More

    ಲೋಕಸಭಾ ಚುನಾವಣೆ, 20 ಕಡೆ ಕೈ ಹೊಸ ಹುರಿಯಾಳು?; ಬಿಜೆಪಿ ಬಳಿಕ ಕಾಂಗ್ರೆಸ್​ನಲ್ಲೂ ಬಿರುಸಿನ ಚಟುವಟಿಕೆ, ಸಮರ್ಥ ಅಭ್ಯರ್ಥಿಗಳಿಗಾಗಿ ಆಪರೇಷನ್ ಹಸ್ತ

    ಬೆಂಗಳೂರು: ಲೋಕಸಭೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿರುವಂತೆ ಕಾಂಗ್ರೆಸ್​ನಲ್ಲೂ ಚಟುವಟಿಕೆ ಜೋರಾಗಿದೆ. ವಿಧಾನಸಭೆ ಚುನಾವಣೆಯ ದೊಡ್ಡ ಗೆಲುವಿನ ಖುಷಿಯಲ್ಲಿರುವ ಕಾರ್ಯಕರ್ತರ ಪಡೆ ತಡಮಾಡದೇ ಲೋಕಸಭೆ ಚುನಾವಣೆಗೆ ಸಜ್ಜಾಗಬೇಕೆಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂದೇಶ ಕಳಿಸಿದ್ದಾರೆ.

    ಲೋಕಸಭೆ ಚುನಾವಣೆಗೆ ಪರೋಕ್ಷ ತಯಾರಿ, ಚರ್ಚೆಗಳು ನಡೆದಿದೆ. ಕ್ಷೇತ್ರವಾರು ವಿಚಾರ ವಿನಿಮಯ ಕೂಡ ನಡೆದಿದೆ. 28 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಸಮರ್ಥ ಅಭ್ಯರ್ಥಿ ಇನ್ನೂ ಸಿಕ್ಕಿಲ್ಲ. ಕಳೆದ ಬಾರಿ ಕಣದಲ್ಲಿದ್ದವರ ಪೈಕಿ ಹೆಚ್ಚೆಂದರೆ 8 ಮಂದಿ ಮಾತ್ರ ಪುನಃ ಕಣಕ್ಕಿಳಿಯುವ ಉಮೇದಿನಲ್ಲಿದ್ದಾರೆ. ಉಳಿದ 20 ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಯತ್ನದಲ್ಲಿ ಪಕ್ಷ ಇದೆ.

    ವಿಜಯವಾಣಿಗೆ ಲಭ್ಯವಾದ ಖಚಿತ ಮಾಹಿತಿ ಪ್ರಕಾರ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕೊರತೆ ಇದೆ. ಆಕಾಂಕ್ಷಿಗಳು ಇದ್ದರೂ ಸಮರ್ಥವಾಗಿಲ್ಲ. ಇನ್ನು ಕೆಲವು ಕಡೆ ಆಕಾಂಕ್ಷಿಗಳು ಕೂಡ ಇಲ್ಲದ ಸ್ಥಿತಿ ಇದೆ. ಹೀಗಾಗಿ ಪಕ್ಷದ ಪ್ರಮುಖ ನಾಯಕರ ಕುಟುಂಬ ಸದಸ್ಯರನ್ನೋ ಅಥವಾ ಬಿಜೆಪಿಯಿಂದ ಆಪರೇಷನ್ ನಡೆಸಿ ಅಭ್ಯರ್ಥಿಗಳನ್ನು ಸಿದ್ಧಗೊಳಿಸಲು ಪ್ರಮುಖ ನಾಯಕರು ಚಿಂತನೆ ನಡೆಸಿದ್ದಾರೆ.

    ಎಲ್ಲೆಲ್ಲಿ ಆಪರೇಷನ್?: ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪ್ರಕಾಶ್ ಹುಕ್ಕೇರಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಈ ಕಾರಣದಿಂದ ಅಲ್ಲಿಗೆ ಅಭ್ಯರ್ಥಿ ಕೊರತೆ ಕಾಡುತ್ತಿದ್ದು, ಬಿಜೆಪಿಯಿಂದ ಆಪರೇಷನ್ ನಡೆಸಿ ಅಭ್ಯರ್ಥಿ ಹೂಡಲು ಕಾಂಗ್ರೆಸ್ ದಾಪುಗಾಲಿಟ್ಟು ಕಾರ್ಯಾಚರಣೆ ಆರಂಭಿಸಿದೆ. ರಮೇಶ್ ಕತ್ತಿ ಅವರನ್ನು ಸೆಳೆಯುವುದು ಕೈ ನಾಯಕರ ಬಯಕೆ. 2009ರ ಲೋಕಸಭೆ ಚುನಾವಣೆಯಲ್ಲಿ ಅವರು ಆ ಕ್ಷೇತ್ರ ಪ್ರತಿನಿಧಿಸಿದ ಅನುಭವ ಇದೆ.

    ಲೋಕಸಭಾ ಚುನಾವಣೆ, 20 ಕಡೆ ಕೈ ಹೊಸ ಹುರಿಯಾಳು?; ಬಿಜೆಪಿ ಬಳಿಕ ಕಾಂಗ್ರೆಸ್​ನಲ್ಲೂ ಬಿರುಸಿನ ಚಟುವಟಿಕೆ, ಸಮರ್ಥ ಅಭ್ಯರ್ಥಿಗಳಿಗಾಗಿ ಆಪರೇಷನ್ ಹಸ್ತಹುಬ್ಬಳ್ಳಿ- ಧಾರವಾಡ ಲೋಕಸಭೆ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಆಶಯ ಪಕ್ಷದ್ದು. ಅವರು ಒಪ್ಪದೇ ಹೋದರೆ ಅಥವಾ ಅವರ ಪರ ಒಲವು ವ್ಯಕ್ತವಾಗದೇ ಹೋದರೆ ಬೇರೆ ಆಯ್ಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವುದು. ಇಲ್ಲವಾದರೆ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪರನ್ನು ಬಿಜೆಪಿಯಿಂದ ಕರೆತಂದು ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ. ಇದೇ ರೀತಿ ಇನ್ನೂ ಎರಡು ಕಡೆ ಬಿಜೆಪಿಯ ಅಸಮಾಧಾನಿತರನ್ನು ಕರೆತಂದು ಕಣಕ್ಕಿಳಿಸುವ ಆಲೋಚನೆ ಇದೆ. ಪ್ರಮುಖವಾಗಿ ಲಿಂಗಾಯತ ಸಮುದಾಯದ ನಾಯಕರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ.

    ಬಿಜೆಪಿಯ ಜತೆಗಿದ್ದ ಲಿಂಗಾಯತ ಸಮಾಜ ವಿಧಾನಸಭೆ ಚುನಾವಣೆಯಲ್ಲಿ ಚದುರಿ ಹೋಗಿದೆ. ಅದರ ಪೂರ್ಣ ಲಾಭ ಕಾಂಗ್ರೆಸ್​ಗಾಗಿದೆ. ಲೋಕಸಭೆ ಚುನಾವಣೆಯೂ ಅದೇ ಯೋಜನೆ ಕಾರ್ಯಗತ ಮಾಡುವ ಕಾರ್ಯತಂತ್ರ ಹಣೆಯಲಾಗುತ್ತಿದೆ.

    ಪ್ರಮುಖವಾಗಿ ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನೇ ಲೋಕಸಭೆಯಲ್ಲೂ ಅನುಸರಿಸಲು ಪಕ್ಷ ಬಯಸಿದೆ. ಚುನಾವಣಾ ಖಾಸಗಿ ತಂತ್ರಗಾರರ ನೆರವು ಪಡೆದುಕೊಂಡು ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿ ಆಯ್ಕೆ, ಚುನಾವಣೆ ಪ್ರಚಾರ, ಭರವಸೆ ನೀಡಲು ಈಗಾಗಲೆ ತೀರ್ವನಿಸಲಾಗಿದೆ.

    ಹೊಸ ಮುಖಗಳು: ಮೈಸೂರು ಲೋಕಸಭಾ ಕ್ಷೇತ್ರದಿಂದ ಸಮರ್ಥ ಅಭ್ಯರ್ಥಿ ಎಂದರೆ ಮುಖ್ಯಮಂತ್ರಿ ಪುತ್ರ ಯತೀಂದ್ರ ಮಾತ್ರ ಎಂದು ಕಾಂಗ್ರೆಸ್ ನಾಯಕರು ನಿರ್ಧರಿಸಿದಂತೆ ಕಾಣಿಸುತ್ತಿದೆ. ಅವರ ಹೆಸರೇ ಪ್ರಧಾನವಾಗಿ ಕೇಳಿಬರುತ್ತಿದೆ. ಬೆಂಗಳೂರು ಉತ್ತರದಿಂದ ಮೊಹಮದ್ ನಲಪಾಡ್ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಲು ಪಕ್ಷದ ನಾಯಕರು ಇಚ್ಛಿಸಿದ್ದಾರೆ. ಬೆಳಗಾವಿಯಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಟಿಕೆಟ್ ನೀಡಿದರೆ ಕ್ಷೇತ್ರ ಗೆಲ್ಲಬಹುದೆಂದು ಅಂದಾಜಿಸಿದ್ದು, ಸತೀಶ್ ಜಾರಕಿಹೊಳಿ ಪುತ್ರಿ ಹೆಸರು ಮುಂಚೂಣಿಯಲ್ಲಿದೆ. ತುಮಕೂರಿನಿಂದ ವಾಗ್ಮಿ ನಿಕೇತ್​ರಾಜ್ ಮೌರ್ಯ ಅವರನ್ನು ಕಣಕ್ಕೆ ಇಳಿಸಲು ಪಕ್ಷದ ನಾಯಕರು ಚಿಂತನೆ ನಡೆಸಿದ್ದಾರೆ.

    ಮೂರನೇ ಮಗುವಾದರೆ 5 ಲಕ್ಷ ರೂ. ಕೊಡ್ತಾರಂತೆ!; ಶಿಕ್ಷಣ-ಚಿಕಿತ್ಸೆಯೂ ಉಚಿತ, ಮದ್ವೆ ಖರ್ಚಿಗೂ ಧನಸಹಾಯ: ಇಲ್ಲಿದೆ ವಿವರ..

    ಇನ್ನು ಹಾಡು ಕೇಳುತ್ತ ಸ್ನಾನ ಮಾಡಲ್ಲ ಎಂದು ಕ್ಷಮೆ ಕೋರಿದ ವಿದ್ಯಾರ್ಥಿನಿ!; ದಯವಿಟ್ಟು ಫೋನ್​ ಹಿಂದಿರುಗಿಸಿ ಎಂದು ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts