ನ್ಯೂಸ್

ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ: ಇದು ಷಡ್ಯಂತ್ರ ಎಂದ ಮಲ್ಲಿಕಾರ್ಜುನ ಖರ್ಗೆ! Jagdeep Dhankhar

Jagdeep Dhankhar: ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ಅವರು ರಾಜೀನಾಮೆ ನೀಡಿದ ನಂತರ ಉದ್ಬವಿಸಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಬೇಕೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾವನ್ನು ಒತ್ತಾಯಿಸಿದ್ದಾರೆ.

ರಾಜೀನಾಮೆ ಕುರಿತು ಮಾತನಾಡಿರುವ ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ, ಇದೊಂದು ಆಘಾತಕಾರಿ ಘಟನೆಯಾಗಿದ್ದು, ಈ ವಿಷಯವಾಗಿ ಸರ್ಕಾರ ಸ್ಪಷ್ಠನೆ ನೀಡಬೇಕು. ಧನಕರ್ ರಾಜೀನಾಮೆ ಬಗ್ಗೆ ಬಿಜೆಪಿ ಸರ್ಕಾರದ ಮೌನವನ್ನು ಗಮನಿಸಿದರೆ, ಈ ದಿಢೀರ್ ಬೆಳವಣಿಗೆಯ ಹಿಂದೆ ಏನೋ ಷಡ್ಯಂತ್ರವಿದೆ ಎನ್ನುವುದಂತು ಸ್ಪಷ್ಟ ಎಂದು ಆರೋಪಿಸಿದ್ದಾರೆ.

ಧನಕರ್ ಏಕೆ ರಾಜೀನಾಮೆ ನೀಡಿದರು ಎಂಬುದಕ್ಕೆ ಸರ್ಕಾರವೇ ಉತ್ತರಿಸಬೇಕು. ನನಗೆ ' ದಲ್ ಮೇ ಕುಚ್ ಕಾಲಾ ಹೈ ' ಎಂದು ಅರ್ಥವಾಗುತ್ತಿದೆ. ಅವರ ಆರೋಗ್ಯ ಚೆನ್ನಾಗಿದೆ. ಅವರು ಯಾವಾಗಲೂ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಸಮರ್ಥಿಸಿಕೊಂಡವರು. ಅವರ ರಾಜೀನಾಮೆಯ ಹಿಂದೆ ಯಾರ ಕೈವಾಡವಿದೆ ಮತ್ತು ಅದಕ್ಕೆ ಕಾರಣ ಏನು ಎನ್ನುವುದು ದೇಶಕ್ಕೆ ತಿಳಿಯಬೇಕು ಎಂದರು.

ಜಗದೀಪ್ ಧನಕರ್ ರಾಜೀನಾಮೆ ಘೋಷಿಸಿದ 15 ಗಂಟೆಗಳ ನಂತರ ಮಂಗಳವಾರ(ಜುಲೈ 22) ಪ್ರಧಾನಿ ನರೇಂದ್ರ ಮೋದಿ ಮಾಡಿದ ಟ್ವೀಟ್, ಬಿರುಕಿನ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ಪುಷ್ಠಿ ನೀಡಿದೆ. ಮೋದಿ ಟ್ವೀಟ್ ವಿಷಯವಾಗಿ ತಿರುಗೇಟು ನೀಡಿರುವ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಪ್ರಧಾನಿ ಮಾಡಿರುವ ಟ್ವೀಟ್​ ನೋಡಿದರೆ "ರಾಜೀನಾಮೆಯ ರಾಜಕೀಯ ಸ್ವರೂಪವನ್ನು" ತೋರಿಸಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)