ನ್ಯೂಸ್

ಈ ರಾಶಿಯವರಿಗಿಂದು ಅನಿರೀಕ್ಷಿತ ಲಾಭ ದೊರೆತು ಸಂತಸ: ನಿತ್ಯಭವಿಷ್ಯ

ಮೇಷ: ಹಣಕಾಸು ವಿಚಾರವಾಗಿ ಕಲಹ. ಕುಟುಂಬದಲ್ಲಿ ಜಗಳ. ಕೆಲಸ ಕಾರ್ಯಗಳಲ್ಲಿ ಅಡೆತಡೆ. ವ್ಯಾಪಾರೋದ್ಯಮದಲ್ಲಿ ಕಿರಿಕಿರಿ. ಶುಭಸಂಖ್ಯೆ: 9

ವೃಷಭ: ಹಿರಿಯ ಸಹೋದರನಿಂದ ನಷ್ಟ. ದಾಂಪತ್ಯದಲ್ಲಿ ಜಗಳ. ಮಾನಸಿಕ ನೆಮ್ಮದಿ ಹಾಳಾಗುವುದು. ನಿದ್ರಾಭಂಗ ಅನುಭವಿಸುವಿರಿ. ಶುಭಸಂಖ್ಯೆ: 8

ಮಿಥುನ: ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ತೊಂದರೆಗೆ ಸಿಲುಕುವಿರಿ. ಭೂಮಿ ವಿಚಾರವಾಗಿ ಕೋರ್ಟ್​ಗೆ ಅಲೆದಾಡಬೇಕಾಗುವುದು. ಶುಭಸಂಖ್ಯೆ: 2

ಕಟಕ: ಕೆಲಸ ಕಾರ್ಯಗಳಲ್ಲಿ ಅಡೆತಡೆ. ಉದ್ಯೋಗದಲ್ಲಿ ಹಿನ್ನಡೆಯಾದರೂ ಪ್ರಗತಿ. ತಂದೆಯಿಂದ ಕಿರಿಕಿರಿ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 6

ಸಿಂಹ: ದೂರ ಪ್ರಯಾಣ ಸಾಧ್ಯತೆ. ಆಸ್ತಿ ವಿಚಾರದಲ್ಲಿ ತಂದೆ-ಮಕ್ಕಳಲ್ಲಿ ಕಲಹ, ಆಯುಷ್ಯಕ್ಕೆ ಕಂಟಕದ ಸಾಧ್ಯತೆ ಇದೆ, ಎಚ್ಚರಿಕೆ. ಶುಭಸಂಖ್ಯೆ: 3

ಕನ್ಯಾ: ಅನಿರೀಕ್ಷಿತ ಲಾಭ ದೊರೆತು ಸಂತಸ. ದಾಂಪತ್ಯದಲ್ಲಿ ವಿರಸ. ಅನಗತ್ಯ ಕಿರಿಕಿರಿ. ಮಾಂಗಲ್ಯಕ್ಕೆ ಕುತ್ತು ಬರುವ ಸಾಧ್ಯತೆ. ಶುಭಸಂಖ್ಯೆ: 7

ತುಲಾ: ಸಂಗಾತಿಯೇ ಶತ್ರುವಾಗುವರು. ಸಾಲ ಬಾಧೆಗಳಿಂದ ತೊಂದರೆ. ಮನಸ್ಸಿಗೆ ಬೇಸರವಾಗಲಿದೆ. ನೀವಾಡುವ ಮಾತಿನಲ್ಲಿ ಎಚ್ಚರ. ಶುಭಸಂಖ್ಯೆ: 4

ವೃಶ್ಚಿಕ: ಅಮೂಲ್ಯ ವಸ್ತುಗಳ ಕಳ್ಳತನ. ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗಕ್ಕೆ ರಜೆ ಹಾಕುವಿರಿ. ಮೇಲಾಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 2

ಧನುಸ್ಸು: ಅವಮಾನಕ್ಕೆ ಗುರಿಯಾಗುವಿರಿ. ಮಕ್ಕಳಿಂದ ತೊಂದರೆ. ನೆಮ್ಮದಿ ಇಲ್ಲದ ಜೀವನ ಬೇಸರ ತರುವುದು. ನಿದ್ರಾಭಂಗ. ಶುಭಸಂಖ್ಯೆ: 4

ಮಕರ: ಸ್ಥಿರಾಸ್ತಿ-ವಾಹನ ಪ್ರಾಪ್ತಿ. ಕುಟುಂಬದಲ್ಲಿ ವೈಮನಸ್ಸು. ಪ್ರೇಮದಲ್ಲಿ ತೊಂದರೆಯಾಗಲಿದೆ. ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 3

ಕುಂಭ: ಬಂಧುಗಳಿಂದ ಕಿರಿಕಿರಿ. ಮಾನಸಿಕ ನೆಮ್ಮದಿ ಕಳೆದುಕೊಳ್ಳುವಿರಿ. ಕುಟುಂಬದಿಂದ ದೂರ ಉಳಿಯುವ ಆಲೋಚನೆ. ಶುಭಸಂಖ್ಯೆ: 9

ಮೀನ: ಹಣಕಾಸು ವಿಚಾರವಾಗಿ ಕಲಹ. ದಾಯಾದಿಗಳೊಂದಿಗೆ ಜಗಳದ ಸಾಧ್ಯತೆ. ಬಂಧು- ಮಿತ್ರರಲ್ಲಿ ವೈಮನಸ್ಸು ತಲೆದೋರೀತು. ಶುಭಸಂಖ್ಯೆ: 6