ನ್ಯೂಸ್

ಬೆಂಗಳೂರು ಟ್ರಾಫಿಕ್ ಕುರಿತು ಡಿಸಿಎಂ ಹೇಳಿಕೆಯು ಸರ್ಕಾರದ ಅಸಹಾಯಕತೆಗೆ ಹಿಡಿದ ಕೈಗನ್ನಡಿ; ಪ್ರಲ್ಹಾದ್​​ ಜೋಶಿ | Government

Government:ಬೆಂಗಳೂರಿನ ಟ್ರಾಫಿಕ್ ಹಾಗೂ ವ್ಯವಸ್ಥೆಯ ಕುರಿತಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿರುವುದು ತೀರಾ ಹಾಸ್ಯಾಸ್ಪದ‌ ಹಾಗೂ ಕಾಂಗ್ರೆಸ್ ಸರ್ಕಾರದ ಅಸಹಾಯಕತೆಗೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ ಹೇಳಿದ್ದಾರೆ.

2 ಅಥವಾ 3 ವರ್ಷಗಳಲ್ಲಿ ದೇವರೇ ಭೂಮಿಗಿಳಿದು ಬಂದರೂ ಈ ಸಮಸ್ಯೆ ಸರಿಪಡಿಸಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಯ ಕುರಿತು ಸಚಿವ ಪ್ರಹ್ಲಾದ್​ ಜೋಶಿ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಸಂಚಾರ ನಿಯಂತ್ರಣಕ್ಕೆ ಬೇಕಿರುವುದು ದಕ್ಷತೆ, ಚಾಕಚಕ್ಯತೆ, ಉತ್ತಮ ಹಾಗೂ ದೂರದೃಷ್ಟಿಯ ನಾಯಕತ್ವ ಹೊರೆತಾಗಿ ನಿಮ್ಮ ಅಜ್ಞಾನದ ಮಾತಲ್ಲ. ಸಂಚಾರ ದಟ್ಟಣೆ ನಿವಾರಿಸಲು ಹಲವು ಟೆಕ್ನಾಲಜಿಗಳು, ಸಮೂಹ ಸಾರಿಗೆ ಪ್ರೋತ್ಸಾಹಿಸಬೇಕು ಹೊರೆತು ದರ ಏರಿಕೆ ಮಾಡುವುದು ಅಲ್ಲಾ. ಸಮರ್ಥ ನಾಯಕತ್ವದ ಕೊರತೆ ನೀಗಿದರೆ ಬೆಂಗಳೂರಿನ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತೆ ಎಂದು ಹೇಳಿದ್ದಾರೆ.