ಆಂಧ್ರಪ್ರದೇಶ: ಬಾಂಗ್ಲಾದೇಶದಲ್ಲಿರುವ ಹಿಂದು ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಮಾಡಿರುವುದನ್ನು ಆಂಧ್ರದ ಡಿಸಿಎಂ ಪವನ್ ಕಲ್ಯಾಣ್(Pawan Kalyan )ಖಂಡಿಸಿದ್ದಾರೆ. ಅಲ್ಲದೇ, ಅಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯದ ಬಗ್ಗೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದ್ದಾರೆ.
ನ.25 ರಂದು ಕೃಷ್ಣ ದಾಸ್ ಪ್ರಭು ಅವರನ್ನು ದೇಶದ್ರೋಹದ ಆರೋಪದ ಮೇಲೆ ಢಾಕಾ ವಿಮಾನ ನಿಲ್ದಾಣದಲ್ಲಿ ಢಾಕಾ ಪೊಲೀಸ್ ಡಿಟೆಕ್ಟಿವ್ ಬ್ರಾಂಜ್ ಬಂಧಿಸಿದೆ. ಬಳಿಕ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ನೆರೆಯ ದೇಶದಲ್ಲಿ ಹಿಂದುಗಳ ಮೇಲಿನ ಹಿಂಸಚಾರ ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಪ್ರಭು ಅವರನ್ನು ಬಂಧಿಸಿ ಜಾಮೀನು ನಿರಾಕರಣೆ ಹಿನ್ನೆಲೆ, ಭಾರತ ವಿದೇಶಾಂಗ ಸಚಿವಾಲಯ ಸೇರಿ ಬಾಂಗ್ಲದಲ್ಲಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಇದೇ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿರುವ ಡಿಸಿಎಂ ಪವನ್ ಕಲ್ಯಾಣ್, ''ಹಿಂದು ಸನ್ಯಾಸಿ ಚಿನ್ಮೋಯ್ ಕೃಷ್ಣ ದಾಸ್ ಪ್ರಭು ಅವರ ಬಂಧವನ್ನು ಖಂಡಿಸಿಲು ಎಲ್ಲರೂ ಒಂದಾಗೋಣ, ಹಿಂದುಗಳ ಮೇಲಿ ದೌರ್ಜನ್ಯ ನಿಲ್ಲಿಸುವಂತೆ ಮೊಹಮ್ಮದ್ ಯೂನಿಸ್ ನೇತೃತ್ವದ ಸರ್ಕಾರವನ್ನು ನಾವು ಒತ್ತಾಯಿಸುತ್ತಿದ್ದೇವೆ. ಬಾಂಗ್ಲಾದೇಶ ರಚನೆಗಾಗಿ ನಮ್ಮ ಭಾರತೀಯ ಸೇನೆಯೂ ರಕ್ತ ಚೆಲ್ಲಿದೆ. ನಮ್ಮ ಸಂಪನ್ಮೂಲಗಳನ್ನು ವ್ಯಯಿಸಲಾಗಿದೆ. ನಮ್ಮ ಸೇನಾ ಯೋಧರ ಪ್ರಾಣವನ್ನು ಕಳೆದುಕೊಂಡಿದ್ದೇವೆ.
ನಮ್ಮ ಹಿಂದು ಸಹೋದರ, ಸಹೋದರಿಯರನ್ನು ಗುರಿಯಾಗಿಸಿಕೊಂಡು ದೌರ್ಜನ್ಯವೆಸಗುತ್ತಿವುದರಿಂದ ನಾವು ತೀವ್ರ ವಿಚಲಿತರಾಗಿದ್ದೇವೆ. ಈ ದೌರ್ಜನ್ಯವನ್ನು ತಡೆಯಲು ನಾವು ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು'' ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಆಗ್ರಹಿಸಿದ್ದಾರೆ, (ಏಜೆನ್ಸೀಸ್).