ನ್ಯೂಸ್

ನಿದ್ರಿಸುತ್ತಿದ್ದ ಯುವಕನನ್ನು ಗುಂಡಿಕ್ಕಿ ಕೊಂದ ಮೇಲ್ವರ್ಗದ ಯುವಕರು...

ಲಖನೌ: ಉತ್ತರಪ್ರದೇಶದ ಅಮ್ರೋಹಾ ಎಂಬಲ್ಲಿ ಯುವಕನೋರ್ವನನ್ನು, ಮೇಲ್ವರ್ಗದ ನಾಲ್ಕು ಯುವಕರು ಸೇರಿ ಗುಂಡಿಟ್ಟು ಕೊಂದಿದ್ದಾರೆ.

17 ವರ್ಷದ ಯುವಕ ವಿಕಾಸ್​ ಜಾತವ್​ ರಾತ್ರಿ ಮನೆಯಲ್ಲಿ ಮಲಗಿದ್ದ. ಈ ವೇಳೆ ಡಾಮ್ಖೇಡಾ ಎಂಬ ಗ್ರಾಮದಿಂದ ಬಂದ ನಾಲ್ವರು ಯುವಕರು ಆತನಿಗೆ ಗುಂಡಿಕ್ಕಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮಾಸ್ಕ್ ಮೂಲಕವೂ ರಾಜಕೀಯ ಪ್ರಚಾರ!

ವಿಕಾಸ್​ ದೇವಸ್ಥಾನವೊಂದಕ್ಕೆ ಹೋಗಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ವಿಚಾರಕ್ಕಾಗಿ ಈ ಮೇಲ್ಜಾತಿಯ ಯುವಕರು ಗಲಾಟೆ ಮಾಡಿದ್ದರು. ಮಾ 31ರಂದು ಆರೋಪಿ ಯುವಕರು ಮತ್ತು ವಿಕಾಸ್​ ನಡುವೆ ಜಗಳವಾಗಿತ್ತು. ಅದೇ ದ್ವೇಷದಿಂದ ಆತನನ್ನು ಹತ್ಯೆ ಮಾಡಿದ್ದಾರೆ ಎಂದು ವಿಕಾಸ್​ ತಂದೆ ಹೇಳಿದ್ದಾರೆ. ಇದನ್ನೂ ಓದಿ: ಆನ್‌ಲೈನ್ ಶಿಕ್ಷಣ ಕುರಿತು ಸಭೆ ನಡೆಸಿದ ಸುರೇಶ್‌ಕುಮಾರ್; ಏನಾಯಿತು ನಿರ್ಧಾರ?

ಚೌಹಾಣ್​ ಸಮುದಾಯಕ್ಕೆ ಸೇರಿದ ಒಂದಷ್ಟು ಯುವಕರು ಮಾ. 31ರಂದು ನನ್ನ ಮಗನನ್ನು ದೇವಸ್ಥಾನಕ್ಕೆ ಹೋಗದಂತೆ ತಡೆದಿದ್ದಾರೆ. ಯಾವ ಕಾರಣಕ್ಕೆ ತಡೆದರು ಎಂಬುದು ನಮಗೆ ಗೊತ್ತಾಗಲಿಲ್ಲ. ಈ ಮೊದಲು ಇಂಥ ತಾರತಮ್ಯವನ್ನೆಂದಿಗೂ ಎದುರಿಸಿರಲಿಲ್ಲ. ನನ್ನ ಮಗನನ್ನು ತಡೆದಿದ್ದಲ್ಲದೆ, ಅವನಿಗೆ ಥಳಿಸಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಆತನನ್ನು ಸ್ಥಳೀಯರು ಕೆಲವರು ರಕ್ಷಿಸಿದ್ದರು.

ಪೊಲೀಸರಿಗೂ ಈ ಗಲಾಟೆಯ ವಿಚಾರ ಗೊತ್ತಿತ್ತು. ಆದರೆ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೇ ದ್ವೇಷದಿಂದ ಶನಿವಾರ ರಾತ್ರಿ ಚೌಹಾಣ್​ ಸಮುದಾಯಕ್ಕೆ ಸೇರಿದ ನಾಲ್ವರು ನಮ್ಮ ಮನೆಗೆ ಬಂದು ಮಗನನ್ನು ಕೊಂದಿದ್ದಾರೆಂದು ತಂದೆ ಓಂ ಪ್ರಕಾಶ್​ ಹೇಳಿದ್ದಾರೆ. ಇದನ್ನೂ ಓದಿ: ನಾಮಪತ್ರದ ಜತೆ ಸಲ್ಲಿಸಲು 10 ಸಾವಿರ ರೂ. ಯಾರು ಕೊಡ್ತೀರಿ ಎಂದು ಕೇಳಿದ ಖರ್ಗೆ!

ಮೃತನ ತಂದೆ ನೀಡಿದ ಹೇಳಿಕೆಯನ್ನಾಧರಿಸಿ ದೂರು ದಾಖಲಿಸಿಕೊಂಡಿದ್ದೇವೆ. ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರನ್ನು ಶೀಘ್ರವೇ ಬಂಧಿಸಿ ತನಿಖೆ ನಡೆಸುತ್ತೇವೆ ಎಂದು ಸ್ಥಳೀಯ ಎಸ್​ಪಿ ಮಾಹಿತಿ ನೀಡಿದ್ದಾರೆ.