ನ್ಯೂಸ್

ಈ ರಾಶಿಯವರಿಗಿಂದು ಹಿತಶತ್ರುಗಳ ಬಾಧೆ ಜಾಸ್ತಿಯಾಗಬಹುದು: ನಿತ್ಯಭವಿಷ್ಯ

ಮೇಷ: ತಾಳ್ಮೆ ಇರಲಿ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿಯಾಗಿ ಸಮಾಧಾನ. ಶುಭಸಂಖ್ಯೆ: 9

ವೃಷಭ: ಪತ್ನಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆಕಸ್ಮಿಕವಾಗಿ ಧನಲಾಭ. ಮಾನಸಿಕ ಒತ್ತಡ ಹೆಚ್ಚಾಗುವುದು. ಶುಭಸಂಖ್ಯೆ: 1

ಮಿಥುನ: ಹಿತಶತ್ರುಗಳ ಬಾಧೆ ಜಾಸ್ತಿಯಾಗಬಹುದು. ಸಮಾಜದಲ್ಲಿ ಮನ್ನಣೆ ಸಿಗುವುದು. ಬಂಧುಗಳ ಭೇಟಿ. ಜೇನು ಕೃಷಿ ಪ್ರಾರಂಭ. ಶುಭಸಂಖ್ಯೆ: 5

ಕಟಕ: ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಿ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಒತ್ತಡ ಹೆಚ್ಚು. ಸಹೋದರರೊಂದಿಗೆ ಜಗಳ. ಶುಭಸಂಖ್ಯೆ: 2

ಸಿಂಹ: ವೈದ್ಯ ವಿದ್ಯೆಯಲ್ಲಿ ನಿರಾಸಕ್ತಿ ಕಾಡತೊಡಗುವುದು. ಕಾರ್ವಿುಕ ವರ್ಗದವರಿಗೆ ಶುಭದಾಯಕ ದಿನ. ದಾಂಪತ್ಯದಲ್ಲಿ ಸಾಮರಸ್ಯ. ಶುಭಸಂಖ್ಯೆ: 7

ಕನ್ಯಾ: ಮೋಜು ಮಸ್ತಿಗೆ ಅಧಿಕ ಖರ್ಚು. ಆರೋಗ್ಯದಲ್ಲಿ ಏರುಪೇರು. ನೇಕಾರಿಕೆ, ಬಟ್ಟೆ ಮಾರಾಟದ ವ್ಯವಹಾರದಲ್ಲಿ ಹಣ ಸಂಪಾದನೆ. ಶುಭಸಂಖ್ಯೆ: 6

ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ. ಐಷಾರಾಮಿ ವಸ್ತುಗಳನ್ನು ಕೊಳ್ಳುವಿರಿ. ಕಾನೂನು ವ್ಯಾಜ್ಯಗಳಲ್ಲಿ ಜಯ. ಶುಭಸಂಖ್ಯೆ: 2

ವೃಶ್ಚಿಕ: ಪಿತೃ ವರ್ಗದಿಂದ ಧನಸಹಾಯ ಒದಗಿಬರಲಿದೆ. ಉದ್ಯೋಗದಲ್ಲಿ ನೆಮ್ಮದಿ ಇರಲಿದೆ. ಕೌಟುಂಬಿಕ ಕಲಹ ತಾರಕಕ್ಕೆ ಹೋದೀತು. ಶುಭಸಂಖ್ಯೆ: 6

ಧನಸ್ಸು: ರೋಗ ನಿಮಿತ್ತ ವರ್ಗಾವಣೆಯಾಗುವ ಸಂಭವ. ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಿಸುವಿರಿ. ಮನೆಯಲ್ಲಿ ಅಶಾಂತಿ. ಶುಭಸಂಖ್ಯೆ: 3

ಮಕರ: ಸಿನಿಮಾರಂಗದವರಿಗೆ ಶುಭದಿನ. ಸಂಬಂಧಿಗಳಿಂದ ಧನಸಹಾಯ. ಯಂತ್ರೋಪಕರಣಗಳಿಂದ ತೊಂದರೆ ಉಂಟಾಗುವುದು. ಶುಭಸಂಖ್ಯೆ: 4

ಕುಂಭ: ಭವಿಷ್ಯದ ಬಗ್ಗೆ ಚಿಂತೆ ಕಾಡುವುದು. ಹೋಟೆಲ್ ಮಾಲೀಕರಿಗೆ ಉತ್ತಮ ಆದಾಯ ಬರಲಿದೆ. ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 8

ಮೀನ: ವಿಚ್ಛೇದಿತ ಮಹಿಳೆಗೆ ಮರುವಿವಾಹ ಯೋಗ. ವಾಣಿಜ್ಯ ವಿದ್ಯಾರ್ಥಿಗಳಿಗೆ ಹಿನ್ನಡೆ. ರಾಜಕಾರಣಿಗಳ ಅಗತ್ಯ ಸಹಕಾರ ಸಿಗುವುದು. ಶುಭಸಂಖ್ಯೆ: 7