ಮೇಷ: ಬೋಧಕರಿಗೆ ಉತ್ತಮ ದಿನ. ವ್ಯಾಪಾರಿಗಳಿಗೆ ಖರ್ಚು ಸರಿದೂಗಿಸುವುದು ಸಾಹಸವೆನಿಸುವುದು. ಕುಲದೇವರ ಮೊರೆ ಹೋಗಿ. ಶುಭಸಂಖ್ಯೆ: 7
ವೃಷಭ: ಕುಟುಂಬದ ಆಗುಹೋಗುಗಳು ಪ್ರಭಾವ ಬೀರಲಿವೆ. ಸರ್ಕಾರಿ ಕೆಲಸಗಳಲ್ಲಿ ಉತ್ತಮ ಗತಿ. ಕಲಾವಿದರಿಗೆ ಹೆಚ್ಚೆಚ್ಚು ಅವಕಾಶಗಳು. ಶುಭಸಂಖ್ಯೆ: 7
ಮಿಥುನ: ಮಗಳ ವಿವಾಹದಲ್ಲಿ ಮಂದಗತಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಬರುವುದು. ಆರೋಗ್ಯದ ಕಡೆ ಹೆಚ್ಚು ಗಮನವಿರಲಿ. ಶುಭಸಂಖ್ಯೆ: 6
ಕಟಕ: ಚಿಂತೆಗಳು ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು, ಬೋಧಕರಿಗೆ ಅನುಕೂಲ. ಸಂಬಂಧಗಳನ್ನು ತೂಗಿಸಿಕೊಂಡು ವ್ಯವಹರಿಸಿ. ಶುಭಸಂಖ್ಯೆ: 8
ಸಿಂಹ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಕಚೇರಿಯಲ್ಲಿ ಇಲ್ಲಸಲ್ಲದ ತಕರಾರು ಬಂದೀತು. ಕುಟುಂಬದಲ್ಲಿ ಮಾನಹಾನಿ. ಆರ್ಥಿಕ ಬಿಕ್ಕಟ್ಟು . ಶುಭಸಂಖ್ಯೆ: 5
ಕನ್ಯಾ: ಹೋಟೆಲ್ ಉದ್ಯಮಿಗಳಿಗೆ ಕೆಲಸಗಾರರಿಂದ ಒತ್ತಡ. ಉಪಕಾರ ಮಾಡುವಿರಿ. ದುಷ್ಟ ಜನರಿಂದ ದೂರವಿರಿ. ದುಃಖದ ಸನ್ನಿವೇಶ. ಶುಭಸಂಖ್ಯೆ: 3
ತುಲಾ: ಅತಿ ತಿರುಗಾಟ. ವಾಹನ ದುರಸ್ತಿಗೆ ಧನವ್ಯಯ. ಸ್ನೇಹಿತನಿಂದ ನಂಬಿಕೆ ದ್ರೋಹ. ಚಂಚಲ ಮನಸ್ಸು. ಹಳೆಯ ಬಾಕಿ ವಸೂಲಿ. ಶುಭಸಂಖ್ಯೆ: 6
ವೃಶ್ಚಿಕ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ. ಉದ್ಯೋಗದಲ್ಲಿ ಕಿರಿ-ಕಿರಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ. ಸಣ್ಣಪುಟ್ಟ ವಿಷಯಗಳಿಂದ ಕಲಹ. ಶುಭಸಂಖ್ಯೆ: 9
ಧನುಸ್ಸು: ಉದ್ಯೋಗಸ್ಥ ಮಹಿಳೆಯರಿಗೆ ಕಂಪನಿ ಬದಲಾವಣೆಯತ್ತ ಆಸಕ್ತಿ. ಷೇರು ವ್ಯವಹಾರಗಳಲ್ಲಿ ಲಾಭ. ನೂತನ ಕೆಲಸಗಳಲ್ಲಿ ಭಾಗಿ. ಶುಭಸಂಖ್ಯೆ: 3
ಮಕರ: ಕಾರ್ಯಗಳಲ್ಲಿ ವಿಳಂಬ. ಅವಿವಾಹಿತರಿಗೆ ವಿವಾಹ ಸಿದ್ದಿ. ವ್ಯಾಜ್ಯಗಳಿಂದ ಕಿರಿಕಿರಿ. ಧರ್ಮದಲ್ಲಿ ಆಸಕ್ತಿ. ತಾಯಿಯಿಂದ ಸಹಾಯ. ಶುಭಸಂಖ್ಯೆ: 7
ಕುಂಭ: ಅನವಶ್ಯಕ ವಸ್ತುಗಳ ಖರೀದಿಗೆ ಅಧಿಕ ವೆಚ್ಚ ಮಾಡುವಿರಿ. ಕಾರ್ಯ ಬದಲಾವಣೆ. ವಿನಾಕಾರಣ ದ್ವೇಷ. ಪರಸ್ತ್ರಿಯಿಂದ ತೊಂದರೆ. ಶುಭಸಂಖ್ಯೆ: 3
ಮೀನ: ಉದ್ಯೋಗದಲ್ಲಿ ಅನಿರೀಕ್ಷಿತ ತಿರುವು. ವಾಹನ ರಿಪೇರಿಯಿಂದ ಖರ್ಚು. ಅನವಶ್ಯಕ ವಿಷಯಗಳಿಂದ ದೂರವಿರುವುದು ಲೇಸು. ಶುಭಸಂಖ್ಯೆ: 6