More

    ನನ್ನ ಪ್ರೇಯಸಿಯನ್ನು ನನಗೆ ಕೊಡಿಸಿ: ಸಲಿಂಗ ಸಂಗಾತಿಗಾಗಿ ಕೋರ್ಟ್​ ಮೆಟ್ಟಿಲೇರಿದ ಯುವತಿ!

    ಮಲಪ್ಪುರಂ: ಯುವತಿಯೊಬ್ಬಳು ತನ್ನ ಸಲಿಂಗ ಸಂಗಾತಿಗಾಗಿ ಹೇಬಿಯಸ್​ ಕಾರ್ಪಸ್​ ಅರ್ಜಿ ಹಿಡಿದು ಹೈಕೋರ್ಟ್​ ಮೆಟ್ಟಿಲೇರಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

    ಸುಮಯ್ಯ ಶೆರಿನ್​ ಮತ್ತು ಹಫಿಫಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಒಟ್ಟಿಗೆ ವಾಸವಿದ್ದರು. ಆದರೆ, ಹಫಿಫಾ ಅವರ ಕುಟುಂಬ ಆಕೆಯನ್ನು ಎಳೆದೊಯ್ದು ಗೃಹ ಬಂಧನದಲ್ಲಿ ಇರಿಸಿದ್ದಾರೆ. ಹೀಗಾಗಿ ಆಕೆಯನ್ನು ಹುಡುಕಿಕೊಡುವಂತೆ ಹೈಕೋರ್ಟ್​ಗೆ ಸುಮೈಯಾ ಹೇಬಿಯಸ್​ ಕಾರ್ಪಸ್​ ಸಲ್ಲಿಸಿದ್ದಾಳೆ.

    ನ್ಯಾಯಾಲಯವೇ ಅನುಮತಿ ನೀಡಿದೆ

    ಜನವರಿ 27ರಂದು ಇಬ್ಬರು ಮನೆ ಬಿಟ್ಟು ಬಂದ ಬಳಿಕ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗಿದ್ದ ಎಲ್ಲ ಸವಾಲುಗಳನ್ನು ಮಲಪ್ಪುರಂ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ಬಗೆಹರಿಸಿಕೊಂಡಿದ್ದೇವೆ ಮತ್ತು ನಾವಿಬ್ಬರು ಒಟ್ಟಿಗೆ ಜೀವಿಸಲು ನ್ಯಾಯಾಲಯವೇ ಅನುಮತಿ ನೀಡಿದೆ. ಆದರೆ, ನಾವಿಬ್ಬರು ಒಟ್ಟಿಗೆ ಇರುವಾಗ ಹಫಿಫಾ ಅವರ ಮನೆಯವರು ಅವಳನ್ನು ನನ್ನಿಂದ ದೂರ ಮಾಡಿದ್ದಾರೆ. ನಾನು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್‌ ಅರ್ಜಿಗೆ ಕುಟುಂಬವು ಇನ್ನೂ ಪ್ರತಿಕ್ರಿಯಿಸಿಲ್ಲ. ಇದೇ ಸಂದರ್ಭದಲ್ಲಿ ಅವರ ಪರ ವಕೀಲರು ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶವನ್ನು ಕೇಳಿದ್ದಾರೆ. ವಕೀಲರ ಮನವಿಗೆ ನ್ಯಾಯಾಲಯವೂ ಸಮ್ಮತಿಸಿದೆ. ಸಮಯ ಕೇಳಿರುವುದರಿಂದ ಏನಾದರೂ ಕುತಂತ್ರ ನಡೆಸುತ್ತಾರೆ ಎಂಬ ಭಯವಿದೆ ಸುಮಯ್ಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಡಿಜಿಟಲ್ ಪಾವತಿ, ಭಾರತ ನಂ.1: 2022ರಲ್ಲಿ ನಡೆದ ನಗದು ವರ್ಗಾವಣೆ | ಜಾಗತಿಕ ವಹಿವಾಟಿನಲ್ಲಿ ಇಂಡಿಯಾ ಪಾಲು ಶೇ. 46

    ಬಲವಂತವಾಗಿ ಕರೆದೊಯ್ದಿದ್ದಾರೆ

    ನಾವು ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ ನಂತರ, ನಮ್ಮ ಕುಟುಂಬಗಳ ಸಂಪರ್ಕವನ್ನು ಕಡಿದುಕೊಂಡೆವು. ಆದರೆ, ಇತ್ತೀಚೆಗಷ್ಟೇ ನಾವು ಆಕೆಯ ಸಂಬಂಧಿಕರ ಕೈಗೆ ಸಿಕ್ಕಿಬಿದ್ದಾಗ, ನಾವಿರುವ ಸ್ಥಳದ ಬಗ್ಗೆ ಅವರಿಗೆ ಗೊತ್ತಾಗಿದೆ. ಕೆಲವೇ ದಿನಗಳಲ್ಲಿ ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಒಟ್ಟಿಗೆ ಬದುಕಲು ನಿರ್ಧರಿಸುವ ಮೊದಲು ನಾವಿಬ್ಬರೂ 2 ವರ್ಷಗಳ ಕಾಲ ಪ್ರೀತಿಸುತ್ತಿದ್ದೆವು. ನನಗೆ ನನ್ನ ಹಫಿಫಾಳನ್ನು ಕೊಡಿಸಿ ಎಂದು ನ್ಯಾಯಾಲಯಕ್ಕೆ ಸುಮಯ್ಯ ಮನವಿ ಮಾಡಿದ್ದಾಳೆ. (ಏಜೆನ್ಸೀಸ್​)

    ಸಹಜೀವನ ಕೊಲೆಯಲ್ಲಿ ಪರ್ಯವಸಾನ!; ಬೆಂಗಳೂರಲ್ಲೂ ನಡೆದಿವೆ ಬರ್ಬರ ಕೊಲೆಗಳು, ಕೆಲ ತಿಂಗಳಲ್ಲಿ ಹಲವು ಪ್ರಕರಣ ದಾಖಲು

    ಲೋಕಸಭಾ ಚುನಾವಣೆ, 20 ಕಡೆ ಕೈ ಹೊಸ ಹುರಿಯಾಳು?; ಬಿಜೆಪಿ ಬಳಿಕ ಕಾಂಗ್ರೆಸ್​ನಲ್ಲೂ ಬಿರುಸಿನ ಚಟುವಟಿಕೆ, ಸಮರ್ಥ ಅಭ್ಯರ್ಥಿಗಳಿಗಾಗಿ ಆಪರೇಷನ್ ಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts