ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್ (Darshan) ಹಾಗೂ ಇನ್ನಿತರರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಡಿಸೆಂಬರ್ 09ಕ್ಕೆ ಮುಂದೂಡಿದೆ.
ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ಡಿಸೆಂಬರ್ 09ಕ್ಕೆ ಮುಂದೂಡಿ ಆದೇಶಿಸಿದ್ಧಾರೆ.
ಬೆನ್ನು ನೋವಿನ ಕಾರಣ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ (Darshan) ಅವರ ಬೇಲ್ ಅವಧಿ ಮುಂದಿನ ವಾರ ಮುಕ್ತಾಯವಾಗಲಿದ್ದು, ಡಿಸೆಂಬರ್ 10 ಅಥವಾ 11ಕ್ಕೆ ಶರಣಾಗಬೇಕಿದೆ. ಒಂದು ವೇಳೆ ರೆಗ್ಯೂಲರ್ ಜಾಮೀನು ಸಿಗದಿದ್ದರೆ ನಟ ದರ್ಶನ್ ಅವರ ಹಾದಿ ಕಷ್ಟ ಎಂದು ಹೇಳಲಾಗಿದ್ದು, ಇದೆಲ್ಲದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ (Darshan) ಚಿಕಿತ್ಸೆ ಪಡೆಯುತ್ತಿರುವ ವೈರಲ್ ಆಗಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.