More

    ಡಿಜಿಟಲ್ ಪಾವತಿ, ಭಾರತ ನಂ.1: 2022ರಲ್ಲಿ ನಡೆದ ನಗದು ವರ್ಗಾವಣೆ | ಜಾಗತಿಕ ವಹಿವಾಟಿನಲ್ಲಿ ಇಂಡಿಯಾ ಪಾಲು ಶೇ. 46

    ನವದೆಹಲಿ: ಕರೊನಾ ಸಾಂಕ್ರಾಮಿಕದ ವೇಳೆ ಹೆಚ್ಚಳವಾದ ಡಿಜಿಟಲ್ ಪಾವತಿ ಭಾರತದಲ್ಲಿ ವೇಗ ಪಡೆದಿದ್ದು, 2022ರಲ್ಲಿ ಭಾರತದ ಒಟ್ಟಾರೆ ಡಿಜಿಟಲ್ ವಹಿವಾಟು 8.95 ಕೋಟಿಯಷ್ಟಿದೆ.

    ಜಾಗತಿಕ ಮಟ್ಟದ ವಾಸ್ತವಿಕ ಸಮಯ (ರಿಯಲ್ ಟೈಂ) ಪಾವತಿಯ ವ್ಯವಹಾರದಲ್ಲಿ ಭಾರತದ ಪಾಲು ಶೇ. 46. 2025ರ ಹೊತ್ತಿಗೆ ಇದು ಶೇ. 71.7 ಮುಟ್ಟುವ ಅಂದಾಜಿದೆ. ಡಿಜಿಟಲ್ ವ್ಯವಹಾರದಲ್ಲಿ ಮುಂಚೂಣಿಯಲ್ಲಿರುವ ನಾಲ್ಕು ದೇಶಗಳ ಒಟ್ಟಾರೆ ವಹಿವಾಟಿನ ಸಂಖ್ಯೆಗಿಂತಲೂ ಭಾರತದ ಡಿಜಿಟಲ್ ವ್ಯವಹಾರ ಅಧಿಕವಾಗಿದ್ದು, ಮೊದಲ ಸ್ಥಾನದಲ್ಲಿದೆ ಎಂದು ಮೈಗೌಇಂಡಿಯಾ (MyGovIndia) ತಿಳಿಸಿದೆ. ಈ ಮಾಹಿತಿಯನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಕೂಡ ಟ್ವೀಟ್ ಮಾಡಿದ್ದಾರೆ.

    ಭಾರತದ ಒಟ್ಟಾರೆ ಡಿಜಿಟಲ್ ಪಾವತಿಯು ಮೌಲ್ಯ ಮತ್ತು ಪರಿಮಾಣದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದರಿಂದ ಭಾರತದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ತಂತ್ರಜ್ಞಾನ ಅಳವಡಿಕೆ ಪ್ರಗತಿದಾಯಕವಾಗಿರುವುದನ್ನು ತೋರಿಸುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಯ) ತಜ್ಞರ ವರದಿ ಕೂಡ ಹೇಳಿದೆ.

    ಡಿಜಿಟಲ್ ಪಾವತಿಯಲ್ಲಿ ದೇಶದಲ್ಲಿ ಆಗಿರುವ ಕ್ರಾಂತಿಯು ಭಾರತದವನ್ನು ಜಾಗತಿಕವಾಗಿ ಮುಂಚೂಣಿಯಲ್ಲಿ ನಿಲ್ಲಿಸಿರುವುದು ಮಾತ್ರವಲ್ಲ ತಾಂತ್ರಿಕವಾಗಿ ಭಾರತ ಸಾಧಿಸಿರುವ ನೈಪುಣ್ಯ ಮತ್ತು ಎಲ್ಲರನ್ನು ಒಳಗೊಂಡ ದಕ್ಷ ಹಣಕಾಸು ವ್ಯವಸ್ಥೆ ನಿರ್ವಣದ ಮಾದರಿಯನ್ನು ಹಾಕಿಕೊಟ್ಟಿದೆ ಎಂದು ವರದಿ ತಿಳಿಸಿದೆ.

    ಚಹರೆ ರಹಿತ, ಕಾಗದ ರಹಿತ, ನಗದು ರಹಿತ ಉದ್ದೇಶದಿಂದ ಭಾರತದಲ್ಲಿ ಡಿಜಿಟಲ್ ಪಾವತಿಯು 2015ರಲ್ಲಿ ಆರಂಭವಾಯಿತು. ಇದಕ್ಕೆ ಬೆಂಬಲವಾಗಿದ್ದು, ವಾಸ್ತವಿಕ ಸಮಯದ ಅಂದರೆ ಮೊಬೈಲ್ ಮೂಲಕ ಪಾವತಿದಾರ ಮತ್ತು ಸ್ವೀಕರಿಸುವವರ ಬ್ಯಾಂಕ್ ಖಾತೆಯನ್ನು ಸಂರ್ಪಸುವ ಏಕೀಕೃತ ಪಾವತಿ ಸಮನ್ವಯ ವೇದಿಕೆ (ಯುಪಿಐ). 2016ರಲ್ಲಿ ಸರ್ಕಾರ ಇದರ ಸುರಕ್ಷತೆ ಹೆಚ್ಚಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್​ಪಿಸಿಐ)ಕ್ಕೆ ಚಾಲನೆ ನೀಡಿತು.

    ಈ ಆರೇಳು ವರ್ಷದಲ್ಲಿ ಡಿಜಿಟಲ್ ಪಾವತಿಯು ಒಟ್ಟಾರೆ ವ್ಯವಹಾರದ ಅರ್ಧಕ್ಕಿಂತಲೂ ಅಧಿಕವಾಗಿ ಬೆಳೆದಿದೆ. ಇದನ್ನು ಸಾಧ್ಯವಾಗುವಂತೆ ಮಾಡಿದ್ದು ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕದ ಪಾವತಿ. ಇದೇ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಸಿಂಗಾಪುರ ಮಧ್ಯೆ ಅಂತರ್ ದೇಶೀಯ ಯುಪಿಐ ಪಾವತಿಗೆ ಚಾಲನೆ ಸಿಕ್ಕಿರುವುದು ಮತ್ತೊಂದು ಮೈಲಿಗಲ್ಲಾಗಿದೆ.

    ಡಿಜಿಟಲ್ ಪಾವತಿ, ಭಾರತ ನಂ.1: 2022ರಲ್ಲಿ ನಡೆದ ನಗದು ವರ್ಗಾವಣೆ | ಜಾಗತಿಕ ವಹಿವಾಟಿನಲ್ಲಿ ಇಂಡಿಯಾ ಪಾಲು ಶೇ. 46

    ಡಿಜಿಟಲ್ ಪಾವತಿಯಲ್ಲಿ ಬೆಂಗಳೂರು ಪ್ರಥಮ

    ದೇಶದೊಳಗೆ ಡಿಜಿಟಲ್ ಪಾವತಿಯಲ್ಲಿ ಮುಂಚೂಣಿ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿ ಇದೆ. 2.90 ಕೋಟಿ ವಹಿವಾಟು ಬೆಂಗಳೂರಿನಲ್ಲಿ ನಡೆದಿದ್ದು, ವಹಿವಾಟಿನ ಮೊತ್ತ 6,500 ಕೋಟಿ ರೂ. ಎಂದು ವರ್ಡ್ ಲೈನ್ ಇಂಡಿಯಾದ ವರದಿಇತ್ತೀಚೆಗೆ ತಿಳಿಸಿದೆ. ಬೆಂಗಳೂರು ನಂತರದ ನಾಲ್ಕು ಸ್ಥಾನದಲ್ಲಿ ಕ್ರಮವಾಗಿ ಮುಂಬೈ, ನವದೆಹಲಿ, ಪುಣೆ ಮತ್ತು ಚೆನ್ನೈ ನಗರಗಳಿವೆ.

    ಪ್ರಧಾನಿ ಮೋದಿ ಹೇಳಿದ್ದೇನು?

    ಭಾರತ ಡಿಜಿಟಲ್ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದು ಗ್ರಾಮೀಣ ಆರ್ಥಿಕತೆಯಲ್ಲಿನ ಮಹತ್ವದ ಬದಲಾವಣೆಯನ್ನು ದಾಖಲಿಸುತ್ತದೆ ಎಂದು ಈ ವರ್ಷದ ಆರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಭಾರತದಲ್ಲಿ ವ್ಯಾಪಕವಾಗಿ ಮೊಬೈಲ್ ಡೇಟಾ ಬಳಕೆ ಆಗುತ್ತಿದ್ದು, ಇದು ಡಿಜಿಟಲ್ ಪಾವತಿ ಆಯ್ಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಡಿಜಿಟಲ್ ಪಾವತಿಯಿಂದಾಗಿ ಗ್ರಾಮೀಣರು ಬ್ಯಾಂಕಿಂಗ್ ಪ್ರಕ್ರಿಯೆಯಲ್ಲಿ ಒಳಗಾಗುವುದು ಅಧಿಕವಾಗಿದೆ. ನಗದು ಮೇಲಿನ ಅವಲಂಬನೆಯನ್ನು ತಗ್ಗಿಸಿರುವುದರಿಂದ ಡಿಜಿಟಲ್ ಪಾವತಿಯು ಪರಿಸರ ಕಾಳಜಿಯನ್ನು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಂಡಂತೆ ಆಗಿದೆ ಎಂದೂ ಮೋದಿ ತಿಳಿಸಿದ್ದರು.

    824 ಲಕ್ಷ ಕೋಟಿ ರೂಪಾಯಿಗೆ ಏರುವ ಅಂದಾಜು: ಭಾರತದಲ್ಲಿ ಈಗ ಡಿಜಿಟಲ್ ಪಾವತಿಯ ಮೂಲಕ ಸರಿಸುಮಾರು 247 ಲಕ್ಷ ಕೋಟಿ ರೂ.(3 ಟ್ರಿಲಿಯನ್ ಡಾಲರ್) ವಹಿವಾಟು ನಡೆಯುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಅಂದರೆ 2026ರ ವೇಳೆಗೆ ಇದು 824 ಲಕ್ಷ ಕೋಟಿ ರೂ. ಸಾಧ್ಯತೆ ಎಂದು ಫೋನ್​ಪೇ ಮತ್ತು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿ ತಿಳಿಸಿದೆ.

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts