ಮೇಷ: ಬಂಧುಗಳನ್ನು ವಿನಾಕಾರಣ ದ್ವೇಷಿಸುವಿರಿ. ಕುಟುಂಬದಲ್ಲಿ ಮನಸ್ತಾಪ. ಕಚೇರಿಯ ಕೆಲಸವನ್ನು ಮನಃಪೂರ್ವಕವಾಗಿ ಮಾಡಿ. ಶುಭಸಂಖ್ಯೆ: 5
ವೃಷಭ: ನಿವೇಶನ ಖರೀದಿ ಮಾಡಲು ಕೃಷಿಕರ ಯೋಚನೆ. ದೇವರಲ್ಲಿ ಭಕ್ತಿ ಹೆಚ್ಚಾಗುವುದು. ಪರರ ಕೆಲಸಗಳಿಗೆ ಖರ್ಚು ಮಾಡುವಿರಿ. ಶುಭಸಂಖ್ಯೆ: 9
ಮಿಥುನ: ವಿದೇಶ ಪ್ರಯಾಣಕ್ಕೆ ಅಡೆತಡೆ. ಇಷ್ಟದೇವರನ್ನು ಸ್ಮರಣೆ ಮಾಡಿ. ಶತ್ರುಗಳನ್ನು ಜಯಿಸುವಿರಿ. ಅನ್ಯರಿಗೆ ಉಪಕಾರ ಮಾಡುವಿರಿ. ಶುಭಸಂಖ್ಯೆ: 3
ಕಟಕ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಭೂ ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ. ಶುಭಸಂಖ್ಯೆ: 7
ಸಿಂಹ: ಗುರುಗಳನ್ನು ಭೇಟಿ ಮಾಡುವಿರಿ. ಬಹುಜನರಲ್ಲಿ ವಿರೋಧ ಕಟ್ಟಿಕೊಳ್ಳುವುದು ತರವಲ್ಲ. ಗಣ್ಯ ವ್ಯಕ್ತಿಗಳನ್ನು ಸಂರ್ಪಸುವಿರಿ. ಶುಭಸಂಖ್ಯೆ: 1
ಕನ್ಯಾ: ಶತ್ರುಗಳಿಂದ ಜಯ. ನಾನಾ ರೀತಿಯ ಜನರ ಭೇಟಿ. ಉದ್ಯೋಗಸ್ಥ ಮಹಿಳೆಯರಿಗೆ ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 2
ತುಲಾ: ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುವುದು. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ. ಕೆಲಸಗಳನ್ನು ಶ್ರಮವಹಿಸಿ ಮಾಡುವಿರಿ. ಶುಭಸಂಖ್ಯೆ: 8
ವೃಶ್ಚಿಕ: ಹಳೆಯ ಸ್ನೇಹಿತರ ಜೀವನದಲ್ಲಿ ಅನಿರೀಕ್ಷಿತ ತಿರುವು. ಕೈಗೊಂಡ ಕೆಲಸಗಳಲ್ಲಿ ವಿಘ್ನ. ಗುಪ್ತವಾಗಿ ಪಾಪಕಾರ್ಯ ಘಟಿಸಬಹುದು. ಶುಭಸಂಖ್ಯೆ: 6
ಧನುಸ್ಸು: ಸಹೋದ್ಯೋಗಿಗಳೊಂದಿಗೆ ಪ್ರೀತಿಯಿಂದ ಇರುವಿರಿ. ಕುಲದೇವರ ಸ್ಥಳಕ್ಕೆ ಹೋಗುವಿರಿ. ಪದವಿ ಪ್ರಾಪ್ತಿಗೆ ಹಿತ ಶತ್ರುಗಳಿಂದ ಅಡ್ಡಿ. ಶುಭಸಂಖ್ಯೆ: 4
ಮಕರ: ಶತ್ರುಗಳನ್ನು ಜಯಿಸುವಿರಿ. ಸಮಾಜದಲ್ಲಿ ಧೈರ್ಯವಾಗಿ ಮಾತನಾಡುವಿರಿ. ನಿಮ್ಮ ಪ್ರತಿಭೆಗೆ ಸೂಕ್ತವಾದ ಮನ್ನಣೆ ಸಿಗುವುದು. ಶುಭಸಂಖ್ಯೆ: 6
ಕುಂಭ: ಅವಿವಾಹಿತರಿಗೆ ವಿವಾಹ ಯೋಗ. ತಂದೆಗೆ ಅನಾರೋಗ್ಯ. ದಾಂಪತ್ಯ ಜೀವನದಲ್ಲಿ ಬಹಳ ದಿನಗಳ ನಂತರ ಶುಭ ಸುದ್ದಿ. ಶುಭಸಂಖ್ಯೆ: 5
ಮೀನ: ಕೃಷಿ ಉತ್ಪನ್ನಗಳ ವ್ಯಾಪಾರದ ವಿಚಾರಗಳಲ್ಲಿ ಆಸಕ್ತಿ. ಸಜ್ಜನರಲ್ಲಿ ಮನ್ನಣೆ. ಹೋಟೆಲ್ ಉದ್ಯಮದಲ್ಲಿ ಧನ ನಷ್ಟವಾಗುವ ಸಂಭವ. ಶುಭಸಂಖ್ಯೆ: 6