ಸಾಂದರ್ಭಿಕ ಚಿತ್ರ 
ನ್ಯೂಸ್

VIDEO |ಆಸ್ತಿ ವಿವಾದ; ಅತ್ತೆಯ ಜುಟ್ಟು ಹಿಡಿದು ಹೊಡೆದ ಸೊಸೆ

ಸೂರತ್: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅತ್ತೆಯ ಮೇಲೆ ಸೊಸೆ ಅಮಾನುಷವಾಗಿ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗುಜರಾತ್‌ನ ಸೂರತ್‌ನಲ್ಲಿ ಕುಟುಂಬದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ವಾಗ್ವಾದ ನಡೆದಿದೆ. ಈ ಕುರಿತಾಗಿ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಸೊಸೆ ಅತ್ತೆಗೆ ಹೊಡೆಯುತ್ತಿದ್ದಾಳೆ. ಅಲ್ಲೇ ಇದ್ದ ಮಾವ, ಮಧ್ಯಪ್ರವೇಶಿ ವಯಸ್ಸಾದ ಪತ್ನಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಆದರೆ ಸೊಸೆ ಮಾತ್ರ ಅತ್ತೆಯನ್ನು ಹಿಡಿದು ಹೊಡೆಯುತ್ತಿದ್ದಾಳೆ. ಸೊಸೆ ಅತ್ತೆಯ ಮುಖದ ಮೇಲೆ ಕಚ್ಚಿದ ಗುರುತುಗಳು ಕಾಣುತ್ತವೆ.

 ಈ ಕುರಿತಾಗಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆಯಾ? ಎನ್ನುವ ಮಾಹಿತಿ ದೊರಕಿಲ್ಲ.