ನ್ಯೂಸ್

ಹತ್ಯೆಗೂ ಮುನ್ನ ಪಬ್​ನಲ್ಲಿ ಪಾರ್ಟಿ ಮಾಡಿದ್ದ ದರ್ಶನ್ ಗ್ಯಾಂಗ್​! ಬಯಲಾಯ್ತು ಸ್ಪೋಟಕ ಮಾಹಿತಿ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್​ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಇದೀಗ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ. ಇನ್ನು ಜೂ.20ರವರೆಗೂ ಹತ್ಯೆ ಕೇಸ್​ನ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿರಲಿ ಎಂದು ನ್ಯಾಯಾಲಯ ಆದೇಶಿಸಿತು. ಅದರಂತೆಯೇ ಇದೀಗ ದರ್ಶನ್​ ಮತ್ತು ಇತರೆ ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ಇನ್ನು ಇಂದು ದರ್ಶನ್​ ಸೇರಿದಂತೆ ಇತರೆ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡುತ್ತಿರುವ ಪೊಲೀಸರು, ರೇಣುಕಸ್ವಾಮಿ ಹತ್ಯೆ ಘಟನೆ ನಡೆಯುವ ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಬಾರ್​ ಅಂಡ್​ ರೆಸ್ಟೋರೆಂಟ್​ನಲ್ಲಿ ದರ್ಶನ್​ ಮತ್ತು ಗ್ಯಾಂಗ್​ ಪಾರ್ಟಿ ಮಾಡಿದ್ದನ್ನು ವಿಚಾರಣೆಯಿಂದ ತಿಳಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾರ್​ ಜಾಗವನ್ನು ಮಹಜರು ಮಾಡಿದ್ದಾರೆ. ಮಹಜರಿಗೆ ನಟ ದರ್ಶನ್​ನನ್ನು ಕೂಡ ಕರೆತಂದಿದ್ದಾರೆ.

ದರ್ಶನ್ ಮತ್ತು ಆತನ ಸಹಚರರನ್ನು ಸ್ಥಳಕ್ಕೆ ಕರೆತಂದ ಅನ್ನಪೂರ್ಣೆಶ್ವರಿ ನಗರ ಪೊಲೀಸರು, ಹತ್ಯೆಯಾದ ರೇಣುಕಸ್ವಾಮಿ ಮೊಬೈಲ್ ಪತ್ತೆಗಾಗಿ ಶೋಧ ನಡೆಸಿದ್ದಾರೆ. ಫೋನ್ ಸಿಗದ ಕಾರಣ ಅಲ್ಲಿಂದ ಪಬ್​ನತ್ತ ಹಿಂತಿರುಗಿದ್ದಾರೆ.