ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಲವಂತವಾಗಿ ದನದ ಮಾಂಸವನ್ನು ತಿನ್ನಿಸಿ ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಪೊಲೀಸರು ಶೋಯೆಬ್, ನಜೀಂ ಹಾಗೂ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೃತ್ಯವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆಹಿಡಿದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ಸಂತ್ರಸ್ತ ಮಹಿಳೆ ತನ್ನ ಗೆಳತಿ ಬಳಿ ಸಾಲ ಪಡೆದಿದ್ದು, ಅದನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ. ಇದಕ್ಕೊಪ್ಪಿದ್ದ ಸಂತ್ರಸ್ತೆಯ ಸ್ನೇಹಿತೆ ಆಕೆಯನ್ನು ಕೆಫೆ ಒಂದಕ್ಕೆ ಬರಲು ಹೇಳಿದ್ದಾಳೆ. ಬಳಿಕ ಸ್ನೇಹಿತೆಯ ಜೊತೆಗಿದ್ದ ಆರೋಪಿಗಳಾದ ಶೋಯೆಬ್ ಹಾಗೂ ನಜೀಂ ಹತ್ತರಿದಲ್ಲಿದ್ದ ತಮ್ಮ ರೂಮಿಗೆ ಕರೆದೊಯ್ದಿದ್ದಾರೆ.
ತಮ್ಮ ರೂಮಿಗೆ ತೆರಳಿದ ಬಳಿಕ ಆರೋಪಿಗಳಿಬ್ಬರು ಜ್ಯೂಸಿಗೆ ಮತ್ತು ಬರುವ ಔಷಧಿ ಬೆರೆಸಿ ಆಕೆಗೆ ನೀಡಿದ್ದಾರೆ. ಇದನ್ನು ಕುಡಿದ ಬಳಿಕ ಆರೋಪಿಗಳಿಬ್ಬರು ಆಕೆಯ ಮೇಲೆ ಆತ್ಯಾಚಾರ ಎಸಗಿದ್ದು, ಇದನ್ನು ಸಂತ್ರಸ್ತೆಯ ಸ್ನೇಹಿತೆ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದ್ದಾಳೆ. ಬಳಿಕ ಸಂತ್ರಸ್ತೆಗೆ ವಿಡಿಯೋ ತೋರಿಸಿ ಬೆದರಿಸಲು ಶುರು ಮಾಡಿದ ಆರೋಪಿಗಳು ಆಕೆಗೆ ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದಾರೆ.
ಇದಕ್ಕೊಪ್ಪದಿದ್ದಾಗ ಆರೋಪಿಗಳು ಸಂತ್ರಸ್ತೆಯ ಮನೆಯವರಿಗೆ ವಿಡಿಯೋ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ತೀವ್ರವಾಗಿ ನೊಂದಿದ್ದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಕಾಶ್ಮೀರದಲ್ಲಿ ತಲೆಮಾರಿಸಿಕೊಂಡಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಚಾರ್ಜ್ಶೀಟ್ ಸಿದ್ದಪಡಿಸಲಾಗಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.