More

    ಶಿಕ್ಷಣದಿಂದ ಬದಲಾವಣೆ ಸಾಧ್ಯ, ಕಸ್ವಿ ಹಸಿರು ದಿಬ್ಬಣ ಸಹಯೋಗದಲ್ಲಿ ನಡೆದ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ

    ಮಂಗಳೂರು: ಶಿಕ್ಷಣ ಅಭಿವೃದ್ದಿಗೆ ಪೂರಕವಾಗಿದ್ದು, ಸಮಾಜದ ಬದಲಾವಣೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪಾಲಿಕೆ ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಹೇಳಿದರು.

    ಮಂಗಳೂರಿನ ಎಕ್ಕೂರು ಪರಿಸರದಲ್ಲಿ ಕಸ್ವಿ ಹಸಿರು ದಿಬ್ಬಣ ಮಂಗಳೂರು ವತಿಯಿಂದ ನಡೆದ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಶಿಕ್ಷಣದಿಂದ ಬದಲಾವಣೆ ಸಾಧ್ಯವಿದ್ದು, ಪರಿಸರ ರಕ್ಷಣೆ ವಿಚಾರಗಳು ಪಠ್ಯಪುಸ್ತಕದಲ್ಲಿ ರಬೇಕಾದ ಅಗತ್ಯತೆ ಇದೆ. ಹುಟ್ಟುಹಬ್ಬಕ್ಕೆ ಗಿಡ ನೆಡುವವರಿಗೆ ಪ್ರೋತ್ಸಾಹಕವಾಗಿ ಪ್ರಮಾಣ ಪತ್ರ ನೀಡುತ್ತಾ ಬರುತ್ತಿರುವ ಕಸ್ವಿ ಹಸಿರು ದಿಬ್ಬಣದ ಕಾರ್ಯ ಶ್ಲಾಗನೀಯ ಇಂತಹ ಪರಿಸರ ಕಾಳಜಿ ಜಾಗೃತಿಯಿಂದ ಮುಂದೆ ಬಹುದೊಡ್ಡ ಪ್ರಕೃತಿಯಲ್ಲಿನ ಹಸಿರಿನ ಬದಲಾವಣೆ ಸಾದ್ಯ ಎಂದರು.

    ಮೀನುಗಾರಿಕಾ ವಿದ್ಯಾಲಯದ ಪ್ರೊಫೆಸರ್ ಡಾ.ಶಿವಕುಮಾರ್ ಮಗದ ಮಾತನಾಡಿ, ಔದಾಸಿನ್ಯದಿಂದ ಕಡೆಗಣಿಸುವ ಉದ್ಯೋಗ ಯಾವುದು ಇಲ್ಲ. ಯಾವುದು ಮೇಲಲ್ಲ ಯಾವುದು ಕೀಳಲ್ಲ, ಒಬ್ಬ ವ್ಯಕ್ತಿ ಮಾಡುತ್ತಿರುವ ಕೆಲಸ ಓಣಿ ಗುಡಿಸುವುದೇ ಆಗಿರಬಹುದು ಆದರೆ ನೀನು ಗುಡಿಸಿದ ಓಣಿ ಪ್ರಪಂಚದಲ್ಲೇ ಅಚ್ಚುಕಟ್ಟಾದ ಓಣಿಯಗಿರಬೇಕು. ಇದೇ ರೀತಿ ಕಸ್ವಿ ಹಸಿರು ದಿಬ್ಬಣ ತಂಡದ ಪರಿಸರ ಜಾಗೃತಿ ಕಾರ್ಯವು ಪ್ರಕೃತಿ ರಕ್ಷಣೆಯಲ್ಲಿ ಬಹುದೊಡ್ಡ ಕಾರ್ಯವಾಗಲಿದೆ ಎಂದರು.

    ಚಲನಚಿತ್ರ ನಟ ಅರವಿಂದ ಬೋಳಾರ್ ಕಾರ್ಯಕ್ರಮ ಉದ್ಟಾಟಿಸಿದರು. ಚಲನಚಿತ್ರ ನಿರ್ದೇಶಕ ಸುಮನ್ ಸುವರ್ಣ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶಶಿಧರ್ ಶೆಟ್ಟಿ, ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷ ಶ್ರದ್ಧಾ ರಾಮಕುಂಜ, ಹರೀಶ್ ಅಡ್ಯಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

    ಎಕ್ಕೂರು ಪರಿಸರದಲ್ಲಿ ಕಳೆದ ಹಲವು ವರುಷದಿಂದ ಪೌರ ಕಾರ್ಮಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯಮುನಾ, ದಿನಪತ್ರಿಕೆ ಮನೆಮನೆಗೆ ವಿತರಕ ತಿಮ್ಮಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

    ಕಸ್ವಿ ಹಸಿರು ದಿಬ್ಬಣ ತಂಡದ ಕೇಶವ ರಾಮಕುಂಜ ಸ್ವಾಗತಿಸಿದರು. ಸಂಪತ್ ಶೆಟ್ಟಿ ವಂದಿಸಿದರು.

    ————-

    ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ನಮ್ಮ ಅತ್ಯಂತ ಮುಖ್ಯ ಜವಾಬ್ದಾರಿಗಳಲ್ಲೊಂದು. ನೈಸರ್ಗಿಕ ಪರಿಸರವನ್ನು ನಾವು ರಕ್ಷಿಸದೇ ಹೋದರೆ ಭೂಮಿತಾಯಿಗೆ ದ್ರೋಹವೆಸಗಿದಂತಾಗುತ್ತದೆ. ಇಂದಿನ ಜಗತ್ತಿನ ಅತಿವೇಗದ ಬೆಳವಣಿಗೆಯಲ್ಲಿ, ನಾವು ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದು, ನೈಸರ್ಗಿಕ ಪರಿಸರಕ್ಕೆ ಅಭಿವೃದ್ಧಿಯೇ ಮಾರಕವೆನಿಸುವ ಮಟ್ಟಕ್ಕೆ ಜಾಗತಿಕವಾಗಿ ಮಾಲಿನ್ಯಸಮಸ್ಯೆ ಎದುರಾಗಿದೆ.

    ಅರವಿಂದ ಬೋಳಾರ್, ಚಲನಚಿತ್ರ ನಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts