾ ನುಡಿಗಳನ್ನಾಡುವರು. ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಪಂ ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್​ಕುಮಾರ್ ಶಹಾಪೂರವಾಡ್, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ಜಾಹೀರಾತು ವಿಭಾಗದ ಉಪಾಧ್ಯಕ್ಷ ಕೆ. ಅರುಣ್, ದಿಗ್ವಿಜಯ ನ್ಯೂಸ್ ಸಂಪಾದಕ ಸಿದ್ದು ಕಾಳೋಜಿ ಉಪಸ್ಥಿತರಿರುವರು.

    ಸೇನೆ ಸೇರುವವರ ಪಾಲಿಗಿದು ಗುರುಕುಲ!

    ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಮುಂದಾದ ವಿಪಕ್ಷಗಳ ಇಂಡಿಯಾ ಒಕ್ಕೂಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts