ಬಳ್ಳಾರಿ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಎದುರು ಸಂಕಷ್ಟಗಳ ಸರಮಾಲೆಯೇ ಇದ್ದು ಬೇಲ್ ಸಿಗುವುದು ಡೌಟ್ ಎಂದು ಹೇಳಲಾಗಿದೆ. ಜೈಲಿನಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ನಟ ದರ್ಶನ್ರನ್ನು ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿಗೆ ಹೊದ ಬಳಿಕ ದಾಸ ಪೊಲೀಸರ ಬಳಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದರು. ಇದೀಗ ನಟ ದರ್ಶನ್ ಬೇಡಿಕೆಗೆ ಜೈಲಿನ ಅಧಿಕಾರಿಗಳು ಹಬ್ಬದ ದಿನದಂದು ಅವರಿಗೆ ಗಿಫ್ಟ್ ಸಿಕ್ಕಿದೆ ಎಂದು ಹೇಳಬಹುದಾಗಿದೆ.
ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಬಳಿಕ ತಮಗೆ ಟಿವಿ ವ್ಯವಸ್ಥೆ ಮಾಡಿಕೊಡುವಂತೆ ಜೈಲಧಿಕಾರಿಗಳ ಮುಂದೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಮ್ಮತಿಸಿರುವ ಅಧಿಕಾರಿಗಳು ಇಂದು (ಸೆಪ್ಟೆಂಬರ್ 07) ಬೆಳಗ್ಗೆ ನಟ ದರ್ಶನ್ ಇರುವ ಸೆಲ್‌ಗೆ ಟಿವಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ರೇಣುಕಸ್ವಾಮಿ ಹತ್ಯೆ, ಚಾರ್ಜ್‌ಶೀಟ್ ಸಲ್ಲಿಕೆ ಹಾಗೂ ಜೈಲಿನಿಂದ ಹೊರಗೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತಿದೆ ಎಂಬುದನ್ನು ತಿಳಿಯಲು ನಟ ದರ್ಶನ್ ಟವಿಗಾಗಿ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ಕೊಟ್ಟಿರುವ ಅಧಿಕಾರಿಗಳು ಹಬ್ಬದ ದಿನದಂದೇ ಅವರಿಗೆ ಗಿಫ್ಟ್ ಕೊಟ್ಟಿದ್ದಾರೆ ಎಂದು ಹೇಳಬಹುದಾಗಿದೆ.
ಟಿವಿಯ ಜೊತೆಗೆ ನಟ ದರ್ಶನ್ ಇಲ್ಲಿನ ಜೈಲಿನಲ್ಲಿದ್ದ ಇಂಡಿಯನ್ ಟಾಯ್ಲೆಟ್ ಬದಲಿಗೆ ವೆಸ್ಟರ್ನ್ ಕಮೋಡ್ ಬೇಕೆಂದು ಮನವಿ ಮಾಡಿದ್ದರು. ಅದರಂತೆ ಪೊಲೀಸರು ವೆಸ್ಟರ್ನ್ ಟಾಯ್ಲೆಟ್ ವ್ಯವಸ್ಥೆಯೂ ಮಾಡಿ ದರ್ಶನ್ ಕೋರಿಕೆ ಈಡೇರಿಸಿದ್ದರು. ಇದೀಗ ಅವರ ಟಿ.ವಿ. ಬೇಡಿಕೆಯೂ ಈಡೇರಿದೆ. ಇದರ ಜೊತೆಗೆ ನಟ ದರ್ಶನ್ಗೆ ಹಬ್ಬದ ಪ್ರಯುಕ್ತ ಸಿಹಿ ಊಟ ಕೂಡ ವ್ಯವಸ್ಥೆ ಮಾಡಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಳ್ಳಾರಿ ಜೈಲಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಕೈದಿಗಳಿಗಾಗಿ ಪ್ರತಿ ವರ್ಷ ಗಣೇಶನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಬ್ಬದ ಪ್ರಯುಕ್ತ ಎಲ್ಲಾ ಕೈದಿಗಳಿಗೆ ಮಧ್ಯಾಹ್ನ ಸಿಹಿ ಊಟ ಕೂಡ ನೀಡಲಾಗುತ್ತದೆ. ಆದರೆ ನಟ ದರ್ಶನ್ಗೆ ಗಣೇಶನ ದರ್ಶನ ಭಾಗ್ಯ ಇಲ್ಲ ಎನ್ನಲಾಗಿದೆ. ಹೈ ಸೆಕ್ಯುರಿಟಿ ಸೆಲ್ ನಲ್ಲಿರುವ ನಟ ದರ್ಶನ್ ಭದ್ರತೆ ದೃಷ್ಟಿಯಿಂದ ನಟ ದರ್ಶನ್ ಗೆ ಗಣೇಶನ ದರ್ಶನ ಭಾಗ್ಯ ಇಲ್ಲ ಎನ್ನಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಕೈದಿಗಳು ನಟನನ್ನು ನೋಡಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದರ್ಶನ್ಗೆ ಹಬ್ಬದ ದಿನದಂದು ಗಣಪನ ದರ್ಶನ ಭಾಗ್ಯ ಇಲ್ಲದಂತಾಗಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕಾರಾಗೃಹ ಹಿರಿಯ ಅಧಿಕಾರಿಗಳು ವಿಶೇಷ ರೂಲ್ಸ್ ಜಾರಿ ತಂದಿದ್ದಾರೆ. ಅದೇನಂದ್ರೆ, ದರ್ಶನ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಬೇಕು ಹಾಗೂ ಆ ಸೆಲ್‌ಗೆ ದಿನದ 24 ಗಂಟೆಯೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಪ್ರತಿದಿನವೂ ಈ ರೆಕಾರ್ಡಿಂಗ್‌ಗಳನ್ನು ಸ್ಟೋರೇಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದರ್ಶನ್ ಇರುವ ಸೆಲ್ ಕಾಯಲು ಪ್ರತ್ಯೇಕವಾಗಿ ಒಬ್ಬ ಅಧಿಕಾರಿ ನೇಮಿಸಲಾಗಿದೆ. ಈ ಸೆಲ್‌ಗೆ ಜೈಲರ್ ಪ್ರತಿದಿನ ಭೇಟಿ ನೀಡಿ ಭದ್ರತೆಯನ್ನು ಚೆಕ್ ಮಾಡುತ್ತಿದ್ದಾರೆ. ಜೈಲಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸೆಲ್‌ಗೆ ಬೀಗ ಹಾಕುವುದು ಮತ್ತು ಬೀಗ ತೆಗೆಯುವುದು ನಡೆಯಲಿದೆ. ದರ್ಶನ್ ಸೆಲ್‌ಗೆ ನಿಯೋಜಿಸುವ ಅಧಿಕಾರಿ ಕಡ್ಡಾಯವಾಗಿ ಬಾಡಿವೋರ್ನ್' ಕ್ಯಾಮೆರಾ ಧರಿಸಲಿದ್ದಾರೆ. ಹಾಗಾಗಿ ದರ್ಶನ್ ಅವರ ಪ್ರತಿ ಚಲನವಲನವೂ ಕಣ್ಗಾವಲಿನಲ್ಲಿದೆ.