ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಎ2 ಆರೋಪಿ ದರ್ಶನ್ ಜಾಮೀನು (Darshan Bail) ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ಕೋರ್ಟ್ ಇದೀಗ ಮತ್ತೊಮ್ಮೆ ವಿಚಾರಣೆ ಮುಂದೂಡಿದ್ದು, ಅ.09ಕ್ಕೆ ಮುಂದೂಡಿದೆ.
ಪ್ರಸ್ತುತ ಬಳ್ಳಾರಿ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಜಾಮೀನು ಅರ್ಜಿಯನ್ನು ಈ ಹಿಂದೆ ಕೋರ್ಟ್ ಅ.08ಕ್ಕೆ ಮುಂದೂಡಿತ್ತು. ದರ್ಶನ್ ಜತೆಗೆ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಸಹ ಮುಂದೂಡಿಕೆ ಮಾಡಿತ್ತು. ಅದರಂತೆಯೇ ಇಂದು ದರ್ಶನ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಇದೀಗ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.