ಪ್ರಪಂಚದಾದ್ಯಂತ ಮರಣದಂಡನೆ ಶಿಕ್ಷೆಗಳ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಹೊಸ ವರದಿಯ ಪ್ರಕಾರ 2024 ರಲ್ಲಿ ಒಟ್ಟು 1,518 ಜನರಿಗೆ ಮರಣದಂಡನೆ ವಿಧಿಸಲಾಗಿದೆಯಂತೆ. ಇದು 2023 ಕ್ಕೆ ಹೋಲಿಸಿದರೆ ಶೇ. 32 ರಷ್ಟು ಹೆಚ್ಚಾಗಿದೆ. ಮರಣದಂಡನೆ ವಿಧಿಸುವ ದೇಶಗಳ ಸಂಖ್ಯೆ 16 ರಿಂದ 15 ಕ್ಕೆ ಇಳಿದಿದೆ ಎನ್ನಲಾಗಿದೆ.
China | ಒಬ್ಬ ವ್ಯಕ್ತಿ ಏನಾದರೂ ತಪ್ಪು ಮಾಡಿದರೆ ಆಂತಹ ವ್ಯಕ್ತಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ. ಅಂದಹಾಗೆ ಶಿಕ್ಷೆಯಲ್ಲೇ ಅತ್ಯಂತ ಕಠಿಣ ಶಿಕ್ಷೆ ಎಂದರೆ ಅದು ಮರಣದಂಡನೆಯಾಗಿದೆ. ಯಾವ ದೇಶದಲ್ಲಿ ತಪ್ಪು ಮಾಡಿದ ಅಪರಾಧಿಗಳಿಗೆ ಹೆಚ್ಚಾಗಿ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ತಿಳಿಯೋಣ.
ಚೀನಾ ಕಾನೂನು ಪ್ರಕಟಿಸಿದ ವರದಿಯ ಪ್ರಕಾರ 2022 ರಲ್ಲಿ 14,31,585 ಪ್ರಕರಣಗಳು ನ್ಯಾಯಾಲಯಗಳಿಗೆ ಬಂದಿದ್ದು, ಇವುಗಳಲ್ಲಿ 631 ಜನರನ್ನು ಮಾತ್ರ ಆರೋಪಗಳಿಂದ ಖುಲಾಸೆಗೊಳಿಸಲಾಯಿತು ಎಂದು ಹೇಳಲಾಗಿದೆ.
ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಪ್ರಕಾರ, ಚೀನಾದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮರಣದಂಡನೆಗಳು ಜಾರಿಯಲ್ಲಿವೆ ಎಂದು ಹೇಳಲಾಗಿದೆ. ಆದರೆ ಈ ಸಂಬಂಧ ಯಾವುದೇ ನಿರ್ದಿಷ್ಟ ಡೇಟಾ ಲಭ್ಯವಿಲ್ಲ. ಚೀನಾ, ವಿಯೆಟ್ನಾಂ ಮತ್ತು ಉತ್ತರ ಕೊರಿಯಾದಲ್ಲಿ ಮರಣದಂಡನೆ ಬಹಳ ಸಾಮಾನ್ಯವಾಗಿದೆ. ಆದರೆ ಈ ದೇಶಗಳು ತಮ್ಮ ಮರಣದಂಡನೆಯ ಅಂಕಿ-ಅಂಶಗಳನ್ನು ಎಲ್ಲೂ ಪ್ರಸಾರ ಮಾಡಿಲ್ಲ.
2024 ರಲ್ಲಿ ಇರಾನ್‌ನಲ್ಲಿ 30 ಮಹಿಳೆಯರನ್ನು ಸೇರಿದಂತೆ ಕನಿಷ್ಠ 972 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಲಾಗಿದೆ. 2023 ರಲ್ಲಿ 853 ಮಂದಿಗೆ ಈ ಶಿಕ್ಷೆ ವಿಧಿಸಲಾಗಿತ್ತು, ಇನ್ನೂ ಈ ಹೆಚ್ಚಳಕ್ಕೆ ಆಂತರಿಕ ರಾಜಕೀಯ ಪ್ರಕ್ಷುಬ್ಧತೆಯೇ ಕಾರಣ ಎಂದು ಇರಾನಿನ ಮಾನವ ಹಕ್ಕುಗಳ ಕಾರ್ಯಕರ್ತರು ಹೇಳುತ್ತಾರೆ. 2022 ರಲ್ಲಿ ಮಾದಕವಸ್ತು ಸಂಬಂಧಿತ 12 ಮಹಿಳಾ ಅಪರಾಧಗಳಿಗೆ ಮತ್ತು 2023 ರಲ್ಲಿ 25 ಮಹಿಳೆಯರಿಗೆ ಮರಣದಂಡನೆ ವಿಧಿಸಲಾಗಿದೆಯಂತೆ. ಇರಾನ್ ಮತ್ತು ಸೊಮಾಲಿಯಾದಲ್ಲಿ 18 ವರ್ಷದೊಳಗಿನ ನಾಲ್ವರು ಮಂದಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ಅಮ್ನೆಸ್ಟಿ ಹೇಳಿದೆ.
ಮಾನವ ಹಕ್ಕುಗಳ ಉಲ್ಲಂಘನೆ, ಮಾದಕ ದ್ರವ್ಯಗಳು ಮತ್ತು ಭಯೋತ್ಪಾದನೆಗಾಗಿ ಇರಾನ್, ಇರಾಕ್ ಮತ್ತು ಸೌದಿ ಅರೇಬಿಯಾಗಳು ಕಳೆದ ವರ್ಷಕ್ಕಿಂತ ಶೇ. 91 ರಷ್ಟು ಹೆಚ್ಚಿನ ಮರಣದಂಡನೆಗಳನ್ನು ಜಾರಿಗೊಳಿಸಿವೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಧಾನ ಕಾರ್ಯದರ್ಶಿ ಆಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.
ಇದನ್ನೂ ಓದಿ: ಹಳೆ ಆಧಾರ್ ಕಾರ್ಡ್ಗೆ ಹೇಳಿ ಗುಡ್ಬೈ ; ಫೇಸ್ ಐಡಿ, QR ಕೋಡ್ ವೈಶಿಷ್ಟ್ಯಗಳೊಂದಿಗೆ ಹೊಸ ಆಧಾರ್ ಅಪ್ಲಿಕೇಶನ್ ಬಿಡುಗಡೆ|
(ಏಜೆನ್ಸೀಸ್)
ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆಗಾಗಿ ಚೀನಾ ಮರಣದಂಡನೆ ವಿಧಿಸುತ್ತಿದೆ ಎಂದು ಅಮ್ನೆಸ್ಟಿ ಹೇಳಿದ್ದು, ಮರಣದಂಡನೆಯನ್ನು ಅತ್ಯಂತ ಗಂಭೀರ ಅಪರಾಧಗಳಿಗೆ ಸೀಮಿತಗೊಳಿಸಬೇಕು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ. ಮಾದಕವಸ್ತು ಮತ್ತು ಲೈಂಗಿಕ ಅಪರಾಧಗಳಂತಹ ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ಸಾವಿಗೆ ಕಾರಣವಾಗದ ಅಪರಾಧಗಳಲ್ಲಿ ಶಿಕ್ಷೆಗೊಳಗಾದವರಿಗೆ ಮರಣದಂಡನೆ ವಿಧಿಸಬಾರದು ಎಂದು ವಿಶ್ವಸಂಸ್ಥೆಯು ಪ್ರಸ್ತಾಪಿಸುತ್ತದೆ.