ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವಿಪರೀತ ಖರ್ಚು, ಅನಿರೀಕ್ಷಿತವಾಗಿ ಅದೃಷ್ಟ ಒಲಿದು ಬರಲಿದೆ

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ಮಕ್ಕಳಿಂದ ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆಯ ಆಲೋಚನೆ. ಶುಭಸಂಖ್ಯೆ: 5

ವೃಷಭ: ಅನಿರೀಕ್ಷಿತ ಪ್ರಯಾಣ ಮಾಡಬೇಕಾದೀತು. ತಾಯಿಗೆ ಅನಾರೋಗ್ಯ ಸಮಸ್ಯೆ ಕಾಡುವುದು. ಸಾಲ ಮಾಡುವ ಆಲೋಚನೆ. ಶುಭಸಂಖ್ಯೆ:4

ಮಿಥುನ: ಅಧಿಕ ಧನ ನಷ್ಟವಾದೀತು. ಪ್ರೀತಿ ಪ್ರೇಮದ ವಿಷಯಗಳಿಂದ ಸಮಸ್ಯೆ. ಮಕ್ಕಳ ನಡವಳಿಕೆಯಲ್ಲಿ ಬೇಸರ. ಸಂತಾನ ದೋಷ. ಶುಭಸಂಖ್ಯೆ: 8

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಆತ್ಮಗೌರವಕ್ಕೆ ಧಕ್ಕೆ . ಆಕಾಂಕ್ಷೆಗಳಿಗೆ ವಿರೋಧ. ಸ್ಪರ್ಧಾತ್ಮಕ ವಿಷಯಕ್ಕೆ ಅಡೆತಡೆ. ಶುಭಸಂಖ್ಯೆ: 2

ಸಿಂಹ: ಮಾನಸಿಕ ವೇದನೆ, ಸಂಕಟ, ಪಾಲುದಾರಿಕೆಯಲ್ಲಿ ನಷ್ಟ. ಸಮುದ್ರ ಉತ್ಪನ್ನಗಳ ವ್ಯವಹಾರದಲ್ಲಿ ಯಶ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ:3

ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ. ಉದ್ಯೋಗ ಲಾಭವಾಗಲಿದೆ. ಒಡವೆ ವಸ್ತ್ರಾಭರಣ ಖರೀದಿ ಮಾಡುವಿರಿ. ಶುಭ ಸಮಾಚಾರ. ಶುಭಸಂಖ್ಯೆ: 4

ತುಲಾ: ಉತ್ತಮ ಧನ ಸಂಪಾದನೆ ಮತ್ತು ಲಾಭ. ಅನಿರೀಕ್ಷಿತವಾಗಿ ಅದೃಷ್ಟ ಒಲಿದು ಬರುವುದು. ಪೂರ್ವಿಕರ ಗುಪ್ತನಿಧಿ ಲಭಿಸುವುದು. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ ಸಾಧ್ಯತೆ. ಅವಕಾಶಗಳು ಕೈ ತಪ್ಪುವ ಸಂಭವ. ಉದ್ಯೋಗ ಸ್ಥಳದಲ್ಲಿ ಸಮಸ್ಯೆ ಕಾಡುವವು. ಸಾಲಬಾಧೆ. ಶುಭಸಂಖ್ಯೆ: 8

ಧನುಸ್ಸು: ಸಂಕಷ್ಟ ಅನುಭವಿಸುವಿರಿ. ಪ್ರೇಮದ ವಿಷಯಗಳಿಂದ ಚಿಂತೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಧಿಕ ನಷ್ಟ ಮತ್ತು ಸಮಸ್ಯೆ. ಶುಭಸಂಖ್ಯೆ: 3

ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗಬಹದು. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಲಾಭ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 2

ಕುಂಭ: ಸಾಹಿತಿಗಳು, ಪತ್ರಕರ್ತರಿಗೆ ವಿಶೇಷ ದಿನ. ಮಕ್ಕಳ ನಡವಳಿಕೆಯಿಂದ ಬೇಸರ. ಖರ್ಚು. ಮನೆಯ ವಾತಾವರಣದಲ್ಲಿ ಸಂತಸ. ಶುಭಸಂಖ್ಯೆ:4

ಮೀನ: ಸಾಲ ಮಾಡುವ ಪರಿಸ್ಥಿತಿ ಉದ್ಭವಿಸೀತು. ಶತ್ರು ದಮನ. ಅಧಿಕ ಖರ್ಚು. ಪ್ರಯಾಣದಲ್ಲಿ ಅಡೆತಡೆ. ಸಂಜೆ ಆರ್ಥಿಕ ಅನುಕೂಲ.ಶುಭಸಂಖ್ಯೆ: 9